Home> Karnataka
Advertisement

Ration Card : ಆಹಾರ ಇಲಾಖೆಯಿಂದ 1.31 ಲಕ್ಷ ಪಡಿತರ ಚೀಟಿ ರದ್ದು..!?

 ಇನ್ನು ಅರ್ಹ ಪಟ್ಟಿಯಲ್ಲಿ ಮೃತಪಟ್ಟ 4.43 ಫಲಾನುಭವಿಗಳು ಇದ್ದಾರೆ. 

Ration Card : ಆಹಾರ ಇಲಾಖೆಯಿಂದ 1.31 ಲಕ್ಷ ಪಡಿತರ ಚೀಟಿ ರದ್ದು..!?

ಬೆಂಗಳೂರು : ರಾಜ್ಯ ಆಹಾರ ಇಲಾಖೆಯಿಂದ ನಡೆದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳ ಪರಿಶೀಲನಾ ಕಾರ್ಯದಲ್ಲಿ 1 .31 ಲಕ್ಷ ಪಡಿತರ ಚೀಟಿಗಳನ್ನ ಪತ್ತೆ ಹಚ್ಚಿದ್ದಾರೆ.

ಈ ಕಾರ್ಡ್ ಗಳಿಗೆ ಮೇ ತಿಂಗಳಿಂದ ಪಡಿತರ ರೇಷನ್ ವಿತರಣೆ ನಿಲ್ಲಿಸಲು ನಿರ್ಧರಿಸಲಾಗಿದೆ. ಇನ್ನು ಅರ್ಹ ಪಟ್ಟಿಯಲ್ಲಿ ಮೃತಪಟ್ಟ 4.43 ಫಲಾನುಭವಿಗಳು ಇದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮತ್ತು  ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಆಹಾರ ಇಲಾಖೆ(Food Department)ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಒಂದೇ ದಿನದಲ್ಲಿ 39,047 ಕೊರೊನಾ ಪ್ರಕರಣಗಳು ದಾಖಲು

ಯಾವುದೇ ಅನರ್ಹರಿಗೆ ಅಥವಾ ಮೃತಪಟ್ಟವರ ಹೆಸರಿಗೆ ಮೇ ತಿಂಗಳ ರೇಷನ್(Ration) ವಿತರಣೆ ಹಂಚಿಕೆಯಾದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಮೂಗಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡ ಶಿಕ್ಷಕನ ಸಾವು

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್(APL Card) ಪಡೆಯಲು ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಆಧರಿಸಿ ಜನೆವರಿ. 30ರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನರ್ಹರನ್ನು ಪತ್ತೆ ಮಾಡುವ ಕಾರ್ಯ ಇಲಾಖೆ ಆರಂಭಿಸಿತ್ತು. ದೂರುಗಳು ಬಂದ ಪಡಿತರ ಚೀಟಿಗಳ ಬಗ್ಗೆ ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ಅನರ್ಹ ಕಾರ್ಡ್‌ಗಳನ್ನು ಗುರುತಿಸಿದ್ದರು.

ಇದನ್ನೂ ಓದಿ :  Umesh Katti : ಪಡಿತರ ಚೀಟಿ ಅಕ್ಕಿ ಕೇಳಿದ ರೈತನಿಗೆ 'ಸತ್ತು ಹೋಗು' ಎಂದ ಆಹಾರ ಸಚಿವ!

ಪಡಿತರ ಚೀಟಿ ಜೊತೆ ಲಿಂಕ್‌ ಆಗಿರುವ ಫಲಾನುಭವಿಗಳ ಆಧಾರ್‌ ಕಾರ್ಡ್(Aadhar Card) ನಂಬರ್  ಆಧರಿಸಿ, ಆದಾಯ ತೆರಿಗೆ ಪಾವತಿದಾರರ ಮತ್ತು ಸಾಮಾಜಿಕ ಪಿಂಚಣಿ ಪಡೆಯುವವರ ಹೆಸರುಗಳನ್ನು ಪಡೆದುಕೊಂಡು ಇಲಾಖೆ ಪರಿಶೀಲನೆ ನಡೆಸಿದೆ. ಈ ವೇಳೆ ಅನರ್ಹ ಪಡಿತರ ಚೀಟಿದಾರರನ್ನು ಗುರುತಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More