Home> Karnataka Assembly Election
Advertisement

Zee Kannada News Opinion Poll Live:  ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಕನ್ನೇ ಬದಲಿಸುತ್ತವೆಯೇ ಈ ಅಂಶಗಳು..?

ಚುನಾವಣೆ ಯಾವಾಗಲೂ ಕೇವಲ ಒಂದೇ ವಿಷಯದ ಮೇಲೆ ಕೇಂದ್ರಿತವಾಗಿರುವುದಿಲ್ಲ, ಇದರಲ್ಲಿ ಹಲವು ಅಂಶಗಳು ಮೇಳೈಸಿರುತ್ತವೆ.ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಕೂಡ ಇವುಗಳ ಲೆಕ್ಕಾಚಾರದ ಮೇಲೆಯೇ ಜನರನ್ನು ತಲುಪುವ ಬಗೆಯನ್ನು ಮತ್ತು ತನ್ನ ಚುನಾವಣಾ ಪ್ರಚಾರದ ವೈಖರಿಯನ್ನು ನಿರ್ಧರಿಸುತ್ತವೆ.

Zee Kannada News Opinion Poll Live:  ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಕನ್ನೇ ಬದಲಿಸುತ್ತವೆಯೇ ಈ ಅಂಶಗಳು..?

ಬೆಂಗಳೂರು: ಚುನಾವಣೆ ಯಾವಾಗಲೂ ಕೇವಲ ಒಂದೇ ವಿಷಯದ ಮೇಲೆ ಕೇಂದ್ರಿತವಾಗಿರುವುದಿಲ್ಲ, ಇದರಲ್ಲಿ ಹಲವು ಅಂಶಗಳು ಮೇಳೈಸಿರುತ್ತವೆ.ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳು ಕೂಡ ಇವುಗಳ ಲೆಕ್ಕಾಚಾರದ ಮೇಲೆಯೇ ಜನರನ್ನು ತಲುಪುವ ಬಗೆಯನ್ನು ಮತ್ತು ತನ್ನ ಚುನಾವಣಾ ಪ್ರಚಾರದ ವೈಖರಿಯನ್ನು ನಿರ್ಧರಿಸುತ್ತವೆ.

ಈ ಹಿನ್ನೆಲೆಯಲ್ಲಿ ಜೀ ಕನ್ನಡ ನ್ಯೂಸ್ ತನ್ನ ಚುನಾವಣಾ ಸಮೀಕ್ಷೆಯಲ್ಲಿ ರಾಜಕೀಯ ಧ್ರುವೀಕರಣ ಮಾಡಬಲ್ಲಂತಹ ಕೆಲವು ಪ್ರಮುಖ ಅಂಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಉದ್ಯೋಗ, ರಾಜ್ಯ ಸರ್ಕಾರದ ಕಾರ್ಯ ವೈಖರಿ, ನರೇಂದ್ರ ಮೋದಿ, ಸ್ಥಳೀಯ ವಿಷಯ,ಅಭಿವೃದ್ದಿ ಕಾರ್ಯ, ಮುಖ್ಯಮಂತ್ರಿ ಅಭ್ಯರ್ಥಿ, ಜಾತಿ, ಉತ್ತಮ ಉತ್ತರಾಧಿಕಾರಿಯಂತಹ ಅಂಶಗಳನ್ನು ಜನರ ಮುಂದಿಡುವುದರ ಮೂಲಕ ಅವರ ಅಭಿಪ್ರಾಯವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿದೆ.fallbacks

ಇದರಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಜೀ ಕನ್ನಡ ನ್ಯೂಸ್ ಜನರ ಮುಂದಿಟ್ಟಾಗ ಶೇ 12 ರಷ್ಟು ಇದು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ,ಅದೇ ರೀತಿಯಾಗಿ ರಾಜ್ಯ ಸರ್ಕಾರದ ಕೆಲಸವು ಶೇ 11 ರಷ್ಟು ಪರಿಣಾಮ ಬೀರುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಇನ್ನೂ ನರೇಂದ್ರ ಮೋದಿ ಅವರ ಪರಿಣಾಮವು ಚುನಾವಣೆಯಲ್ಲಿ ಶೇ 10 ರಷ್ಟು ಇರಲಿದೆ ಮತ್ತು ಸ್ಥಳೀಯ ವಿಷಯ ಶೇ 8 ರಷ್ಟು ಪರಿಣಾಮ ಬೀರುತ್ತದೆ ಎಂದು ಹೇಳಿದರು.fallbacks

ಇದರ ಜೊತೆಗೆ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳು ಶೇ 7 ರಷ್ಟು ಪರಿಣಾಮ ಬೀರಲಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವು ಶೇ 6 ರಷ್ಟು ಅದೇ ರೀತಿಯಾಗಿ ಉತ್ತಮ ಉತ್ತರಾಧಿಕಾರಿ ವಿಚಾರವು ಶೇ 6 ರಷ್ಟು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More