Home> Karnataka Assembly Election
Advertisement

"ಇಡಿ, ಸಿಬಿಐ ,ಐಟಿ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ"

ನಾ ಖಾವುಂಗಾ ನಾ ಖಾನೇ ದೂಂಗ ಇದು ಪ್ರಧಾನಿ ಮೋದಿ ಜೀ ಅವರ ಸ್ಲೋಗನ್ ಆಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಭ್ರಷ್ಟರಿಗೆ ಮಣೆ ಆಕ್ತಾ ಇದ್ದಾರೆ. ಮೋದಿ ಮತ್ತುಅಮಿತ್ ಶಾ ಅವರು ಈ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ. ಇಡಿ, ಸಿಬಿಐ , ಐಟಿ ಎಂಬ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ನಡೆಸಿದರು.

ಬೆಂಗಳೂರು: ನಾ ಖಾವುಂಗಾ ನಾ ಖಾನೇ ದೂಂಗ ಇದು ಪ್ರಧಾನಿ ಮೋದಿ ಜೀ ಅವರ ಸ್ಲೋಗನ್ ಆಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಭ್ರಷ್ಟರಿಗೆ ಮಣೆ ಆಕ್ತಾ ಇದ್ದಾರೆ. ಮೋದಿ ಮತ್ತುಅಮಿತ್ ಶಾ ಅವರು ಈ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ. ಇಡಿ, ಸಿಬಿಐ , ಐಟಿ ಎಂಬ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಟೀಕಾ ಪ್ರಹಾರ ನಡೆಸಿದರು.

ಅವರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು

ನಾನು ಚುನಾವಣೆ ಪ್ರಚಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆ ದೇಶಕ್ಕೆ ಮತ್ತು ರಾಜ್ಯಕ್ಕೆ ಬಹಳ ಮಹತ್ತರವಾದ ಚುನಾವಣೆ. ಈ ಪ್ರಸುತ್ತ ವಿದ್ಯಾಮಾನಗಳನ್ನು ನಾವು ಅವಲೋಕಿಸುತ್ತಿರುವ ಸಂದರ್ಭದಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇರುತ್ತದೋ ಅಥವಾ ಇಲ್ಲವೋ ಅನ್ನುವಂತಹ ವಾತವರಣ ಸೃಷ್ಟಿಯಾಗಿದೆ. ಸಂವಿಧಾನದ ಅಡಿಯಲ್ಲಿ ನಮ್ಮೆಲ್ಲರ ರಕ್ಷಣೆ ಮಾಡಲಾಗುತ್ತದೋ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ. ಅದಕ್ಕಾಗಿ ಈ ಚುನಾವಣೆ ಮಹತ್ವದ್ದಾಗಿದೆ. 

ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.  ಅದರ ಜತೆಯಲ್ಲೇ ಸ್ಥಳೀಯ ಸರ್ಕಾರ ಇದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಹಜವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ, ರಾಜ್ಯದ ಆಡಳಿತ ಕಾರ್ಯವೈಖರಿಗಳ ಬಗ್ಗೆ ಮತ್ತು ಅಭಿವೃದ್ಧಿಯ ಬಗ್ಗೆ  ಮಾತನಾಡಲೇಬೇಕಾಗುತ್ತದೆ. 

ಇಂದು ಕರ್ನಾಟಕದಲ್ಲಿ ಲಂಚ ಕೊಡದೇ ಯಾವುದೇ ಕೆಲಸ ಆಗುವುದಿಲ್ಲ. ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರ ಹಬ್ಬಿದೆ. ಕರ್ನಾಟಕ ರಾಜ್ಯ ತನ್ನ ಅಭಿವೃದ್ಧಿ, ಆಡಳಿತ ಕಾರ್ಯವೈಖರಿ, ಬಂಡವಾಳ  ಹೂಡಿಕೆಗೆ ಹೆಸರುವಾಸಿಯಾಗಿತ್ತು. ಆದರೆ ರಾಜ್ಯ ತನ್ನ ಒಂದೊಂದೇ ಘನತೆಯನ್ನು ಕಳೆಕೊಳ್ಳುತ್ತಿದೆ.  ಇದಕ್ಕೆ ಕಾರಣ 40% ಕಮಿಷನ್ ಭ್ರಷ್ಟಾಚಾರ. ಲಂಚ ಕೊಟ್ರೆ ಎಲ್ಲ ಕೆಲಸ ಆಗುತ್ತದೆ ಎನ್ನುವುದು ಜಗಜ್ಜಾಹೀರಾಗಿದೆ. ಇದಕ್ಕೆ ಸಾಕ್ಷಿ ನಾವು ಕೊಡಬೇಕಾಗಿಲ್ಲ. ರಾಜ್ಯದ ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ ರಾಜ್ಯದ ಬಿಜೆಪಿ ಸರ್ಕಾರದ ೪೦% ಕಮಿಷನ್ ಬಗ್ಗೆ ಪ್ರಧಾನಿಗಳಿಗೆ, ರಾಷ್ಟ್ರಪತಿಗಳಿಗೆ, ರಾಜ್ಯದ ರಾಜ್ಯಪಾಲರಿಗೆ ಹಾಗೂ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು ಬೇಕು. ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೆಗೆದು ಹಾಕುವುದೇ ಸೂಕ್ತ ಎಂದು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. 

ನಾ ಖಾವುಂಗಾ ನಾ ಖಾನೇ ದೂಂಗ ಇದು ಪ್ರಧಾನಿ ಮೋದಿ ಜೀ ಅವರ ಸ್ಲೋಗನ್ ಆಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಭ್ರಷ್ಟರಿಗೆ ಮಣೆ ಆಕ್ತಾ ಇದ್ದಾರೆ. ಮೋದಿ ಮತ್ತುಅಮಿತ್ ಶಾ ಅವರು ಈ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ. ಇಡಿ, ಸಿಬಿಐ , ಐಟಿ ಎಂಬ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ. ಈ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ.

ನಮ್ಮ ರಾಜ್ಯದಲ್ಲಿ ಸುಮಾರು 25 ಲಕ್ಷ ಯುವ ನಿರುದ್ಯೋಗಿಗಳು ಇದ್ದಾರೆ. ಅನೇಕ ವೃತ್ತಿಪರರಿಗೆ ಉದ್ಯೋಗ ಸಿಗ್ತಾ ಇಲ್ಲ. ಡಬಲ್ ಇಂಜಿನ ಸರ್ಕಾರಕ್ಕೆ ಇದರ ಬಗ್ಗೆ ಚಿಂತೆಯಿಲ್ಲ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,70,000 ಹುದ್ದೆಗಳು ಖಾಲಿ ಇದ್ದು, ಈ  ಉದ್ಯೋಗಳನ್ನು ಯಾಕೆ ತುಂಬುತ್ತಿಲ್ಲ. ಇಲ್ಲಿ 25 ಲಕ್ಷ ನಿರುದ್ಯೋಗಿ ಡಾಕ್ಟರ್ ಹಾಗೂ ಎಂಜಿನಿಯರ್ ಪದವೀಧರರಿದ್ದಾರೆ. 100 ಕೋಟಿ ಜನ ಶಿಕ್ಷಿತರು ಇದ್ದಾರೆ. 7.70,000 ಜನ ಸರ್ಕಾರಿ ನೌಕರಿಯಲ್ಲಿದ್ದಾರೆ. 270,000 ಹುದ್ದೇ ಖಾಲಿ ಇವೆ. ಆದರೂ ಯಾಕೆ ತುಂಬಲ್ಲ?  ಈ ಹುದ್ದೆಗಳನ್ನು ತುಂಬಿದರೆ ಅವರ ಕುಟುಂಬ ಬದುಕಿಸಬಹುದು. ಅವರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬಹುದು. ಈ ಉದ್ಯೋಗಗಳು ಸರ್ಕಾರದ ಕೈಯಲ್ಲಿದ್ದು, ಹೊಸದಾಗಿ ಸೃಷ್ಟಿ ಮಾಡುವ ಅಗತ್ಯವಿಲ್ಲ.  ಈ ಸರ್ಕಾರಿ ಹುದ್ದೆಗಳನ್ನು ತುಂಬಿದರೆ, sc and st  ಮತ್ತು ಹಿಂದುಳಿದ ವರ್ಗದವರಿಗೆ ಶೇ, 50 ರಷ್ಟು ಈ ವರ್ಗದವರಿಗೆ ಹೋಗುತ್ತೆ. ಅದಕ್ಕಾಗಿ ಬಿಜೆಪಿ ಸರ್ಕಾರ ಈ ಹುದ್ದೆಗಳ ನೇಮಕಾತಿಗೆ  ಅಧಿಸೂಚನೆ ಮಾಡಿಲ್ಲ. ಅವರಿಗೆ ಬೇಕಾದ ಜನರಿಗೆ ಉದ್ಯೋಗ ತುಂಬಲಿಕ್ಕೆ ಆಗ್ತಾ ಇಲ್ಲಂತ ಹೇಳಿ ಸರ್ಕಾರ ತಳ್ಳುಕೊಂಡು ಹೋಗ್ತಾ ಇದೆ.  ಇದರಿಂದ ಮಕ್ಕಳಿಗೆ ಈಗ ದೊಡ್ಡ ಹೊಡೆತ ಬೀಳುತ್ತಿದೆ. ಅದೇ ರೀತಿ ರಾಜ್ಯದ ಬಜೆಟ್ನಲ್ಲಿ 300,000 ಲಕ್ಷ ಕೋಟಿ ಇದೆ. 2000 ಕೋಟಿ ಮೂಲಭೂತ ಸೌಕರ್ಯಕ್ಕೆ ಹೋಗ್ತಾ ಇದೆ. ಅದರಲ್ಲಿ 40% ಕಮಿಷನ್ ತೆಗೆದ್ರೆ ಯಾವ ಗುಣಮಟ್ಟವನ್ನು ಕಾಪಾಡುಕೊಳ್ಳಬಹುದು. ಬಿಜೆಪಿಯ ಭ್ರಷ್ಟ್ರಾಚರ ನಿಮ್ಮ ಹೆಗಲ ಮೇಲೆ ಬೀಳುತ್ತಿದೆ. ಆದರೆ ಬಿಜೆಪಿ ಮಾತ್ರ ಇನ್ನೋಬ್ಬರ ಕಡೆ ಬೊಟ್ಟು ಮಾಡ್ತ ಇದ್ದೀರಾ? 

ಕರ್ನಾಟಕಕ್ಕೆ 9 ವರ್ಷದಲ್ಲಿ ಮಂಗಳೂರು ಸೇರಿದಂತೆ, ಬೆಳಗಾವಿ, ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ಈ ಜಿಲ್ಲೆಗಳಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ. ಎಷ್ಟು ಹೂಡಿಕೆ ಮಾಡಿ ಹಣವನ್ನು ತರಿಸಿಕೊಟ್ಟಿದ್ದೀರಿ. ನಾವು ಕೊಡುವ ಜಿಎಸ್ಟಿ ಹಣದಲ್ಲಿ ನಮಗೆ 10% ವಾಪಸ್ ನಮಗೆ ಕೇಂದ್ರದಿಂದ ಬರೋದಿಲ್ಲ. ಹೂಡಿಕೆ ಬಂದರೆ ಉದ್ಯೋಗವಾಕಶಗಳು ಸಿಗುತ್ತದೆ, ಉದ್ಯೋವಕಾಶಗಳು ಸಿಕ್ಕರೆ ಉತ್ತಮ ವೇತನ ಮತ್ತು ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತದೆ. ಹಾಗೆಯೇ ವ್ಯಾಪರ ವಹಿವಾಟು ಹೆಚ್ಚಳ ವಾಗುತ್ತದೆ. ಆದರೆ ಬೇಸರ ಸಂಗತಿ ಏನೆಂದರೆ ಡಬಲ್ ಇಂಜಿನ್ ಸರ್ಕಾರ ಇದಕ್ಕೆ ಗಮನಹರಿಸಿಲ್ಲ. 

ಡಬಲ್ ಎಂಜಿನ್ ಸರ್ಕಾರ ಅಂತ ಹೇಳ್ತಿರಾ ಅಲ್ವ, ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ. ಎಂಜಿನ್ ಉತ್ಪಾದನ ಘಟಕ ವಾರಾಣಸಿಯಲ್ಲಿದೆ. ಏಕೆಂದರೆ ನಾನು ರೈಲ್ವೇ ಸಚಿವನಾಗಿದ್ದಾಗ ವಾರಣಸಿ ರೈಲ್ವೇ ಎಂಜಿನ್ ಪ್ಯಾಕ್ಟರಿಗೆ ಹೋಗಿದ್ದೆ. ಆದ್ದರಿಂದ ಡಬಲ್ ಎಂಜಿನ್ ನಲ್ಲಿ ಒಂದು ಎಂಜಿನ್ನಂತೂ ಕೆಟ್ಟು ಹೋಗಿದೆ ೪೦% ಕಮಿಷನ್ನನಿಂದ ಆದ್ದರಿಂದ ಪದೇಪದೇ ಯಾಕೆ ಡಬಲ್ ಎಂಜಿನ್ ಸರ್ಕಾರ ಹೇಳ್ತಾ ಇದ್ದಾರೆ ಅಂತ. ಸಿಂಗಲ್ ಎಂಜಿನ್ 40% ಇದ್ದರೆ ಡಬಲ್ ಎಂಜಿನ್ 80% ಪರ್ಸೆಂಟಾ? 

ಹೀಗಾಗಿ ಜನರಿಗೆ ಸುಳ್ಳು ಹೇಳೋದು, ಜನರಿಗೆ ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳಿ ಜನರಿಗೆ ಗಿಮಿಕ್ ಮಾಡೋದು. ನೀವು ದೇಶಕ್ಕಾಗಿ ಏನು ಮಾಡಿದ್ದೀರಿ ಅದು ಜನತೆಗೆ ತಿಳಿಸಿ, ನಿಮ್ಮ ಸರ್ಕಾರದ ಸಾಧನೆ, ಅಭಿವೃದ್ಧಿ ಕಾರ್ಯಕ್ರಮ ಹಾಗೆಯೇ ನಿಮ್ಮ ತತ್ವ ಸಿದ್ದಾಂತಗಳನ್ನು ಹೇಳಿಕೊಳ್ಳೀ, ನಾವು ಇಂತಹ ದೊಡ್ಡ ಯೋಜನೆಯೋಂದನ್ನು ತಂದಿದ್ದೇವೆ, ಮಂಗಳೂರಿಗೆ ಅಥವಾ ಕರ್ನಾಟಕಕ್ಕೆ ದೊಡ್ಡ ಇನ್ವೆಷ್ನೆಂಟನ್ನು ತಂದಿದ್ದೇವೆ ಅಂತ ಹೇಳಿಕೊಳ್ಳಿ ಸಂತೋಷ…. ಆದರೆ ಅದು ಯಾವುದೇ ಹೇಳಿಕೊಳ್ಳುವ ಸಾಧನೆಯೇ ಇಲ್ಲ. ನಾನು ಮೊನ್ನೇ ಬೆಂಗಳೂರಿನಲ್ಲಿ ನೋಡಿದೆ. ಬೆಂಗಳೂರಿನಿಂದ ವಾರಣಸಿಗೆ ರೈಲು ಬಿಟ್ಟಿದ್ದಾರೆ. ಅದು ನಾನು ರೈಲ್ವೇ ಮಂತ್ರಿಯಾಗಿದ್ದಾಗ ಸುಮಾರು 37 ಹೊಸ ರೈಲಗಳನ್ನು ಪ್ರಾರಂಭಿಸಿದೆವು, ವಾರಣಸಿಗೆ, ವೈಷ್ಣೋದೇವಿಗೆ, ಅಜ್ಮೀರಿಗೆ, ಹುಬ್ಬಳ್ಳಿಯಿಂದ ಹೈದರ್ ಬಾದಿಗೆ, ಬಾಂಬೆಗೆ ಅದೇರೀತಿ ರಾಜ್ಯದಲ್ಲಿ ಕಡೂರಿಗೆ ಆಮೇಲೆ ಹೊಸಪೇಟೆ ಮತ್ತು ಹರಿಹರಕ್ಕೆ ನಾನು ಲೆಕ್ಕ ಕೊಡಕ್ಕೆ ಹೋಗಲ್ಲ ಸಾಕಷ್ಟು. ನಾವು ಒಂದೇ ವರ್ಷದಲ್ಲಿ ರೈಲ್ವೇ ಮಾರ್ಗಗಳನ್ನು ಸಂಪೂರ್ಣವಾಗಿ ಕಾಮಗಾರಿ ಪೂರ್ಣಗೊಳಿಸಿದ್ದೇವು. ಇಷ್ಟೇಲ್ಲಾ ನಾವು ಕೊಟ್ಟೇವು. ಕೊಟ್ರುನೋ ಇಷ್ಟೇಲ್ಲಾ ಅವರಿಗೆಲ್ಲ ಕಾಣಿಸಲ್ಲ.

ಇದನ್ನೂ ಓದಿ: ಮಹಿಳೆಯರ ಜೊತೆ ಪ್ರಿಯಾಂಕ ಗಾಂಧಿ ಸಂವಾದ- ಇಂದಿರಾ ಹೊಗಳಿದಾಕೆಗೆ ಪ್ರೀತಿಯ ಅಪ್ಪುಗೆ 

ರಾಜ್ಯದಲ್ಲಿ ಸುಮಾರು 68000 ಶಿಕ್ಷಕರ ಹುದ್ದೆ ಖಾಲಿ ಇವೆ. ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಓದುವುತ್ತಿರುವ ಬಡಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಯಾಕೆ ಸಿಗ್ತಾದೆ. ಇರತಕ್ಕಂತಹ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡದ ಕಾರಣ ಸರ್ಕಾರಿ ಶಾಲೆಯಲ್ಲಿ ಕಳಪೆ ಫಲಿತಾಂಶ ಬರುತ್ತಿದೆ. 

 ಆದ್ದರಿಂದ ಈ ರಾಜ್ಯದ ಬಿಜೆಪಿ ಸರ್ಕಾರ ಶಿಕ್ಷಣದ ಕಡೆ ಲಕ್ಷ್ಯವಿಲ್ಲ, ಹೂಡಿಕೆ ಮೇಲೆ ಲಕ್ಷ್ಯವಿಲ್ಲ, ನಿರುದ್ಯೋಗ ಕಡೆ ಲಕ್ಷ್ಯವಿಲ್ಲ ಹಾಗೆಯೇ ಹಣದುಬ್ಬರದ ಕಡೆ ಲಕ್ಷ್ಯವಿಲ್ಲ ಹಣದುಬ್ಬರ ಗಗನಕ್ಕೇರುತ್ತೀದೆ. ಆಮೇಲೇ ಖಾಲಿ ಹುದ್ದೇ ಭರ್ತಿ ಮಾಡುವ ಬಗ್ಗೆ ಈ ಸರ್ಕಾರಕ್ಕೆ ಲಕ್ಷ್ಯವಿಲ್ಲ. ಅದೇ ರೀತಿ ಮಿತಿಮೀರಿದ ಭ್ರಷ್ಟಾಚಾರ ಇವೆಲ್ಲಾ ನೋಡಿದಾಗ ಈ ಬಿಜೆಪಿ ಸರ್ಕಾರ ಯಾರಿಗೂ ಬೇಕಾಗಿಲ್ಲ. ಅದಕ್ಕೆ ತೆಗೆಯಬೇಕಂತ ರಾಜ್ಯದ ಜನ ಮನಸ್ಸು ಮಾಡಿದ್ದಾರೆ. ಹಾಗಾಗಿ ಪತ್ರಕರ್ತರಾದ ತಾವುಗಳು ಪ್ರಚುರ ಪಡಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಟಿಕೆಟ್ ವಿತರಣೆ ವಿಚಾರದಲ್ಲಿ ಪಕ್ಷ ವಿಳಂಬ ಮಾಡಿದ್ದರ ಬಗ್ಗೆ ಅಸಮಧಾನವಿದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಡೆಮಾಕ್ರಸಿಯಲ್ಲಿ 185 ಸೀಟ್ ಎಲ್ಲರಿಗೂ ಮೊದಲೇ ನಾವು ಘೋಷಣೆ ಮಾಡಿದ್ದೇವೆ. ಕೇವಲ 43 ಸೀಟು ಮಾತ್ರ ನಿಂತು ಹೋಗಿತ್ತು. ಅದರಲ್ಲಿ ಪುನಃ ನಾವು 26 ಸೀಟನ್ನು ಕ್ಲಿಯರ್ ಮಾಡಿದ್ದೇವೆ.  ಕೆಲವು ಕಡೆ ನಾಯಕರ, ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿ ತಡವಾಗಿದೆ. ನಾವು ಏನು ಬಿಜೆಪಿ ಅವರು ಮಾಡಿದ್ದಾರೋ ಅವರ ಜತೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ’ ಎಂದು ತಿಳಿಸಿದರು.

ಮಾಜಿ ಶಾಸಕರಾದ ಮೊಹೀದೀನ್ ಬಾವ ಅವರು ಟಿಕೆಟನ್ನು ಸೇಲ್ಗೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಕೇಳಿದಾಗ, ‘ಅವರಿಗೆ ಟಿಕೆಟ್ ಸಿಗದ ಮೇಲೇ  ಈ ತರಹದ ಆರೋಪ ಸಾಮಾನ್ಯ. ಈ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ. ಆರೋಪಗಳು ಬರುವುದು ಸಹಜ ನಾವು ಎದುರಿಸುತ್ತೇವೆ’ ಎಂದು ತಿಳಿಸಿದರು. 

ಕಾಂಗ್ರೆಸ್ ಉಳಿದವರ ಕೈ ಕಾಲು ಹಿಡಿಯುತ್ತಿದ್ದಾರೆಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಆರೋಪದ ಬಗ್ಗೆ ಕೇಳಿದಾಗ, ‘ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ಬೇರೆಯವರ ತಟ್ಟೆಯಲ್ಲಿ ನೋಣ ಬಿದ್ದಿರುವುದು ನೋಡಿದಂತೆ ಬಿಜೆಪಿ ಅಧ್ಯಕ್ಷರು ಮಾತನಾಡಿದ್ದಾರೆ. ಇದಕ್ಕೆಲ್ಲಾ ಉತ್ತರ ಕೊಡೋಕೆ ಹೋಗಲ್ಲ. ನಾವು 150 ಸೀಟ್ ಗೆಲ್ಲಬೇಕಾಗಿದೆ. ಅಲ್ಪ ಬಹುಮತದಲ್ಲಿ ಗೆದ್ದಲ್ಲಿ ಶಾಸಕರನ್ನು ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಕಳ್ಳ ಮಾರ್ಗದಲ್ಲಿ ಸರ್ಕಾರ ರಚಿಸುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಕಾಂಗ್ರೆಸ್ ಪಡೆಯುವುದು ಅಗತ್ಯ  ಕರ್ನಾಟಕ, ಮಧ್ಯಪ್ರದೇಶ, ಗೋವಾ, ಮಣಿಪುರಾ, ಉತ್ತರಖಂಡದಲ್ಲಿ ಶಾಸಕರ ಕಳ್ಳತನದಿಂದ ಸರಕಾರ ರಚನೆಯಾಗಿದೆ. ಅಮದು ಮಾಡಿಕೊಂಡ ಶಾಸಕರನ್ನ ಬಿಜೆಪಿ ವಾಷಿಂಗ್ ಮೆಷೀನ್ ಗೆ ಹಾಕಿದ್ರೆ ಅವರು ಕ್ಲೀನ್ ಆಗ್ತಾರೆ’ ಎಂದು ತಿಳಿಸಿದರು.

ರಾಹುಲ್ ಗಾಂಧಿ ಪ್ರಕರಣವನ್ನು ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿ ಇದೆ ಎಂದು ಹೇಳಿದ್ದೀರಾ ಎಂದು ಕೇಳಿದಾಗ, ‘ಕೇವಲ ರಾಹುಲ್  ಗಾಂಧಿ ಪ್ರಕರಣ  ಒಂದೇ ಅಲ್ಲ. ನಿಮ್ಮ ಎದೆ ಮೇಲೆ ಕೈ ಇಟ್ಟು ಹೇಳಿ ದೇಶದಲ್ಲಿ ಸಂವಿಧಾನ ಅಪಾಯದಲ್ಲಿಲ್ವಾ? ಬಿಜೆಪಿ ವಿರುದ್ಧ ಸುದ್ದಿ ಮಾಡಿದ್ರೆ ನಿಮ್ಮ ಮಾಧ್ಯಮ ಬಂದ್ ಇರುತ್ತದೋ ಅಥವಾ ಚಾಲು ಇರುತ್ತದೋ ನೀವೇ ನೋಡಿ’ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Read More