Home> Karnataka Assembly Election
Advertisement

ಕರೆಂಟಿಲ್ಲ, ರಸ್ತೆಯಿಲ್ಲ, ಆಸ್ಪತ್ರೆಯಿಲ್ಲ... ಅದಕ್ಕೇ ನಮ್ಮ‌ ವೋಟು ಇಲ್ಲಾ ಅಂತಿದ್ದಾರೆ ಈ ಗ್ರಾಮಸ್ಥರು!!

Karnataka Assembly Election: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಪಂ ವ್ಯಾಪ್ತಿಯ ಪಡಿಸಲನತ್ತ ಮತ್ತು ತೇಕಾಣೆ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸದಿದ್ದಕ್ಕೇ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಕರೆಂಟಿಲ್ಲ, ರಸ್ತೆಯಿಲ್ಲ, ಆಸ್ಪತ್ರೆಯಿಲ್ಲ... ಅದಕ್ಕೇ ನಮ್ಮ‌ ವೋಟು ಇಲ್ಲಾ ಅಂತಿದ್ದಾರೆ ಈ ಗ್ರಾಮಸ್ಥರು!!

Karnataka Assembly Election 2023: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮ ಊರಿಗೆ ರಸ್ತೆ ಇಲ್ಲಾ, ವಿದ್ಯುತ್ ಸಂಪರ್ಕವಿಲ್ಲ, ಆಸ್ಪತ್ರೆಯೂ ಇಲ್ಲಾ ಆದ್ದರಿಂದ ಈ ಬಾರಿ ಮತವನ್ನೇ ಹಾಕಲ್ಲ ಎಂದು ಚುನಾವಣಾ ಬಹಿಷ್ಕಾರ ಮಾಡಿದ್ದಾರೆ ಈ ಗ್ರಾಮಸ್ಥರು.

ಹೌದು..., ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ಚರ ಬೆಟ್ಟ ಗ್ರಾಪಂ ವ್ಯಾಪ್ತಿಯ ಪಡಿಸಲನತ್ತ ಮತ್ತು ತೇಕಾಣೆ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸದಿದ್ದಕ್ಕೇ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ರಸ್ತೆ ಇಲ್ಲದೇ ನಡೆದೇ ಹೋಗಬೇಕಿರುವ ಹಿನ್ನೆಲೆಯಲ್ಲಿ ಈ ಊರಿಗೆ ಇನ್ನೂ ‌ಮತ ಕೇಳಲೂ ಕೂಡ ಯಾರು ಬಂದಿಲ್ಲವೆಂದು ತಿಳಿದುಬಂದಿದೆ.

ಇದನ್ನೂ ಓದಿ- ʼರಾಜ್ಯದಲ್ಲಿ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆʼ : ಶೆಟ್ಟರ್‌ ಶಾಕಿಂಗ್‌ ಹೇಳಿಕೆ

ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ವ್ಯಾಪ್ತಿಗೆ ಈ ಎರಡು ಗ್ರಾಮಗಳು ಒಳಪಡಲಿದ್ದು ರಸ್ತೆ ನಿರ್ಮಾಣಕ್ಕೆ ಅರಣ್ಯ ಕಾಯ್ದೆಗಳು ಅಡ್ಡಿಯಾಗಿದೆ.‌ ಆದ್ದರಿಂದ, ಈಗಲೂ ಅನಾರೋಗ್ಯಕೀಡಾದವರನ್ನು ಡೋಲಿ ಮೂಲಕ 10-14 ಕಿಮೀ ಹೊತ್ತೋಯ್ಯಬೇಕು, ವಿದ್ಯುತ್ ಸಂಪರ್ಕ ಇಲ್ಲ , ಇಷ್ಟೊಂದು ಅನ್ಯಾಯಕ್ಕೆ ಒಳಾಗಿರುವ ನಾವು ಮತದಾನ ಮಾಡಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ- ಡಿಕೆ ಸಹೋದರರು ಒಕ್ಕಲಿಗ ಜನಾಂಗಕ್ಕೆ ಕಳಂಕ..! ಹಣ ಪಡೆದು ಟಿಕೆಟ್‌ ನೀಡಿದ್ದಾರೆ

ತೇಕಾಣೆ ಗ್ರಾಮದಲ್ಲಿ 50 ಮನೆ, ಪಡಿಸಲನತ್ತ ಗ್ರಾಮದಲ್ಲಿ 80 ಮನೆಗಳಿದ್ದು ಒಟ್ಟು 270 ಮತಗಳಿವೆ. ರಸ್ತೆ ನಿರ್ಮಾಣ ಮಾಡಿಕೊಟ್ಟರಷ್ಟೇ ನಾವು ಮತ ಹಾಕುತ್ತೇವೆಂದು ಇಲ್ಲಿನ ಜನರು ಸದ್ಯ ಪಟ್ಟು ಹಿಡಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More