Home> Karnataka Assembly Election
Advertisement

ಕಾಂಗ್ರೆಸ್- ಜೆಡಿಎಸ್‌ದು ಶಾರ್ಟ್‌ ಕರ್ಟ್ ಸರ್ಕಾರ, ಇವುಗಳಿಂದ ಅಭಿವೃದ್ದಿ ಆಗಲ್ಲ..!

Karnataka Election 2023 : ಕಾಂಗ್ರೆಸ್ ಮತ್ತು ಜೆಡಿಎಸ್ ಶಾಟ್ ಕರ್ಟ್ ಸರ್ಕಾರ ರಚನೆ ಮಾಡುತ್ತೆ. ಇವರು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಶಾರ್ಟ ಕರ್ಟ್ ರಾಜಕಾರಣಿದಿಂದ ಅಭಿವೃದ್ಧಿ ಆಗಲು ಸಾಧ್ಯ ಇಲ್ಲ ಎಂದು ಕೈ ಮತ್ತು ಜಿಡಿಎಸ್‌ ಮೈತ್ರಿ ಕುರಿತು ಪಿಎಂ ನರೇಂದ್ರ ಮೋದಿ ಗುಡುಗಿದರು.

ಕಾಂಗ್ರೆಸ್- ಜೆಡಿಎಸ್‌ದು ಶಾರ್ಟ್‌ ಕರ್ಟ್ ಸರ್ಕಾರ, ಇವುಗಳಿಂದ ಅಭಿವೃದ್ದಿ ಆಗಲ್ಲ..!

ಬೈಲಹೊಂಗಲ : ಕರ್ನಾಟಕ ನಂಬರ್ ಒನ್ ಆಗಬೇಕಾ.. ? ಇಡೀ ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕಾ... ? ಹಾಗಾದರೆ ಬಿಜೆಪಿಗೆ ಮತ ನಿಡಿದರೆ ಕರ್ನಾಟಕ ನಂಬರ್ ಆಗಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ದೂರ ಇರಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್‌ಕರ್ಟ್ ಸರ್ಕಾರ ರಚನೆ ಮಾಡುತ್ತವೆ. ಇವುಗಳಿಂದ ಅಭಿವೃದ್ಧಿ ಆಗಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ನಮೋ, ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲು ಎಲ್ಲರ ಯೋಗದಾನ ಅಗತ್ಯ. ಈ ಬಾರಿ ಕಾರ್ನಾಟಕದಲ್ಲಿ ಪೂರ್ಣ ಬಹುಮತ ಸರ್ಕಾರ ರಚನೆಯ ನಿರ್ಣಯ ಆಗಿದೆ. ಕರ್ನಾಟಕದಲ್ಲಿ ವೋಟಿಂಗ್ ಮಾಡಲು ಒಂದು ವಾರ ಬಾಕಿ ಇದೆ. ಮುಂದಿನ ಬುಧವಾರ ಸರ್ಕಾರ ಯಾವುದು ಬೇಕು ಎಂದು ನಿರ್ಧಾರ ಮಾಡುವಿರಿ. ಈ ಬಾರಿ ಬಿಜೆಪಿಗೆ ಬಹುಮತ ನೀಡಲು ಮತದಾರರು ತೀರ್ಮಾನ ಮಾಡಿದ್ದಾರೆ. ಎಲ್ಲಾ ವರ್ಗದ ಜನರು ನಮಗೆ ಬೆಂಬಲ ಸಿಗುತ್ತಿದೆ. ಕರ್ನಾಟಕದ ಪ್ರತಿ ಕುಟುಂಬಕ್ಕೆ ಯಾವುದಾದರೂ ಒಂದು ಯೋಜನೆ ಲಾಭ ಸಿಕ್ಕಿದೆ ಎಂದರು.

ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರದ ಎಲ್ಲ ಎಂಜಿನ್ ಗಳು ವಿಫಲವಾಗಿವೆ- ಮಲ್ಲಿಕಾರ್ಜುನ್ ಖರ್ಗೆ

ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್‌ಕರ್ಟ್ ಸರ್ಕಾರದಿಂದ ಅಭಿವೃದ್ಧಿ ಆಗಲ್ಲ : ಕರ್ನಾಟಕ ನಂಬರ್ ಒನ್ ಆಗಬೇಕಾ.. ? ಇಡೀ ದೇಶದಲ್ಲಿ ಕರ್ನಾಟಕ ನಂಬರ್ ಒನ್ ಆಗಬೇಕಾ... ? ಹಾಗಾದರೆ ಬಿಜೆಪಿಗೆ ಮತ ನಿಡಿದರೆ ಕರ್ನಾಟಕ ನಂಬರ್ ಆಗಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ದೂರ ಇರಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾರ್ಟ್‌ಕರ್ಟ್ ಸರ್ಕಾರ ರಚನೆ ಮಾಡುತ್ತೆ. ಇವರು ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಾರೆ. ಶಾರ್ಟ ಕರ್ಟ್ ರಾಜಕಾರಣಿದಿಂದ ಅಭಿವೃದ್ಧಿ ಆಗಲು ಸಾಧ್ಯ ಇಲ್ಲ. ಆದರೆ ಯುವ ಜನತೆ ಶಾರ್ಟ್ ಕರ್ಟ್ ರಾಜಕರಾಣದಿಂದ ದೂರ ಇರುತ್ತಿದ್ದಾರೆ. ಇಂತಹ ಸರ್ಕಾರದಿಂದ ಅಭಿವೃದ್ಧಿಯಲ್ಲಿ ಬೇಧ ಭಾವ ಆಗಿದೆ. ಆದರೆ ಬಿಜೆಪಿ ಎಲ್ಲರಿಗೂ ಸಾಥ್ ನೀಡಿ ಎಲ್ಲರ ಅಭಿವೃದ್ಧಿ ಮಾಡಿ ಶಾರ್ಟ್ ಕರ್ಟ್‌ ಸರ್ಕಾರವನ್ನು ದೂರ ಮಾಡುತ್ತಿದೆ ಎಂದು ಮೋದಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ವಿರುದ್ಧ ಗುಡುಗಿದರು.

ಜೆಡಿಎಸ್ ಅಂದ್ರೆ ಅದು ಪ್ರೈವೇಟ್ ಲಿಮಿಟೆಡ್ ಎಂದು ಮೋದಿ ವ್ಯಂಗ್ಯ : ಬಿಜೆಪಿ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತದೆ. ನಾನು ಕರ್ನಾಟಕ ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ದೆಹಲಿಯಲ್ಲಿ ಕುತ್ತಿರುವ ಪರಿವಾರ ಇಲ್ಲಿ ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಣ ಮಾಡುತ್ತಿದೆ. ಜೆಡಿಎಸ್ ಅಂದ್ರೆ ಅದು ಪ್ರೈವೇಟ್ ಲಿಮಿಟೆಡ್ ಎಂದು ಮೋದಿ ವ್ಯಂಗ್ಯವಾಡಿದರು. ಅಲ್ಲದೆ, ನಾವು ಬರಿ ಕರ್ನಾಟಕದ ಜನರ ಪರವಾಗಿ ಇದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಜನರ ಒಪ್ಪುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬರಿ ದೇಶದ ಮೂರು ರಾಜ್ಯದಲ್ಲಿ ಅಧಿಕಾರದಲ್ಲಿ ಇದೆ. ಜೆಡಿಎಸ್ ಬರಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಇದೆ. ಈ ಮೂರು ರಾಜ್ಯ ಹಾಗೂ ಮೂರು ಜಿಲ್ಲೆಗಳಲ್ಲಿ ಅವರ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ನಮೋ ಭವಿಷ್ಯ ನುಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More