Home> Karnataka Assembly Election
Advertisement

ಬಿದರಿ ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ ನಿರ್ಮಾಣಗೊಂಡಿದೆ 2 ಆಕರ್ಷಕ ಬಿದರಿ ಮತಗಟ್ಟೆಗಳು

Karnataka Assembly Election 2023: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ 13 ಲಕ್ಷದ 75 ಸಾವಿರದ 169 ಮತದಾರರು ಮತಚಲಾಯಿಸಲಿದ್ದಾರೆ. ಜಿಲ್ಲೆಯಾದ್ಯಂತ 42 ತೃತೀಯ ಲಿಂಗಿಗಳು, 7 ಲಕ್ಷದ 10 ಸಾವಿರದ  403 ಪುರುಷ ಮತದಾರರು, 6 ಲಕ್ಷದ 64 ಸಾವಿರದ 724 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ.

ಬಿದರಿ ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ ನಿರ್ಮಾಣಗೊಂಡಿದೆ 2 ಆಕರ್ಷಕ ಬಿದರಿ ಮತಗಟ್ಟೆಗಳು

Karnataka Election 2023 Latest Updates: ಇಂದು ರಾಜ್ಯಾದ್ಯಂತ 2023ರ  ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಬಿದರಿ ಕಲೆಗೆ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬೀದರ್ ಜಿಲ್ಲೆಯಲ್ಲಿ ಸುಂದರವಾದ ಬಿದರಿ‌ ಮತಗಟ್ಟೆಗಳನ್ನು ಕೂಡ ನಿರ್ಮಿಸಲಾಗಿದೆ. 

ಬಿದರಿ‌ಕಲೆಗೆ ಪ್ರಾಶಸ್ತ್ಯ ನೀಡಲು ಬೀದರ್ ನಗರದಲ್ಲಿ ಎರಡು ಬಿದರಿ‌ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಇಡೀ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಇಂತಹ ಸುಂದರವಾದ ಬಿದರಿ‌ ಮತದಾನ ಕೇಂದ್ರವನ್ನು ನಿರ್ಮಿಸಲಾಗಿದೆ. ಬೀದರ್ ಜಿಲ್ಲೆಯ ವಿಶೇಷ ಕಲೆಗಳಲ್ಲಿ ಒಂದಾದ ಬಿದರಿ ಕಲೆಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಹಾಗೂ ಯುವ ಜನತೆಯಲ್ಲಿ ಇಂತಹ ಕಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ರೀತಿ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Karnataka Election 2023 Updates: ಮತದಾನ ಪ್ರಕ್ರಿಯೆ ಆರಂಭ: ಮತಗಟ್ಟೆಗೆ ಬಂದ ಬೆಕ್ಕು

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ 13 ಲಕ್ಷದ 75 ಸಾವಿರದ 169 ಮತದಾರರು ಮತಚಲಾಯಿಸಲಿದ್ದಾರೆ. ಜಿಲ್ಲೆಯಾದ್ಯಂತ 42 ತೃತೀಯ ಲಿಂಗಿಗಳು, 7 ಲಕ್ಷದ 10 ಸಾವಿರದ  403 ಪುರುಷ ಮತದಾರರು, 6 ಲಕ್ಷದ 64 ಸಾವಿರದ 724 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ 1506 ಮತಗಟ್ಟೆಗಳಿದ್ದು, ವಿಶೇಷವಾಗಿ 44 ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ 5 ಪಿಂಕ್ ಮತಗಟ್ಟೆಗಳು ಹಾಗೂ ಪ್ರತಿ‌ಕ್ಷೇತ್ರದಲ್ಲಿ ತಲಾ ಒಂದು ಯಂಗ್ ಪೊಲೀಂಗ್ ಸ್ಟೇಷನ್, ದಿವ್ಯಾಂಗಚೇತನರಿಗಾಗಿ ಮತಗಟ್ಟೆಗಳನ್ನ ಸ್ಥಾಪಿಸಲಾಗಿದೆ. 

ಇದನ್ನೂ ಓದಿ- ಕರ್ನಾಟಕದಲ್ಲಿ ಮತದಾನ ಪ್ರಾರಂಭ: ಮತ ಚಲಾಯಿಸಲಿದ್ದಾರೆ 5 ಕೋಟಿಗೂ ಹೆಚ್ಚು ಮತದಾರರು!

ಜಿಲ್ಲೆಯಲ್ಲಿ 1506 ಮತಗಟ್ಟೆಗಳಿದ್ದು, ಅದರಲ್ಲಿ 348 ಸೂಕ್ಷ್ಮ ಹಾಗು 24 ಅತಿಸೂಕ್ಷ್ಮ ಮತಗಟ್ಡೆಗಳನ್ನಾಗಿ ಪರಿಗಣಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ವಿವಿ ಪ್ಯಾಟ್ ಹಾಗೂ ಚುನಾವಣಾ ಸಿಬ್ಬಂದಿಗಳು‌ ತೆರಳಿದ್ದು,  ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಿ ನಿಗಾ ವಹಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More