Home> Karnataka Assembly Election
Advertisement

ಅಂಚೆ ಮತದಾನ ವ್ಯವಸ್ಥೆ ಸಂಪೂರ್ಣ ಫೇಲ್? ವೃದ್ಧರಿಗೆ ಸಂಕಷ್ಟ

Karnataka Vidhansabha Chunav 2023 Latest Update: ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.
 

ಅಂಚೆ ಮತದಾನ ವ್ಯವಸ್ಥೆ ಸಂಪೂರ್ಣ ಫೇಲ್? ವೃದ್ಧರಿಗೆ ಸಂಕಷ್ಟ

Karnataka Assembly Election 2023 Latest Updates:  ವಯೋವೃದ್ಧರು, ಅಂಗವಿಕಲರು, ಅಂಗಾಂಗ ವೈಫಲ್ಯ ಉಳ್ಳವರು, ಅಸಶಕ್ತರಿಗಾಗಿ ಸರ್ಕಾರ ಈ ಬಾರಿಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು ಅಂಚೇ ಮತದಾನ ವ್ಯವಸ್ಥೆ ಜಾರಿಗೆ ತಂದರೂ ಅದು ಸಂಪೂರ್ಣ ಫೇಲ್ ಆಗಿದೆಯಾ ? ಎಂಬ ಸಂಶಯ ಕಂಡು ಬರುತ್ತಿದೆ.

ಹೌದು ! ಕುಂದಗೋಳ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ವಯೋವೃದ್ಧರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಉರಿ ಬಿಸಿಲಿನಲ್ಲಿ ಆಟೋ ಮಾಡಿಕೊಂಡು ಮತಗಟ್ಟೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ.

ಇದನ್ನೂ ಓದಿ- 400ಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್: ಮತಗಟ್ಟೆಗೆ ಬಂದವರಿಗೆ ಬಿಗ್ ಶಾಕ್

ಇತ್ತ ಅಂಗವಿಕಲರು ಕೈಯಲ್ಲಿ ಸ್ಟಿಕ್ ಹಿಡಿದು ಮತದಾನಕ್ಕೆ ಗೌರವ ಕೊಟ್ಟು ತಮ್ಮ ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಪ್ರಜಾಪ್ರಭುತ್ವಕ್ಕೆ ಮಾದರಿ ಆಗಿದ್ದಾರೆ.

ಈ ಮಧ್ಯೆ, ಚುನಾವಣೆ ಅಧಿಕಾರಿ ನೂರೆಂಟು ಸಭೆ ನಡೆಸಿ, ಪತ್ರಿಕಾಗೋಷ್ಠಿ ನಡೆಸಿ ಅಂಚೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರೂ ಸಹ ಅವರದೇ ಇಲಾಖೆ ಅಧಿಕಾರಿಗಳು ಅಂಚೆ ಮತದಾನದ ವ್ಯವಸ್ಥೆ ಬಗ್ಗೆ ನಿಷ್ಕಾಳಜಿ ತೋರಿದ್ರಾ ? ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ- Political Leaders Voted: ಕುಟುಂಬದೊಂದಿಗೆ ಬಹಳ ಉತ್ಸುಕರಾಗಿ ಮತದಾನ ಮಾಡಿದ ರಾಜಕೀಯ ನಾಯಕರು..

ಒಟ್ಟಾರೆ ಚುನಾವಣೆ ಆಯೋಗ ವಯೋವೃದ್ಧರು, ಅಂಗವಿಕಲರು, ಅಶಕ್ತರಿಗಾಗಿ ಜಾರಿಗೆ ತಂದ ಅಂಚೆ ಮತದಾನ ವ್ಯವಸ್ಥೆ ಅರ್ಹರಿಂದ ದೂರವೇ ಉಳಿದಂತಾಗಿರುವುದು ಮಾತ್ರ ವಿಪರ್ಯಾಸ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More