Home> Karnataka Assembly Election
Advertisement

ಸಿಎಂ ಆಯ್ಕೆ ಜೊತೆಗೆ ಕ್ಯಾಬಿನೆಟ್‌ಗೆ ದಶಸೂತ್ರ..!

Congress Ministers: ಒಂದೆಡೆ ಸಿಎಂ ಯಾರು ಎಂಬ ಗೊಂದಲಕ್ಕೆ ಕಾಂಗ್ರೆಸ್ ತೆರೆ ಎಳೆಯಬೇಕಿದೆ. ಮುಂಬರುವ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇನ್ನೊಂದು ಕಡೆ ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕರ ಲಾಭಿ ಕೂಡ ಆರಂಭವಾಗಿದೆ. ಈಗಾಗಲೇ ಸದ್ಯ 25 ರಿಂದ 30 ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ನಮಗೆ ಈ ಬಾರಿ ಸಚಿವ ಸ್ಥಾನ ಬೇಕು ಅಂತ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. 

ಸಿಎಂ ಆಯ್ಕೆ ಜೊತೆಗೆ ಕ್ಯಾಬಿನೆಟ್‌ಗೆ ದಶಸೂತ್ರ..!

Congress Dasha Sutra For Cabinet: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತ ಪಡೆದಿರುವ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಆದರೆ, ಇನ್ನೂ ಕೂಡ ಮುಖ್ಯಮಂತ್ರಿ ಹುದ್ದೆ ಯಾರಿಗೆ ನೀಡಬೇಕು ಎಂಬ ವಿಷಯವೇ ಕಗ್ಗಂಟಾಗಿ ಉಳಿದಿದೆ. ಒಂದೆಡೆ ಈ ಹಿಂದೆ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದ, ಜನಪ್ರಿಯ ಯೋಜನೆಗಳ ಮೂಲಕ ಜನರ ನೆಚ್ಚಿನ ನಾಯಕನಾಗಿರುವ, ಅಹಿಂದ ನಾಯಕ ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದಾರೆ. ಇನ್ನೊಂದೆಡೆ, ಇಡೀ ದೇಶದಲ್ಲೇ ಅವನತಿಯತ್ತ ಸಾಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂಜೀವಿನಿಯಂತೆ ಮತ್ತೆ ಜೀವ ತುಂಬಿದ, ಎಷ್ಟೇ ಕಿರುಕುಳವನ್ನು ನೀಡಿದರೂ ಯಾವುದೇ ರೀತಿಯ ಷಡ್ಯಂತ್ರಕ್ಕೂ ಬಲಿಯಾಗದೆ ಪಕ್ಷಕ್ಕೆ ನಿಷ್ಠನಾಗಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಲು ಹಗಲಿರುಳು ಶ್ರಮಿಸಿ ಗೆಲುವಿನ ರೂವಾರಿಯಾಗಿರುವ ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತೊರ್ವ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ, ಸಿಎಂ ಆಯ್ಕೆಗೂ ಮುನ್ನವೇ ಹೈಕಮಾಂಡ್ ಅಂಗಳದಲ್ಲಿ ಸಚಿವ ಸ್ಥಾನಕ್ಕೆ ಭಾರೀ ಲಾಭಿ ಕೂಡ ನಡೆಯುತ್ತಿದೆ. 

ಹೌದು, ಒಂದೆಡೆ ಸಿಎಂ ಯಾರು ಎಂಬ ಗೊಂದಲಕ್ಕೆ ಕಾಂಗ್ರೆಸ್ ತೆರೆ ಎಳೆಯಬೇಕಿದೆ. ಮುಂಬರುವ 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇನ್ನೊಂದು ಕಡೆ ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ ಶಾಸಕರ ಲಾಭಿ ಕೂಡ ಆರಂಭವಾಗಿದೆ. ಈಗಾಗಲೇ ಸದ್ಯ 25 ರಿಂದ 30 ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ನಮಗೆ ಈ ಬಾರಿ ಸಚಿವ ಸ್ಥಾನ ಬೇಕು ಅಂತ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಕೆಲವರಂತೂ ನಮಗೇ ಸಚಿವ ಸ್ಥಾನ ನೀಡಿ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಬೆನ್ನು ಬಿದ್ದಿದ್ದಾರೆ ಎಂತಲೂ ಹೇಳಲಾಗುತ್ತಿದೆ. 

ಇದನ್ನೂ ಓದಿ- Karnataka CM: ಯಾರಾಗ್ತಾರೆ ಕರುನಾಡ ಮುಂದಿನ ಸಿಎಂ? ಇಂದು ಹೊರಬೀಳಲಿದೆ ಮುಖ್ಯಮಂತ್ರಿ ಹೆಸರು!

ಜಾತಿವಾರು, ಪ್ರಾಂತ್ಯವಾರು ಮೇಲೆ ಸಚಿವ ಸ್ಥಾನಕ್ಕೆ ಲಾಬಿ:
ಜಾತಿವಾರು, ಪ್ರಾಂತ್ಯವಾರು ಮೇಲೆ ಸಚಿವ ಸ್ಥಾನಕ್ಕೆ ಲಾಬಿ ನಡೆಸಿರುವ ಶಾಸಕರು ಎಐ‌ಸಿ‌ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಇವರಲ್ಲಿ ಹೆಚ್.ಕೆ ಪಾಟೀಲ್, ಪ್ರಕಾಶ್ ಹುಕ್ಕೇರಿ, ಅಜಯ್ ಸಿಂಗ್, ವಿಜಯಾನಂದ್ ಕಾಶಪ್ಪನವರ, ವಿನಯ್ ಕುಲಕರ್ಣಿ, ಜಮೀರ್ ಅಹ್ಮದ್, ಕೆ.ಎಚ್.ಮುನಿಯಪ್ಪ, ಮಹಾದೇವಪ್ಪ, ಅಶೋಕ್‌ ಪಟ್ಟಣ್‌, ಕೆ.ಎನ್.ರಾಜಣ್ಣ, ಟಿ. ಬಿ.ಜಯಚಂದ್ರ, ಡಾ. ಜಿ. ಪರಮೇಶ್ವರ್  ಸೇರಿದಂತೆ ಹಲವರು ಸಚಿವ ಸ್ಥಾನಕ್ಕೆ ಲಾಭಿ ನಡೆಸಿದ್ದಾರೆ ಎಂಬ ಮಾಹಿತಿಗಳು ಕೂಡ ಲಭ್ಯವಾಗಿವೆ.

ಇದನ್ನೂ ಓದಿ- Karnataka New CM Oath Taking: ಮೇ 17 ಅಥವಾ 18ರಂದು ನೂತನ ಸಿಎಂ ಪ್ರಮಾಣವಚನ?

ಆದಾಗ್ಯೂ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಆಯ್ಕೆ ಜೊತೆಗೆ ಕ್ಯಾಬಿನೆಟ್‌ಗೆ ದಶಸೂತ್ರವನ್ನು ಸಿದ್ಧಪಡಿಸಿದೆ. ಆ ಹತ್ತು ಸೂತ್ರಗಳು ಈ ಕೆಳಕಂಡಂತಿದೆ....
1. 2013ರ ಸಂಪುಟದಲ್ಲಿ ಸಚಿವರಾಗಿದ್ದಾಗ ದಕ್ಷತೆಯಿಂದ ಕಾರ್ಯ ನಿರ್ವಹಿಸದವರಿಗೆ ಈ ಬಾರಿ ಅವಕಾಶವಿಲ್ಲ. 
2. ಹೊಸದಾಗಿ ಬಂದ ಯುವ ಶಾಸಕರಿಗೆ ಅವಕಾಶ ನೀಡುವುದು 
3. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪೂರಕ ಸಂಪುಟ ರಚಿಸುವುದು 
4. ಪ್ರಣಾಳಿಕೆಯನ್ನು ಸಮರ್ಥವಾಗಿ ಜಾರಿಗೊಳಿಸಿ ಜನಮಾನಸಕ್ಕೆ ಮುಟ್ಟಿಸುವ ಶಾಸಕರಿಗೆ ಸ್ಥಾನ
5. ಬಿಜೆಪಿ ಸರಕಾರದಲ್ಲಿ ಸಚಿವರ ಬಳಿ ಕಾರ್ಯ ನಿರ್ವಹಿಸಿದ್ದ ಸಿಬ್ಬಂದಿ, ಆಪ್ತ ಕಾರ್ಯದರ್ಶಿಗಳನ್ನು ನೂತನ ಸಚಿವರು ತಮ್ಮ ಕಚೇರಿಗೆ ತೆಗೆದುಕೊಳ್ಳುವಾಗ ಎಚ್ಚರ ವಹಿಸಬೇಕು. 
6. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ಈಗಾಗಲೇ ಸೂಚಿಸಿರುವ ಪ್ರದೇಶವಾರು /ಜಾತಿವಾರು /ಯುವಕರು /ಪಕ್ಷ ನಿಷ್ಠೆ /ವಯೋಮಾನ ಎಲ್ಲವನ್ನು ಮಾನದಂಡವಾಗಿ ಪರಿಗಣಿಸಬೇಕು.
7. ಮಹಿಳೆಯರಿಗೆ ಉತ್ತಮ ಖಾತೆ ನೀಡುವದು.
8. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗ ಶಾಸಕರು ಎಂಬ ಭಾವನೆ ಬಿಟ್ಟು ಪಕ್ಷಕ್ಕೆ ಅನುಕೂಲವಾಗುವ, ಪಕ್ಷ ಸಂಘಟನೆಗೆ ಒತ್ತು ನೀಡುವವರಿಗೆ ಆದ್ಯತೆ ನೀಡಬೇಕು. ಹಿಂಬಾಲಕರಿಗೆ ಮಣೆ ಹಾಕಬಾರದು.
9. ವಿಧಾನ ಪರಿಷತ್ ಸದಸ್ಯರಿಗೂ ಸಂಪುಟದಲ್ಲಿ ಹೆಚ್ಚಿನ ಅವಕಾಶ
10. ಜನ ಸಾಮಾನ್ಯರಿಗೆ ಸ್ಪಂದಿಸುವಂತಹ ಅಧಿಕಾರಿಗಳಿಗೆ ಪ್ರಮುಖ ಇಲಾಖೆಗಳಲ್ಲಿ ಆದ್ಯತೆ ನೀಡುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More