Home> India
Advertisement

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿದ ವೈ.ಎಸ್. ಜಗನ್ಮೋಹನ್ ರೆಡ್ಡಿ

ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ವಿಜಯವಾಡಾದ ಇಂದಿರಾ ಗಾಂಧಿ ಮುನ್ಸಿಪಲ್ ಕ್ರೀಡಾಂಗಣದಲ್ಲಿ 12.23 ಕ್ಕೆ ಪ್ರಮಾಣವಚನ ಬೋಧಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿದ ವೈ.ಎಸ್. ಜಗನ್ಮೋಹನ್ ರೆಡ್ಡಿ

ವಿಜಯವಾಡಾ: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಇಂದು(ಮೇ 30) ಆಂಧ್ರ ಪ್ರದೇಶ ಎರಡನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ವಿಜಯವಾಡಾದ ಇಂದಿರಾ ಗಾಂಧಿ ಮುನ್ಸಿಪಲ್ ಕ್ರೀಡಾಂಗಣದಲ್ಲಿ 12.23 ಕ್ಕೆ ಪ್ರಮಾಣವಚನ ಬೋಧಿಸಿದರು.

175 ಸದಸ್ಯರ ಬಲ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ದೊರೆಯಿತು. 175 ಸ್ಥಾನಗಳಲ್ಲಿ ವೈಎಸ್ಆರ್ ಕಾಂಗ್ರೆಸ್ 151 ಸ್ಥಾನಗಳನ್ನು ಗೆದ್ದಿದೆ. 2014 ರ ವಿಧಾನಸಭೆ ಚುನಾವಣೆಯಲ್ಲಿ 102 ಸ್ಥಾನಗಳನ್ನು ಗೆದ್ದಿದ್ದ ಟಿಡಿಪಿ ತೀವ್ರವಾಗಿ ಕುಸಿದಿದ್ದು ಪಕ್ಷದಿಂದ ಕೇವಲ 23 ಮಂದಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ವೈಎಸ್ಆರ್ಸಿಪಿ 49.9 ಶೇ ಮತಗಳನ್ನು ಪಡೆದರೆ, ಟಿಡಿಪಿ 39.2 ಶೇ ಮತವನ್ನು ಪಡೆದುಕೊಂಡಿತು. ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಾರ್ಟಿಗೆ 1 ಸೀಟು ಗೆದ್ದಿದೆ.

ಹೆಲಿಕಾಪ್ಟರ್ ಅಪಘಾತದಲ್ಲಿ ಅವರ ತಂದೆ ವೈಎಸ್ಆರ್ ಮೃತಪಟ್ಟ ಸುಮಾರು ಒಂದು ದಶಕದ ಬಳಿಕ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 2009 ರಲ್ಲಿ ಲೋಕಸಭೆ ಚುನಾವಣೆಯನ್ನು ಕದಪ್ಪ ದಿಂದ ಗೆದ್ದು ಜಗನ್ ಮೋಹನ್ ರೆಡ್ಡಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ತನ್ನ ತಂದೆಯ ಮರಣದ ನಂತರ ಮುಖ್ಯಮಂತ್ರಿಯಾಗಲು ಅವರು ಸಿದ್ಧರಾಗಿದ್ದರು ಮತ್ತು ಅನೇಕ ಶಾಸಕರ ಬೆಂಬಲವನ್ನು ಹೊಂದಿದ್ದರು. ಜಗನ್ ಅವರ ತಾಯಿ ವೈ.ಎಸ್. ವಿಜಯಮ್ಮ ಅವರೊಂದಿಗೆ  2010 ರಲ್ಲಿ ಕಾಂಗ್ರೆಸ್ ಅನ್ನು ತೊರೆದರು.
 

Read More