Home> India
Advertisement

ಅಭಿನಂದನ್​ಗೆ ಸಂಬಂಧಿಸಿದ ವೀಡಿಯೋ ಲಿಂಕ್​ಗಳನ್ನು ಡಿಲೀಟ್‌ ಮಾಡಿದ ಯೂಟ್ಯೂಬ್!

ಅಭಿನಂದನ್​ ವರ್ಧಮಾನ್​ಗೆ ಸಂಬಂಧಿಸಿದಂತೆ ಪಾಕ್​ ಬಿಡುಗಡೆ ಮಾಡಿದ್ದ ಆಕ್ಷೇಪಾರ್ಹ ವೀಡಿಯೋ ತುಣುಕುಗಳು ಯೂಟ್ಯೂಬ್ ನಿಂದ ಡಿಲೀಟ್ ಮಾಡಿರುವುದಾಗಿ ಗೂಗಲ್ ತಿಳಿಸಿದೆ. 

ಅಭಿನಂದನ್​ಗೆ ಸಂಬಂಧಿಸಿದ ವೀಡಿಯೋ ಲಿಂಕ್​ಗಳನ್ನು ಡಿಲೀಟ್‌ ಮಾಡಿದ ಯೂಟ್ಯೂಬ್!

ನವದೆಹಲಿ: ಪಾಕ್ ವಶದಲ್ಲಿರುವ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್​ ವರ್ಧಮಾನ್​ಗೆ ಸಂಬಂಧಿಸಿದಂತೆ ಪಾಕ್​ ಬಿಡುಗಡೆ ಮಾಡಿದ್ದ ಆಕ್ಷೇಪಾರ್ಹ ವೀಡಿಯೋ ತುಣುಕುಗಳು ಯೂಟ್ಯೂಬ್ ನಿಂದ ಡಿಲೀಟ್ ಮಾಡಿರುವುದಾಗಿ ಗೂಗಲ್ ತಿಳಿಸಿದೆ. 

ಅಭಿನಂದನ್ ಅವರನ್ನು ಪಾಕ್ ಸೈನಿಕರು ಪ್ರಶ್ನಿಸುತ್ತಿರುವ, ಹೊಡೆಯುತ್ತಿರುವ, ಕಣ್ಣಿಗೆ ಬಟ್ಟೆ ಕಟ್ಟಿ ಪ್ರಶ್ನೆಗಳನ್ನು ಕೇಳುತ್ತಿರುವ ವೀಡಿಯೋಗಳೂ ಸೇರಿದಂತೆ ಅವರ ಹಣೆಯಲ್ಲಿ, ಮೈಯಲ್ಲಿ ರಕ್ತ ಸುರಿಯುತ್ತಿರುವ 11 ವೀಡಿಯೋಗಳನ್ನು ಪಾಕ್ ಬುಧವಾರ ಬಿಡುಗಡೆ ಮಾಡಿತ್ತು. ಈ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿತ್ತು. 

ಇದನ್ನು ತೀವ್ರವಾಗಿ ಖಂಡಿಸಿದ್ದ ಭಾರತ ಸರ್ಕಾರದ ಐಟಿ ಸಚಿವಾಲಯ ಗುರುವಾರ ಆ ಆಕ್ಷೇಪಾರ್ಹ ವೀಡಿಯೋ ಲಿಂಕ್ ಗಳನ್ನು ಡಿಲೀಟ್ ಮಾಡುವಂತೆ  ಇಂಡೋ-ಏಷಿಯಾನ್​ ನ್ಯೂಸ್‌​ ಸರ್ವಿಸ್​ ಮೂಲಕ ಗೂಗಲ್ ಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಯೂಟ್ಯೂಬ್ ನಿಂದ ವೀಡಿಯೋ ಲಿಂಕ್ ಗಳನ್ನು ಡಿಲೀಟ್ ಮಾಡಿರುವುದಾಗಿ ಗೂಗಲ್ ತಿಳಿಸಿದೆ. 
 

Read More