Home> India
Advertisement

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ; ಹಲವು ರೈಲುಗಳ ಮಾರ್ಗ ಬದಲು

ಯಮುನಾ ನದಿಯಲ್ಲಿನ ನೀರಿನ ಮಟ್ಟವು ಅಪಾಯದ ಗಡಿಯನ್ನು ದಾಟಿದೆ.
 

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ; ಹಲವು ರೈಲುಗಳ ಮಾರ್ಗ ಬದಲು

ನವದೆಹಲಿ: ಯಮುನಾ ನದಿಯಲ್ಲಿನ ನೀರಿನ ಮಟ್ಟವು ಅಪಾಯದ ಗಡಿಯನ್ನು ಮೀರಿ ಹರಿಯುತ್ತಿದ್ದು, ಭಾರತೀಯ ರೈಲ್ವೆ ಇಲಾಖೆ ಹಲವು ರೈಲುಗಳ ಮಾರ್ಗವನ್ನು ಬದಲಿಸಿದೆ. ಅಲ್ಲದೆ ಓಲ್ಡ್ ಯಮುನಾ ಸೇತುವೆ (ಲೋಹಾ ಪುಲ್) ಮೂಲಕ ನೀರಿನ ಮಟ್ಟ ಕಡಿಮೆಯಾಗುವವರೆಗೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಮಾರ್ಗಗಳನ್ನು ಬದಲಿಸಲಾಗಿದೆ:

18101 ಟಾಟಾನಗರ-ಜಮ್ಮು ತಾವಿ ಮುರಿ ಎಕ್ಸ್‌ಪ್ರೆಸ್ ಮತ್ತು 15483 ಅಲಿಪುರ್ದಾರ್-ದೆಹಲಿ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣವನ್ನು 19.08.2019 ರಿಂದ ಯಮುನಾ ನದಿಯ ನೀರಿನ ಮಟ್ಟ ಕಡಿಮೆಯಾಗುವವರೆಗೂ ಸಾಹಿಬಾಬಾದ್-ನವದೆಹಲಿ-ದೆಹಲಿ ಜಂಕ್ಷನ್ ಮೂಲಕ ಓಡಿಸಲಾಗುವುದು.

19032 ಹರಿದ್ವಾರ್-ಅಹಮದಾಬಾದ್ ಯೋಗ ಎಕ್ಸ್‌ಪ್ರೆಸ್, 14555 ಬರೇಲಿ-ದೆಹಲಿ ಎಕ್ಸ್‌ಪ್ರೆಸ್, 14043 ಕೋಟ್ವಾರ್-ದೆಹಲಿ ಗರ್ವಾಲ್ ಎಕ್ಸ್‌ಪ್ರೆಸ್, 64609 ಗಾಜಿಯಾಬಾದ್-ನವದೆಹಲಿ ಇಎಂಯು, 14674 ಅಮೃತಸರ-ಜೇ ನಗರ ಶಹೀದ್ ಎಕ್ಸ್‌ಪ್ರೆಸ್, 14218 ಚಂಡೀಗಢ- ಪ್ರಯಾಗ್ ಉನ್ಚಾಹರ್ ಎಕ್ಸ್‌ಪ್ರೆಸ್, 15013 ಜೈಸಲ್ಮೇರ್-ಕಠ್ಗೋಡಂ ರಾಣಿಖೇತ್ ಎಕ್ಸ್‌ಪ್ರೆಸ್, 54076 ದೆಹಲಿ-ಶಹಜಹಾನಪುರ ಪ್ರಯಾಣಿಕ, 14056 ದೆಹಲಿ ಜೆಎನ್-ದಿಬ್ರುಗರ್ಹ್ ಬ್ರಹ್ಮಪುತ್ರ ಮೇಲ್ ಮತ್ತು 14384 ದೆಹಲಿ ಜೆಎನ್-ಮಾಲ್ಡಾ ಟೌನ್ ಫರಕ್ಕಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ 20.08.2019 ರಿಂದ  ನವದೆಹಲಿ ಮಾರ್ಗವಾಗಿ ಸಂಚರಿಸಲಿವೆ.

ಮಂಗಳವಾರ ರಾತ್ರಿ ಯಮುನಾ ನದಿಯ ನೀರಿನ ಮಟ್ಟ 206.04 ಮೀಟರ್ ಇತ್ತು, 204.83 ಮೀಟರ್ ಅಪಾಯದ ಗುರುತುಗಿಂತ ಈ ಮಟ್ಟ ಒಂದು ಮೀಟರ್ಗಿಂತ ಹೆಚ್ಚು ಎಂದು ರೈಲ್ವೆ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ನದಿಯ ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಎಲ್ಲಾ ರೈಲುಗಳ ಮಾರ್ಗವನ್ನು ನವದೆಹಲಿ ಮಾರ್ಗವಾಗಿ ಸಂಚರಿಸುವಂತೆ ಬದಲಿಸಲಾಗಿದೆ ಎಂದರು.

ಓಲ್ಡ್ ಯಮುನಾ ಸೇತುವೆಯು ದೆಹಲಿ-ಹೌರಾ ಮಾರ್ಗದಲ್ಲಿ ರಸ್ತೆ-ಕಮ್-ರೈಲು ಸೇತುವೆಯಾಗಿದ್ದು, ಇದನ್ನು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇದು ದೆಹಲಿ ಮತ್ತು ನೆರೆಯ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಓಲ್ಡ್ ಯಮುನಾ ಸೇತುವೆಯಲ್ಲಿ ಅತಿ ಹೆಚ್ಚು ನೀರಿನ ಮಟ್ಟ 1978 ರಲ್ಲಿ 207.49 ಮೀಟರ್ ಆಗಿತ್ತು. ಇದು 2010 ರಲ್ಲಿ 207.11 ಮೀಟರ್ ಮತ್ತು 2013 ರಲ್ಲಿ 207.32 ಮೀಟರ್ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಭಾರೀ ಮಳೆಯ ಜೊತೆಗೆ ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಬಿಡುಗಡೆಯಾಗುವುದು ಯಮುನಾ ಉಕ್ಕಿ ಹರಿಯಲು ಕಾರಣವಾಯಿತು. ರಾಷ್ಟ್ರ ರಾಜಧಾನಿಯಲ್ಲಿ ನದಿಯ ಉದ್ದಕ್ಕೂ ತಗ್ಗು ಪ್ರದೇಶಗಳಿಂದ 14,000 ಜನರನ್ನು ಸ್ಥಳಾಂತರಿಸಲು ದೆಹಲಿ ಸರ್ಕಾರ ಕ್ರಮ ಕೈಗೊಂಡಿದೆ.

Read More