Home> India
Advertisement

ಅಂತ್ಯವಾಗಲಿದೆಯೇ ಶಾಹೀನ್ ಬಾಗ್ ಧರಣಿ? ಪ್ರತಿಭಟನಾಕಾರರಿಗೆ ಕಾಡಿದ coronavirus ಭೀತಿ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ವರ್ಷ ಡಿಸೆಂಬರ್ 15ರಿಂದ  ಪ್ರತಿಭಟನಾಕಾರರು ದೆಹಲಿಯ ಶಾಹೀನ್ ಬಾಗ್ ನಲ್ಲಿ ಧರಣಿ ನಡೆಸುತ್ತಿದ್ದು, ಇದೀಗ 83 ದಿನಗಳು ಪೂರ್ಣಗೊಂಡಿವೆ.

ಅಂತ್ಯವಾಗಲಿದೆಯೇ ಶಾಹೀನ್ ಬಾಗ್ ಧರಣಿ? ಪ್ರತಿಭಟನಾಕಾರರಿಗೆ ಕಾಡಿದ coronavirus ಭೀತಿ

ನವದೆಹಲಿ: ಶಾಹೀನ್ ಬಾಗ್ ನಲ್ಲಿ ಕಳೆದ ಎರಡು ತಿಂಗಳಿನಿಂದ ಪೌರತ್ವ ತಿದ್ದುಪತಿ ಕಾಯ್ದೆಯನ್ನು ವಿರೋಧಿಸಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಇದೀಗ ಕೊರೊನಾ ವೈರಸ್ ಭೀತಿ ಕಾಡಲಾರಂಭಿಸಿದೆ. ಈ ಧರಣಿಯನ್ನು ಆದಷ್ಟು ಬೇಗೆ ಕೈಬಿಡಲು ಇದೀಗ ಧರಣಿ ಆಯೋಜಕರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ವರ್ಷ ಡಿಸೆಂಬರ್ 15ರಿಂದ  ಪ್ರತಿಭಟನಾಕಾರರು ದೆಹಲಿಯ ಶಾಹೀನ್ ಬಾಗ್ ನಲ್ಲಿ ಧರಣಿ ನಡೆಸುತ್ತಿದ್ದು, ಇದೀಗ 83 ದಿನಗಳು ಪೂರ್ಣಗೊಂಡಿವೆ. ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಈ ಪ್ರತಿಭಟನೆಯಿಂದ ಪ್ರೇರಿತರಾಗಿ ದೇಶಾದ್ಯಂತ ಹಲವೆಡೆ CAA ಹಾಗೂ NRC ಪ್ರತಿಭಟನೆಗಳು ನಡೆಸಲಾಗುತ್ತಿದೆ. ಈ ಮಧ್ಯೆ ಸರ್ಕಾರ ಕೂಡ ಪ್ರತಿಭಟನಾಕಾರರಿಗೆ ಧರಣಿಯನ್ನು ಕೈಬಿಡಲು ಮನವಿ ಮಾಡಿದ್ದು, ಸರ್ಕಾರ ಮಾಡಿರುವ ಎಲ್ಲ ಪ್ರಯತ್ನಗಳು ಕೂಡ ವಿಫಲವಾಗಿವೆ. ಆದರೂ, ಕೂಡ ಧರಣಿ ಮುಂದುವರೆಸಲಾಗುತ್ತಿದೆ. ಸದ್ಯ ಈ ಪ್ರಕರಣ ಸುಪ್ರೀಂ ಮೆಟ್ಟಿಲೇರಿದೆ. ಆದರೂ ಕೂಡ ಶಾಹೀನ್ ಬಾಗ್ ನಲ್ಲಿ ಧರಣಿ ಸತ್ಯಾಗ್ರಹ ಜಾರಿಯಲ್ಲಿದೆ.

ಆದರೆ, ಸದ್ಯ ದೇಶಾದ್ಯಂತ ಕೊರೊನಾ ವೈರಸ್ ಭೀತಿ ಪಸರಿಸಿದ್ದು, ಇದೀಗ ಪ್ರತಿಭಟನಾಕಾರರಲ್ಲಿಯೂ ಕೂಡ ಈ ವೈರಸ್ ಬೀಟಿ ಕಾಡಲಾರಂಭಿಸಿದೆ. ಹೀಗಾಗಿ ಕೊರೊನಾ ವೈರಸ್ ಭೀತಿಯನ್ನು ನೆಪವಾಗಿಸಿ ತಮ್ಮ ಪ್ರದರ್ಶನವನ್ನು ಕೈಬಿಡಲು ಚಿಂತನೆ ನಡೆಸಲಾರಂಭಿಸಿದ್ದಾರೆ.

ಈ ಕುರಿತು ಸರ್ಕಾರ ಕೂಡ ತನ್ನ ಅಡ್ವೈಸರಿ ಜಾರಿಗೊಳಿಸಿದ್ದು, ಕೊರೊನಾ ವೈರಸ್ ಹಿನ್ನೆಲೆ ಜನರು ಮುಂಜಾಗ್ರತೆಯನ್ನು ವಹಿಸಬೇಕು ಹಾಗೂ ಜನಸಂದಣಿ ಇರುವ ಜಾಗದಿಂದ ದೂರವಿರಲು ಸೂಚಿಸಿದೆ. ಈ ಧರಣಿಯಲ್ಲಿ ಶಾಹೀನ್ ಬಾಗ್ ಅಕ್ಕ-ಪಕ್ಕದ ಹೊರತಾಗಿ ಹೊರಗಿನಿಂದಲೂ ಕೂಡ ಈ ಧರಣಿಯಲ್ಲಿ ಪಾಲ್ಗೊಳ್ಳಲು ಜನರು ಬರುತ್ತಿದ್ದು, ಕೊರೊನಾ ವೈರಸ್ ನ ಭೀತಿ ಇದೀಗ ಪ್ರತಿಭಟನಾಕಾರ ಮನದಲ್ಲಿ ಮನೆಮಾಡಿದೆ. ಈ ಭೀತಿಯ ಹಿನ್ನೆಲೆ ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಕೈಬಿಡಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Read More