Home> India
Advertisement

ಕಾಡಾನೆ ದಾಳಿ; ಐವರ ದುರ್ಮರಣ

ನೇಪಾಳದಿಂದ ಬಿಹಾರದ ಗಡಿಕ್ಷೇತ್ರವಾದ ಸುಪೌಲ್ ಗೆ ನುಗ್ಗಿರುವ ಕಾಡಾನೆಯೊಂದು ಕಳೆದ ಎರಡು ದಿನಗಳಲ್ಲಿ ಐವರ ಪ್ರಾಣವನ್ನು ಬಲಿತೆಗೆದುಕೊಂಡಿದೆ.

ಕಾಡಾನೆ ದಾಳಿ; ಐವರ ದುರ್ಮರಣ

ಸುಪೌಲ್: ನೇಪಾಳದಿಂದ ಬಿಹಾರದ ಗಡಿಕ್ಷೇತ್ರವಾದ ಸುಪೌಲ್ ಗೆ ನುಗ್ಗಿರುವ ಕಾಡಾನೆಯೊಂದು ಕಳೆದ ಎರಡು ದಿನಗಳಲ್ಲಿ ಐವರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಹಲವು ಮನೆಗಳನ್ನು ನಾಶ ಮಾಡಿ, ದವಸ ಧಾನ್ಯಗಳನ್ನೂ ಸಹ ತಿಂದು ಹಾಳು ಮಾಡಿವೆ ಎನ್ನಲಾಗಿದೆ. 

ನೇಪಾಳದ ದಿಯೋಘರ್'ನಿಂದ ಬುಧವಾರ ಬಂದ ಕೆಲವು ಕಾಡಾನೆಗಳು ಬಿಹಾರದ ಭೀಮಾನಗರ್ ಪ್ರದೇಶಕ್ಕೆ ನುಗ್ಗಿದ್ದವು. ಇವುಗಳಲ್ಲಿ ಕೆಲವು ಆನೆಗಳು ಹಿಂದಿರುಗಿದ್ದವು. ಆದರೆ ಒಂದು ಆನೆ ಮಾತ್ರ ಸುಪೌಲ್ ಜಿಲ್ಲೆಯ  ಜನನಿಬಿಡ ಪ್ರದೇಶಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. ಕಳೆದ ಎರಡು ದಿನಗಳಲ್ಲಿ 

ರಾಘೋಪುರ್, ಪಿಪರಾ, ಕಿಸಾನ್ಪುರ್ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ದಾಂಧಲೆ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏತನ್ಮಧ್ಯೆ, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ತಂಡವು ಆ ಕಾಡಾನೆಯನ್ನು ನೇಪಾಳಕ್ಕೆ ಓಡಿಸುವ ಕಾರ್ಯದಲ್ಲಿ ನಿರತವಾಗಿದೆ. ಪೊಲೀಸರ ಪ್ರಕಾರ, ಚೌಟ್ಟಾ ಗ್ರಾಮದ ಗದ್ದೆಯಲ್ಲಿ ಗುರುವಾರ ಕೆಲಸ ಮಾಡುತ್ತಿದ್ದ ಶೌಮ್ ಲಾಲ್ ಕಾಮತ್ ಎಂಬವರನ್ನು ಅವರನ್ನು ಕಾಡಾನೆ ಕೊಂದು ಹಾಕಿದ್ದಲ್ಲದೆ, ಮಾಧ್ಯಮಿಕ ಶಾಲೆಯ ಗೋಡೆಯನ್ನು ಹಾನಿಗೊಳಿಸಿದೆ ಎಂದಿದ್ದಾರೆ.
 

Read More