Home> India
Advertisement

ಮಧ್ಯಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ವಿಳಂಬವಾಗಿದ್ದೇಕೆ?

  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮಧ್ಯಪ್ರದೇಶದ ಫಲಿತಾಂಶವೊಂದನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳ ಫಲಿತಾಂಶವನ್ನು ಬೇಗನೆ ಘೋಷಣೆ ಮಾಡಲಾಗಿತ್ತು. ಆದರೆ ಮಧ್ಯಪ್ರದೇಶದ ಚುನಾವಣೆ ಫಲಿತಾಂಶ ಬೇಗನೆ ಘೋಷಣೆಯಾಗದಿರುವುದು ಹಲವರಲ್ಲಿ ಗೊಂದಲ ಮೂಡಿಸಿತ್ತು. ಕಾರಣ ಮತ ಎಣಿಕೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಹಾವು ಏಣಿ ಆಟದಂತೆ ಅದರ ಸ್ಥಾನಗಳು ಏರಿಳಿತವನ್ನು ಕಂಡಿದ್ದವು.

ಮಧ್ಯಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ವಿಳಂಬವಾಗಿದ್ದೇಕೆ?

ನವದೆಹಲಿ:  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮಧ್ಯಪ್ರದೇಶದ ಫಲಿತಾಂಶವೊಂದನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳ ಫಲಿತಾಂಶವನ್ನು ಬೇಗನೆ ಘೋಷಣೆ ಮಾಡಲಾಗಿತ್ತು. ಆದರೆ ಮಧ್ಯಪ್ರದೇಶದ ಚುನಾವಣೆ ಫಲಿತಾಂಶ ಬೇಗನೆ ಘೋಷಣೆಯಾಗದಿರುವುದು ಹಲವರಲ್ಲಿ ಗೊಂದಲ ಮೂಡಿಸಿತ್ತು. ಕಾರಣ ಮತ ಎಣಿಕೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಹಾವು ಏಣಿ ಆಟದಂತೆ ಅದರ ಸ್ಥಾನಗಳು ಏರಿಳಿತವನ್ನು ಕಂಡಿದ್ದವು.

ಈಗ ಮಧ್ಯಪ್ರದೇಶದ ಚುನಾವಣಾ ಫಲಿತಾಂಶದ ವಿಳಂಬಕ್ಕೆ ಪ್ರಮುಖ ಕಾರಣ ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗ ಹೆಚ್ಚಿನ ಮುನ್ನೆಚ್ಚರಿಕೆ ತಗೆದುಕೊಂಡು ವಿವಿಪ್ಯಾಟ್ಗಳನ್ನು ಪ್ರತಿ ಮತದಾನದ ಕೇಂದ್ರದಲ್ಲಿನ ಮತಯಂತ್ರಗಳಿಗೆ ತಾಳೆ ನೋಡುವುದರ ಮೂಲಕ ಪರೀಕ್ಷಿಸಿ ನೋಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಫಲಿತಾಂಶವು ವಿಳಂಬವಾಗಲು ಕಾರಣವೆಂದು ಹೇಳಲಾಗಿದೆ. 

ಈಗ ಈ ವಿಚಾರವಾಗಿ ಅಧಿಕೃತ ಹೇಳಿಕೆ ನೀಡಿರುವ ಚುನಾವಣಾ ಆಯೋಗ "ಮಧ್ಯಪ್ರದೇಶದ ಹಲವು ಕ್ಷೇತ್ರಗಳಲ್ಲಿ ಕಡಿಮೆ ಅಂತರದ ಮುನ್ನಡೆಯನ್ನು ಮತಯಂತ್ರಗಳು ತೋರಿಸುತ್ತಿದ್ದವು. ಕೆಲವು ಸಂದರ್ಭದಲ್ಲಿ ಕೇವಲ 1ರಿಂದ 2 ಮತದ ಅಂತರವಿರುತ್ತಿತ್ತು, ಈ ಹಿನ್ನಲೆಯಲ್ಲಿ ರನ್ನರ್ ಅಪ್ ಆದಂತಹ ಅಭ್ಯರ್ಥಿಯು ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದರು.ಈ ಹಿನ್ನಲೆಯಲ್ಲಿ ನಿಯಮದನ್ವಯ ಮತಯಂತ್ರದ ಫಲಿತಾಂಶವನ್ನು ಅಭ್ಯರ್ಥಿಗಳಿಗೆ ತೋರಿಸಲಾಗುತ್ತಿತ್ತು.ಇದೆ ರೀತಿಯಲ್ಲಿ ಹಲವು ಮತಕ್ಷೇತ್ರಗಳಲ್ಲಿ ಆಗಿದ್ದರಿಂದ ಮತ ಎಣಿಕೆ ಪ್ರಕ್ರಿಯೆಯಲ್ಲಿ ವಿಳಂಬವಾಯಿತು.ಸಾಮಾನ್ಯವಾಗಿ ಪ್ರತಿ ಸುತ್ತಿನ ಮತ ಎಣಿಕೆ ಪ್ರಕ್ರಿಯೆಗೆ 20 ರಿಂದ 30 ನಿಮಿಷಕ್ಕಿಂತ ಅಧಿಕ ಸಮಯವನ್ನು ತಗೆದುಕೊಳ್ಳುವುದಿಲ್ಲ .ಆದರೆ ಇಲ್ಲಿ ಒಂದು ಗಂಟೆಗೂ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತಿತ್ತು.ಇನ್ನೊಂದೆಡೆ ಇನ್ನೊಬ್ಬ ಅಧಿಕಾರಿ ಹೇಳುವಂತೆ ಚುನಾವಣಾ ಆಯೋಗದ ನಿಯಮದನ್ವಯ ಯಾವುದೇ ರೀತಿಯ ಲೋಪದೋಷ ಸಂಭವಿಸದಂತೆ ಎಚ್ಚರಿಕೆಯನ್ನು ನೀಡಿತ್ತು ಆ ಹಿನ್ನಲೆಯಲ್ಲಿ ಎಲ್ಲರು ಕೂಡ ಎಚ್ಚರಿಕೆಯನ್ನು ವಹಿಸಿದ್ದರು.

ಚುನಾವಣಾ ಆಯೋಗದ ಪ್ರಕಾರ ವಿವಿಪ್ಯಾಟ್ ಮತ್ತು ಇವಿಎಮ್ ಗಳಿಗೆ ತಾಳೆ ಮಾಡಿ ಎಣಿಕೆ ಮಾಡಲು ಪ್ರತಿ ಸುತ್ತಿನಲ್ಲಿಯೂ ಒಂದು ಗಂಟೆಗಳ ಕಾಲವನ್ನು ತೆಗೆದುಕೊಂಡಿತು. ಪ್ರತಿ ಕ್ಷೇತ್ರದಲ್ಲಿ 1200-1400 ವಿವಿಪ್ಯಾಟ್ ಗಳ ಇರುತ್ತಿದ್ದವು.ಈ ಹಿನ್ನಲೆಯಲ್ಲಿ ಅವುಗಳನ್ನು ಎಣಿಕೆ ಮಾಡಬೇಕಾದ ಹೆಚ್ಚಿನ ಸಮಯ ಹಿಡಿಯಿತು ಎಂದು ಚುನಾವಣಾ ಆಯೋಗ ತಿಳಿಸಿದೆ.

 

 

Read More