Home> India
Advertisement

LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?

ಎಲ್‌ಪಿಜಿ ಸಿಲಿಂಡರ್ ವಿಷಯದಲ್ಲಿ ಈ ಪರಿಯ ಬೆಲೆಯೇರಿಕೆ ಹಿಂದೆಂದೂ ಆಗಿರಲಿಲ್ಲ. ಕಳೆದ 10 ತಿಂಗಳಲ್ಲಿ ಬರೋಬ್ಬರಿ ಶೇ.41ರಷ್ಟು ಬೆಲೆ ಏರಿಕೆಯಾಗಿದೆ.

LPG ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣನಾ? ಅಲ್ಲದಿದ್ದರೆ ಮತ್ತೇನು?

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿದ್ದು, ಗ್ರಾಹಕರ ಕಣ್ಣೀರಿಗೆ ಕಾರಣವಾಗಿದೆ. ಗ್ಯಾಸ್‌ ಸಿಲಿಂಡರ್‌ಗೆ ದುಬಾರಿ ಬೆಲೆ ತೆತ್ತು ಕಣ್ಣೀರು ಹರಿಸುವ ಬದಲು ಸೌದೆ ಒಲೆಯ ಹೊಗೆಯಿಂದ ಕಣ್ಣೀರು ಹರಿಸುವುದೇ ಲೇಸು ಎನ್ನುವಂತಾಗಿದೆ ಗ್ರಾಮೀಣ ಮಹಿಳೆಯರ ಪರಿಸ್ಥಿತಿ.

ಎಲ್‌ಪಿಜಿ ಸಿಲಿಂಡರ್ ವಿಷಯದಲ್ಲಿ ಈ ಪರಿಯ ಬೆಲೆಯೇರಿಕೆ ಹಿಂದೆಂದೂ ಆಗಿರಲಿಲ್ಲ. ಕಳೆದ 10 ತಿಂಗಳಲ್ಲಿ ಬರೋಬ್ಬರಿ ಶೇ.41ರಷ್ಟು ಬೆಲೆ ಏರಿಕೆಯಾಗಿದೆ. ಪ್ರತಿ ಸಿಲಿಂಡರ್‌ ಬೆಲೆ(Cylinder Price)ಯಲ್ಲಿ 237.5 ರೂಪಾಯಿ ಏರಿಕೆಯಾಗಿದೆ. ದಿಲ್ಲಿಯಲ್ಲಿ 2020ರ ಮೇ ನಲ್ಲಿ ಕೇವಲ 581.5 ರೂಪಾಯಿ ಇದ್ದ ಸಿಲಿಂಡರ್‌ ಬೆಲೆ 2021ರ ಮಾರ್ಚ್‌ 1ರ ವೇಳೆಗೆ 819 ರೂಪಾಯಿಗೆ ಏರಿಕೆಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

Viral Photo: ಶರ್ಟ್-ಪ್ಯಾಂಟ್ ಧರಿಸಿ, ತಲೆಗೆ ರುಮಾಲು ಸುತ್ತಿ, ಟಕ್ ನಲ್ಲಿ ಬೀದಿಗಿಳಿದ ಗಜರಾಜನ ಗಾಂಭೀರ್ಯ ನಡೆ

ದೇಶದಲ್ಲಿ ಎಲ್‌ಪಿಜಿ(LPG) ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಜತೆಗೆ ಬೆಲೆಯೂ ಏರುತ್ತಲೇ ಇದೆ. ಪ್ರಸ್ತುತ ದೇಶಾದ್ಯಂತ 28.8 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಈ ಪೈಕಿ ಇಂಡಿಯನ್‌ ಆಯಿಲ್‌ (ಐಒಸಿಎಲ್‌)ಗೆ 13.5 ಕೋಟಿ. ಭಾರತ್‌ ಪೆಟ್ರೋಲಿಯಂ (ಬಿಪಿಸಿಎಲ್‌)ಗೆ 7.4 ಕೋಟಿ, ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿ) 7.9 ಕೋಟಿ ಗ್ರಾಹಕರನ್ನು ಹೊಂದಿವೆ.

Hindu Marriage Act - ಪತಿಯ ಜೊತೆ ವಾಸಕ್ಕೆ ಒತ್ತಾಯಿಸಲು ಪತ್ನಿ ಗುಲಾಮ ಅಥವಾ ಸಂಪತ್ತು ಅಲ್ಲ: ಸುಪ್ರೀಂ

2014-15ರಲ್ಲಿ ಕೇವಲ 14.8 ಕೋಟಿ ಇದ್ದ ಎಲ್‌ಪಿಜಿ ಗ್ರಾಹಕರ ಸಂಖ್ಯೆ ಐದೇ ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಮುಖ್ಯವಾಗಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಯಿಂದ ದೇಶದ ಎಲ್‌ಪಿಜಿ ಬಳಕೆಯಲ್ಲಿ ಗಣನೀಯ ಏರಿಕೆಯಾಗಿದೆ.

"ಪ್ರಧಾನಿ ಮೋದಿಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುವುದು ಗಂಗೂಲಿಗೆ ಬಿಟ್ಟದ್ದು"

ಎಲ್‌ಪಿಜಿ ಬಳಕೆದಾರರ ಸಂಖ್ಯೆ ಏರಿಕೆಯಾಗಿರುವುದೇ ಈಗ ಆತಂಕಕ್ಕೆ ಕಾರಣವಾಗಿರುವುದು. ಕಾರಣ ಉಜ್ವಲಾ ಯೋಜನೆ(Ujjwala Scheme)ಯಡಿ ಬಡತನ ರೇಖೆಗಿಂತ ಕೆಳಗಿರುವ 8 ಕೋಟಿಗೂ ಹೆಚ್ಚು ಕುಟುಂಬಗಳು ಎಲ್‌ಪಿಜಿ ಗ್ರಾಹಕರಾಗಿದ್ದಾರೆ. ಹೀಗಾಗಿ ಬೆಲೆ ಏರಿಕೆ ಬಿಸಿ ಈ ಬಡ ಗ್ರಾಹಕರಿಗೂ ಅನ್ವಯವಾಗುತ್ತದೆ. ಇದಲ್ಲದೆ, 2020ರ ಮೇ ತಿಂಗಳಿಂದ ಎಲ್‌ಪಿಜಿ (ಡಿಬಿಟಿಎಲ್) ಸಬ್ಸಿಡಿಯನ್ನು ನಿಲ್ಲಿಸಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಅದೇನೆ ಇದ್ದರೂ ಎಲ್‌ಪಿಜಿ ಬೆಲೆಯಲ್ಲಿ ಸತತ ಏರಿಕೆಯಾಗುತ್ತಿರುವುದು ಆತಂಕದ ಜತೆಗೆ ಕುತೂಹಲವನ್ನೂ ಮೂಡಿಸಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ಎಲ್‌ಪಿಜಿಯ ಬೆಲೆಯನ್ನು ಆಮದು ಸಮತೋಲ ಬೆಲೆ (IPP) ಸೂತ್ರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಅಂತಾರಾಷ್ಟ್ರೀಯ ಉತ್ಪನ್ನಗಳ ಬೆಲೆಯನ್ನು ಆಧರಿಸಿದೆ. ಸೌದಿ ಅರಾಮ್ಕೊ ಒಪ್ಪಂದದ ಬೆಲೆಗಳನ್ನು ಎಲ್‌ಪಿಜಿ ಬೆಲೆ ನಿಗದಿಗೆ ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಒಟ್ಟಾರೆ ಐಪಿಪಿ ಸೂತ್ರವು, ಸೌದಿ ಅರಾಮ್ಕೊ ಬೆಲೆ, ಆನ್-ಬೋರ್ಡ್ ಬೆಲೆ, ಸಾಗರ ಸರಕು ಶುಲ್ಕ, ಅಬಕಾರಿ ಸುಂಕ ಮತ್ತು ಬಂದರು ಬಾಕಿಗಳನ್ನು ಒಳಗೊಂಡಿದೆ.

KVS Recruitment 2021: ಕೇಂದ್ರೀಯ ವಿದ್ಯಾಲಯದಲ್ಲಿ Exam ಇಲ್ಲದೆಯೇ ಸಿಗಲಿದೆ ಕೆಲಸ

ಮೇಲಿನ ಶುಲ್ಕ ಒಂದು ವರ್ಗವಾದರೆ, ಸ್ಥಳೀಯವಾಗಿ ಸರಕು ಶುಲ್ಕ, ಬಾಟ್ಲಿಂಗ್ (ಸಿಲಿಂಡರ್‌ಗೆ ತುಂಬುವ) ಶುಲ್ಕ, ಮಾರ್ಕೆಟಿಂಗ್ ವೆಚ್ಚ, ಇತರೆ ಉತ್ಪಾದನಾ ವೆಚ್ಚ, ವ್ಯಾಪಾರಿ ಆಯೋಗಗಳು ಮತ್ತು ಸರಕು ಮತ್ತು ಸೇವಾ ತೆರಿಗೆಗಳು ಇವೆಲ್ಲವನ್ನೂ ಒಳಗೊಂಡಂತೆ ಭಾರತದಲ್ಲಿ ಎಲ್‌ಪಿಜಿ ರೀಟೇಲ್‌ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಇದಲ್ಲದೆ, ಡಾಲರ್‌ ಎದುರು ರೂಪಾಯಿ(Rupees) ಮೌಲ್ಯದ ಏರಿಳಿತಗಳೂ ಕೂಡ ಎಲ್‌ಪಿಜಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ನೌಕರರಿಗೊಂದು ಸಿಹಿ ಸುದ್ದಿ: ಮಾ.4  ರಂದು 2020-21ರ EPF 'ಬಡ್ಡಿ ದರ' ಪ್ರಕಟ!

ಭಾರತೀಯ ಬಾಸ್ಕೆಟ್ ಕಚ್ಚಾ ತೈಲ ಬೆಲೆ 2020ರ ಮೇ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 20.20 ಡಾಲರ್‌ ಇತ್ತು. ಆದರೆ, 2021ರ ಮಾರ್ಚ್‌ಗೆ 64.54 ಡಾಲರ್‌ಗೆ ಏರಿಕೆಯಾಗಿದೆ. 2020ರ ಮೇ ನಲ್ಲಿ ಪ್ರತಿ ಬ್ಯಾರೆಲ್‌ ಕೇವಲ 19 ಡಾಲರ್‌ ಇದ್ದ ಬ್ರೆಂಟ್ ಕಚ್ಚಾ ಬೆಲೆ ಬ್ಯಾರೆಲ್‌ಗೆ 63.77 ಡಾಲರ್‌ಗೆ ಏರಿಕೆಯಾಗಿದೆ.

ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಾಗುತ್ತದೆಯೇ? ಸುಪ್ರಿಂಕೋರ್ಟ್ ಪ್ರಶ್ನೆ

ಭಾರತದ ಎಲ್‌ಪಿಜಿಯು ಶೇ.60ರಷ್ಟು ಬ್ಯುಟೇನ್ ಮತ್ತು ಶೇ.40 ಪ್ರೋಪೇನ್ ಮಿಶ್ರಣವಾಗಿದೆ. ಹೀಗಾಗಿ ಎಲ್‌ಪಿಜಿ ಬೆಲೆ(LPG Price) ನಿಗದಿಯಲ್ಲಿ ಬ್ಯೂಟೇನ್‌ ಮತ್ತು ಪ್ರೊಪೇನ್‌ ಬೆಲೆಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. 2020ರ ಮೇ ನಿಂದೀಚೆಗೆ ಬ್ಯೂಟೇನ್ ಬೆಲೆಯಲ್ಲಿ ಶೇ.148ರಷ್ಟು ಹೆಚ್ಚಾಗಿದ್ದರೆ, ಪ್ರೊಪೇನ್‌ ಬೆಲೆಯಲ್ಲಿ ಶೇ.171ರಷ್ಟು ಏರಿಕೆ ಯಾಗಿದೆ. ಪ್ರಸ್ತುತ ಒಂದು ಟನ್‌ ಪ್ರೊಪೇನ್‌ ಬೆಲೆ 625 ಡಾಲರ್‌ ಇದೆ. ಪ್ರತಿ ಟನ್‌ ಬ್ಯೂಟೇನ್‌ ಬೆಲೆ 595 ಡಾಲರ್‌ ನಿಗದಿಯಾಗಿದೆ. ಮತ್ತೊಂದೆಡೆ, ಮಾರ್ಚ್ 2 ರಂದು ವಿನಿಮಯ ದರ ಪ್ರತಿ ಡಾಲರ್‌ಗೆ 73.29 ರೂ.ಗಳಾಗಿದ್ದರೆ, ಮೇ ತಿಂಗಳಲ್ಲಿ ಪ್ರತಿ ಡಾಲರ್‌ಗೆ ಸರಾಸರಿ 76.23 ರೂ. ಇತ್ತು. ಡಾಲರ್‌ ಬೆಲೆ ಹೆಚ್ಚಳ ಕೂಡ ಎಲ್‌ಪಿಜಿ ಬೆಲೆ ಏರಿಕಗೆ ಒಂದು ಕಾರಣ.

Railway Platform Ticket ಬೆಲೆ ರೂ.50 , ಯಾವ ಸ್ಟೇಷನ್ ಗಳ ಮೇಲೆ ಈ ದರ ಅನ್ವಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More