Home> India
Advertisement

ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಏಕೆ? ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ಇದು ಡಿಎಂಆರ್‌ಸಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಏಕೆ? ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆ ಒದಗಿಸುವ ದೆಹಲಿ ಸರ್ಕಾರದ ಪ್ರಸ್ತಾವನೆಯ ಬಗ್ಗೆ ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಏಕೆ ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ, ಇದು ಡಿಎಂಆರ್‌ಸಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಲಾಭದಾಯಕ ಉಪಕ್ರಮವಲ್ಲ ಎಂದು ಹೇಳಿದೆ. 

ಸಾರ್ವಜನಿಕ ಹಣವನ್ನು ಸರಿಯಾಗಿ ಬಳಸಬೇಕು. ಅದನ್ನು ಸರಿಯಾದ ಉದ್ದೇಶವಿಲ್ಲದೆ ಉಚಿತವಾಗಿ ವಿತರಿಸುವುದನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದೆ.

ಆದರೆ, ದೆಹಲಿ ಸರ್ಕಾರಕ್ಕೆ ಪರಿಹಾರ ನೀಡಿ, ದೆಹಲಿ ಮೆಟ್ರೊದ ನಾಲ್ಕನೇ ಹಂತದ ಭೂಮಿಯ ವೆಚ್ಚಕ್ಕೆ ತಗಲುವ 50 ಪ್ರತಿಶತವನ್ನು ಹಣವನ್ನು ಕೇಂದ್ರ ಸರ್ಕಾರ ಭರಿಸಬೇಕು. ಈ ವಿಷಯದಲ್ಲಿ ಸಹಕರಿಸಲು ಕೇಂದ್ರವು ದೆಹಲಿ ಸರ್ಕಾರಕ್ಕೆ ಸುಮಾರು 600 ಕೋಟಿ ರೂ. ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು.

ಗಮನಾರ್ಹವಾಗಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ವರ್ಷದ ಜೂನ್‌ನಲ್ಲಿ ಡಿಟಿಸಿ ಬಸ್ಸುಗಳು ಮತ್ತು ದೆಹಲಿ ಮೆಟ್ರೊದಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕಾಗಿ ಎಲ್ಲಾ ಮೂರು ಸಾರ್ವಜನಿಕ ಸಾರಿಗೆಗಳಿಗೆ ಸಹಾಯಧನ ನೀಡುವುದಾಗಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಶಾಸಕರು ಮತ್ತು ಕೌನ್ಸಿಲರ್‌ಗಳಿಗೆ ನಗರದಾದ್ಯಂತ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಸರ್ಕಾರಿ ಬಸ್‌ಗಳು ಮತ್ತು ಮಹಾನಗರಗಳಲ್ಲಿ ಮಹಿಳೆಯರಿಗೆ ಸಾರ್ವಜನಿಕ ಪ್ರಯಾಣವನ್ನು ಮುಕ್ತಗೊಳಿಸುವ ದೆಹಲಿ ಸರ್ಕಾರದ ಪ್ರಸ್ತಾವನೆಯ ಬಗ್ಗೆ ಜನರ ಪ್ರತಿಕ್ರಿಯೆ ತಿಳಿಯುವಂತೆ ಸೂಚನೆ ನೀಡಿದ್ದರು. ಕೇಜ್ರಿವಾಲ್ ತಮ್ಮ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ಹೇಗಿರಲಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಈ ಸೂಚನೆಯನ್ನು ನೀಡಿದರು ಎಂದು ನಂಬಲಾಗಿದೆ.

ದೆಹಲಿ ಸರ್ಕಾರದ ಈ ಅಭಿಯಾನವನ್ನು ಸಾಕಷ್ಟು ಟೀಕಿಸಲಾಗಿದೆ. ಮೆಟ್ರೊ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸುವ ದೆಹಲಿ ಸರ್ಕಾರದ ಘೋಷಣೆಯ ಬಗ್ಗೆ ಕೇಂದ್ರ ವಸತಿ ಮತ್ತು ನಗರಾ ವ್ಯವಹಾರಗಳ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿದ್ದು, ಯಾವುದೇ ಯೋಜನೆಯನ್ನು ಘೋಷಿಸುವ ಮೊದಲು ಮೂಲ ಕರಡು ಸಿದ್ಧಪಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಪುರಿ, "ಯಾವುದೇ ಯೋಜನೆಯನ್ನು ಮೊದಲು ಘೋಷಿಸಿ ನಂತರ ಅದರ ಬಗ್ಗೆ ಪ್ರಸ್ತಾಪ ಸಿದ್ದಪಡಿಸುವಂತಹ ಕಾರ್ಯ ಒಳ್ಳೆಯದಲ್ಲ" ಎಂದಿದ್ದಾರೆ. 

ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಲು ದೆಹಲಿ ಸರ್ಕಾರದ ಯಾವುದೇ ಪ್ರಸ್ತಾವನೆ ಬಂದಿದೆಯೇ ಎಂದು ಅವರು ಸಚಿವಾಲಯದ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರು. ಅಧಿಕಾರಿಗಳಿಂದ ನಕಾರಾತ್ಮಕ ಪ್ರತಿಕ್ರಿಯೆ ಪಡೆದ ನಂತರ ಪುರಿ, ಕೇಜ್ರಿವಾಲ್ ಈ ಮೊದಲು ಕಾರ್ಯವಿಧಾನವನ್ನು ಅನುಸರಿಸದೆ ಯೋಜನೆಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು.

ದೆಹಲಿ ಮಾಜಿ ಮೆಟ್ರೋ ಮುಖ್ಯಸ್ಥ ಇ.ಶ್ರೀಧರನ್ ಕೂಡ ದೆಹಲಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಅದನ್ನು ತಪ್ಪು ಎಂದಿದ್ದರು. ದೆಹಲಿ ಮೆಟ್ರೊದಲ್ಲಿ ಮಹಿಳೆಯರ ಉಚಿತ ಪ್ರಯಾಣ ಎಂಬ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಶ್ರೀಧರನ್ ಪಿಎಂ ಮೋದಿಗೆ ಪತ್ರ ಬರೆದಿದ್ದಾರೆ. ದೆಹಲಿ ಸರ್ಕಾರದ ನಿರ್ಧಾರವನ್ನು ಹಾನಿಕಾರಕ ಎಂದು ಬಣ್ಣಿಸಿರುವ ಶ್ರೀಧರನ್, ಇದನ್ನು ಜಾರಿಗೆ ತರುವುದನ್ನು ತಡೆಯುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

Read More