Home> India
Advertisement

ತೆಲಂಗಾಣ ವಿಧಾನಸಭೆ ಚುನಾವಣೆ: ಯಾಕ ಪಕ್ಷಕ್ಕೆ ದೊರೆಯಲಿದೆ ಬಹುಮತ?

ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ತೆಲಂಗಾಣ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. 

ತೆಲಂಗಾಣ ವಿಧಾನಸಭೆ ಚುನಾವಣೆ: ಯಾಕ ಪಕ್ಷಕ್ಕೆ ದೊರೆಯಲಿದೆ ಬಹುಮತ?

ಹೈದರಾಬಾದ್: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ತೆಲಂಗಾಣ ವಿಧಾನಸಭೆಯಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. 

ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಬಹುಮತ ಪಡೆಯಲು 60 ಮ್ಯಾಜಿಕಲ್ ಸಂಖ್ಯೆ ಆಗಿದೆ. ಮತದಾನೋತ್ತರ ಸಮೀಕ್ಷೆ ಪ್ರಕಾರ ಟಿಆರ್ಎಸ್ ಗೆ ಪೂರ್ಣ ಬಹುಮತ ದೊರೆಯಲಿದೆ ಎನ್ನಲಾಗಿದೆ. ಆದರೆ, ಕೆಲವೊಂದು ಸಮೀಕ್ಷೆಗಳು ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂದಿವೆ. ಒಂದು ವೇಳೆ ಯಾವುದೇ ಪಕ್ಷ ಪೂರ್ಣ ಬಹುಮತ ಪಡೆಯದಿದ್ದರೆ, ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇದೆ. 

ಮತ್ತೊಂದೆಡೆ ತನ್ನ ಬೆಂಬಲವಿಲ್ಲದೆ ಯಾವ ಪಕ್ಷವೂ ಸರ್ಕಾರ ರಚಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಲಕ್ಷ್ಮಣ್ ಅವರು, ಒಂದು ವೇಳೆ ಯಾವ ಪಕ್ಷವೂ ಬಹುಮತ ಪಡೆಯದಿದ್ದಲ್ಲಿ, ಮುಂದೆ ರಚನೆಯಾಗುವ ಸರ್ಕಾರದ ಒಂದು ಮಹತ್ವಪೂರ್ಣ ಭಾಗವಾಗಿ ಬಿಜೆಪಿ ಇರಲಿದೆ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಥವಾ ಎಐಎಂಐಎಂಗೆ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದೆ. ಹೀಗಾಗಿ ಇದು ಸ್ಥಾನಗಳ ಗಳಿಕೆ ಮತ್ತು ಶೇಕಡಾವಾರು ಮತದಾನವನ್ನು ಹೆಚ್ಚಿಸಲಿದೆ.  ಇದು ಸೀಟುಗಳ ಸಂಖ್ಯೆಯನ್ನು ಮತ್ತು ಮತದಾನದ ಶೇಕಡಾವನ್ನು ಹೆಚ್ಚಿಸುತ್ತದೆ. ಒಂದು ವೇಳೆ ಜನಾದೇಶ ಅತಂತ್ರವಾದರೆ, ಬಿಜೆಪಿ TRS ಪಕ್ಷಕ್ಕೆ ಮಾತ್ರ ಬೆಂಬಲ ನೀಡಲಿದೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್, "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸರ್ಕಾರ ರಚನೆಯಲ್ಲಿ ಬಿಜೆಪಿ ಮುಖ್ಯ ಪಾತ್ರ ವಹಿಸಲಿದೆ ಎಂದಷ್ಟೇ ನಾನು ಹೇಳಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಲಕ್ಷ್ಮಣ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ TRS ವಕ್ತಾರ ಭಾನು ಪ್ರಸಾದ್, ನಮಗೆ ಯಾರ ಬೆಂಬಲದ ಅಗತ್ಯವಿಲ್ಲ. ನಮ್ಮದೇ ಸರ್ಕಾರ ರಚಿಸಲಿದ್ದೇವೆ. ಚುನಾವಣೆಯಲ್ಲಿ TRS ಏಕಾಂಗಿಯಾಗಿ ಸ್ಪರ್ಧಿಸಿದೆ. ಆದರೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು TRSನ ಕೆಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಐಎಂಐಎಂ ಕೆಲವು ಸ್ಥಾನಗಳನ್ನು ಪಡೆಯುವುದಾದರೆ, ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ರಚನೆಗೆ ಸ್ಥಾನಗಳ ಅಗತ್ಯ ಬಿದ್ದರೆ, ಎರಡೂ ಪಕ್ಷಗಳ ನಡುವೆ ಒಪ್ಪಂದದ ಆಧಾರದ ಮೇಲೆ ಸರ್ಕಾರ ರಚನೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಎಕ್ಸಿಟ್ ಪೋಲ್ ಪ್ರಜಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

India today-My Axis
ಬಿಜೆಪಿ: 1 - 3, ಕಾಂಗ್ರೆಸ್:  21-33, TRS: 79-91, ಇತರೆ: 4-7 

TimesNow-CNX
ಬಿಜೆಪಿ 1, ಕಾಂಗ್ರೆಸ್ 37, TRS 66, ಇತರೆ 9

NewsX-ITV Neta
ಬಿಜೆಪಿ 6, ಕಾಂಗ್ರೆಸ್ 46, TRS 57, ಇತರೆ 10

Republic -C Voter 
ಬಿಜೆಪಿ 4-7, ಕಾಂಗ್ರೆಸ್ 38-52, TRS 50-65, ಇತರೆ 8-14

Read More