Home> India
Advertisement

ಬಿಹಾರ ಚುನಾವಣೆಯಲ್ಲಿ ಕೊರೊನಾ ಇರಲಿಲ್ಲ,ರೈತರು ಹೋರಾಟಕ್ಕೆ ನಿಂತಾಗ ಮಾತ್ರ ಕೊರೊನಾ ಬಂದಿದೆ-ಯೋಗೇಂದ್ರ ಯಾದವ್

ಗುರುಗ್ರಾಮ್ ದಲ್ಲಿ ಹರಿಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಕೊರೊನಾ ಇರಲಿಲ್ಲ,ರೈತರು ಹೋರಾಟಕ್ಕೆ ನಿಂತಾಗ ಮಾತ್ರ ಕೊರೊನಾ ಬಂದಿದೆ-ಯೋಗೇಂದ್ರ ಯಾದವ್

ನವದೆಹಲಿ: ಗುರುಗ್ರಾಮ್ ದಲ್ಲಿ ಹರಿಯಾಣ ಪೊಲೀಸರು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ನಡೆಸಿದ ಯೋಗೇಂದ್ರ ಯಾದವ್ ರಾಜ್ಯದ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರು ಇತ್ತೀಚೆಗೆ ರೈತರೊಂದಿಗೆ ರ್ಯಾಲಿ ನಡೆಸಿದ್ದು ಏಕೆ ಎಂದು ಪ್ರಶ್ನಿಸಿದರು.ಮನೋಹರ್ಲಾಲ್ ಖಟ್ಟರ್ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಬಹಳ ವಿಚಿತ್ರ ಸಾಂಕ್ರಾಮಿಕ ಇದೆ ಎಂದು ಅವರು ವ್ಯಂಗ್ಯವಾಡಿದರು.

ನಮ್ಮ ಗುರಿ ರೈತ ವಿರೋಧಿ ಪಕ್ಷವನ್ನು ಸೋಲಿಸುವುದು - ಯೋಗೇಂದ್ರ ಯಾದವ್

Haryana Police intercepted us before we could get on the Jaipur Delhi highway. Now detained by the police for "breach of...

Posted by Yogendra Yadav on Wednesday, 25 November 2020

'ಮೂರು ದಿನಗಳ ಹಿಂದೆ, ದುಶ್ಯಂತ್ ಚೌತಲಾ ಸಾವಿರಾರು ರೈತರನ್ನು ಒಟ್ಟುಗೂಡಿಸಿದರು.ಅಲ್ಲಿ ಯಾವುದೇ ಮುಖವಾಡವಿಲ್ಲ, ಸಾಮಾಜಿಕ ದೂರವಿಲ್ಲ. ನಂತರ ಯಾವುದೇ ಸಾಂಕ್ರಾಮಿಕ ಇಲ್ಲ. ಬಿಹಾರ ಚುನಾವಣೆಯಲ್ಲಿ ಸಾಂಕ್ರಾಮಿಕ ರೋಗವಿರಲಿಲ್ಲ. ರೈತರು ಒಟ್ಟುಗೂಡಿದಾಗ ಮಾತ್ರ ಸಾಂಕ್ರಾಮಿಕ ರೋಗವಿದೆ. ಇದು ಬಹಳ ವಿಚಿತ್ರವಾದ ಕಾಯಿಲೆಯಾಗಿರಬೇಕು' ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಯೋಗೇಂದ್ರ ಯಾದವ್ ರನ್ನು ಬಂಧಿಸಿದ್ದು ಸರ್ವಾಧಿಕಾರಿ ಧೋರಣೆ-ಕಮಲ್ ಹಾಸನ್

ದೆಹಲಿಯತ್ತ ಸಾಗುತ್ತಿರುವ ಸಾವಿರಾರು ರೈತರು ತಡೆಯಲು ನೀರಿನ ಫಿರಂಗಿಗಳು, ಅಶ್ರುವಾಯು ಮತ್ತು ಗಲಭೆ ವಾಹನಗಳನ್ನು ಬಳಸುತ್ತಿರುವ ಹರಿಯಾಣ ಸರ್ಕಾರ, ಮೆರವಣಿಗೆಗೆ ಆಕ್ಷೇಪ ವ್ಯಕ್ತಪಡಿಸಲು ಸಾಂಕ್ರಾಮಿಕ ರೋಗವನ್ನು ಒಂದು ಕಾರಣವೆಂದು ಉಲ್ಲೇಖಿಸಿದೆ. ನಿನ್ನೆಯಿಂದ, ಇದು ರಾಜ್ಯದ ಕೆಲವು ಭಾಗಗಳಲ್ಲಿ ದೊಡ್ಡ ಕೂಟಗಳನ್ನು ನಿಷೇಧಿಸುವ ಆದೇಶಗಳನ್ನು ಘೋಷಿಸಿದೆ.

हरियाणा पुलिस ने मुझे और जय किसान आंदोलन के साथीयों को बिलासपुर के नजदीक राठीवास मोड़, दिल्ली जयपुर हाईवे के पास रोक...

Posted by Yogendra Yadav on Wednesday, 25 November 2020

'ಸರ್ಕಾರವು ಬಳಸುತ್ತಿರುವ ತಂತ್ರಗಳು ಭಾರತೀಯ ರಾಷ್ಟ್ರೀಯವಾದಿಗಳ ವಿರುದ್ಧ ಬ್ರಿಟಿಷರು ಬಳಸಿದ ತಂತ್ರಗಳಿಗೆ ಹೋಲುತ್ತವೆ" ಎಂದು ಯಾದವ್ ತಿಳಿಸಿದರು, ಈ ಹಿಂದೆ ದೇಶದ ಸ್ವಾತಂತ್ರ್ಯಕ್ಕಾಗಿ ಬಂಗಾಳದ ಹೋರಾಟಗಾರರು ಹೋರಾಡಿದಂತೆ, ಇಂದು ದೇಶಾದ್ಯಂತ ಪಂಜಾಬಿನ ರೈತರು ದೇಶದ ರೈತರ ಪರವಾಗಿ ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.

Read More