Home> India
Advertisement

ಇನ್ಮುಂದೆ ಎಲ್ಲಾ ಡಿವೈಸ್ ಗಳ ಮೇಲೂ ಕೂಡ ಕಾರ್ಯ ನಿರ್ವಹಿಸಲಿದೆ WhatsApp

ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಒಂದು ವೇಳೆ ಕಾರ್ಯಗತವಾದರೆ ಎಲ್ಲಾ ರೀತಿಯ ಮೊಬೈಲ್ ಬಳಕೆದಾರರು ವಾಟ್ಸ್ ಆಪ್ ಬಳಸಬಹುದಾಗಿದೆ. ಅಂದರೆ ಇದು ಪ್ರತಿಯೊಂದು ಡಿವೈಸ್ ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಇದು ಸೀಮಿತ ಪ್ಲಾಟ್ಫಾರ್ಮ್ ಗಳನ್ನು ಮಾತ್ರ ಬೆಂಬಲಿಸುತ್ತದೆ. ಅಂದರೆ, ಸದ್ಯ ಇದು ಕೇವಲ ಅಂಡ್ರಾಯಿಡ್ ಹಾಗೂ ಐಓಎಸ್ ನಂತಹ ಪ್ಲಾಟ್ ಫಾರ್ಮ್ ಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬುದು ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.

ಇನ್ಮುಂದೆ ಎಲ್ಲಾ ಡಿವೈಸ್ ಗಳ ಮೇಲೂ ಕೂಡ ಕಾರ್ಯ ನಿರ್ವಹಿಸಲಿದೆ WhatsApp

ನವದೆಹಲಿ: ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ವಿಶೇಷ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇದು ಒಂದು ವೇಳೆ ಕಾರ್ಯಗತವಾದರೆ ಎಲ್ಲಾ ರೀತಿಯ ಮೊಬೈಲ್ ಬಳಕೆದಾರರು ವಾಟ್ಸ್ ಆಪ್ ಬಳಸಬಹುದಾಗಿದೆ. ಅಂದರೆ ಇದು ಪ್ರತಿಯೊಂದು ಡಿವೈಸ್ ಗಳ ಮೇಲೆ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಇದು ಸೀಮಿತ ಪ್ಲಾಟ್ಫಾರ್ಮ್ ಗಳನ್ನು ಮಾತ್ರ ಬೆಂಬಲಿಸುತ್ತದೆ. ಅಂದರೆ, ಸದ್ಯ ಇದು ಕೇವಲ ಅಂಡ್ರಾಯಿಡ್ ಹಾಗೂ ಐಓಎಸ್ ನಂತಹ ಪ್ಲಾಟ್ ಫಾರ್ಮ್ ಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬುದು ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ WABetaInfo ಈ ವೈಶಿಷ್ಟ್ಯದ ಮೇಲೆ ವೇಗವಾಗಿ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲಿಯೇ ಇದು ಬಳಕೆದಾರರಿಗೆ ತಲುಪಲಿದೆ ಎನ್ನಲಾಗಿದೆ. ಈ ವೈಶಿಷ್ಟ್ಯದಿಂದ ಎಲ್ಲಾ ರೀತಿಯ ಬಳಕೆದಾರರು ವಾಟ್ಸ್ ಆಪ್ ಮೇಲೆ ಚಾಟಿಂಗ್ ಹಾಗೂ ಇತರೆ ವೈಶಿಷ್ಟ್ಯಗಳ ಲಾಭ ಪಡೆಯಬಹುದಾಗಿದೆ.

ಇದಕ್ಕೂ ಮೊದಲು ವಾಟ್ಸ್ ಆಪ್ ಒಂದು ಹೊಸ ವೈಶಿಷ್ಟ್ಯವನ್ನು ಜಾರಿಗೆ ತಂದಿದ್ದು, ಈ ವೈಶಿಷ್ಟ್ಯ ಬಳಕೆದಾರರಿಗೆ ಹೊಸ ನಂಬರ್ ಸೇವ್ ಮಾಡುವುದನ್ನು ಸುಲಭಗೊಳಿಸಲಿದೆ ಎನ್ನಲಾಗಿತ್ತು. ಈ ವೈಶಿಷ್ಟ್ಯ ಬಳಸಿ ನೀವು ಯಾವುದೇ ಓರ್ವ ಬಳಕೆದಾರನ ಹೆಸರು ಅಥವಾ ಮೊಬೈಲ್ ನಂಬರ್ ಟೈಪ್ ಮಾಡದೆಯೇ ಕೇವಲ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅವರ ನಂಬರ್ ಅನ್ನು ಸೇವ್ ಮಾಡಬಹುದು. ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ಅಂಡ್ರಾಯಿಡ್ ಹಾಗೂ ಐಓಎಸ್ ಗಳಲ್ಲಿ ಬಳಸಲಾಗುವ ನೂತನ ಬೀಟಾ ವರ್ಜನ್ ನಲ್ಲಿ ಆರಂಭಿಸಿದೆ.

ಇದಕ್ಕೂ ಮೊದಲು ಪ್ರಕಟಗೊಂಡ ಒಂದು ಸುದ್ದಿಯ ಪ್ರಕಾರ ವಾಟ್ಸ್ ಆಪ್ ಗೆ ತೀವ್ರ ಪೈಪೋಟಿ ನೀಡಲು Telegram ಮುಂದಾಗಿದೆ ಎನ್ನಲಾಗಿದ್ದು, ಈ ಸಾಮಾಜಿಕ ಮಾಧ್ಯಮ ಆಪ್ ಕೂಡ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. Telegram ತನ್ನ ಪ್ಲಾಟ್ ಫಾರ್ಮ್ ನಲ್ಲಿ ಇನ್ ಆಪ್ ವೀಡಿಯೊ ಎಡಿಟರ್, ಟೂ ಸ್ಟೆಪ್ ವೆರಿಫಿಕೇಶನ್, ಅನಿಮೇಟೆಡ್ ಸ್ಟಿಕರ್, ಸ್ಪಿಕಿಂಗ್ ಜೀಫ್ ಹಾಗೂ ಇತರೆ ನೂತನ ವೈಶಿಷ್ಟ್ಯಗಳನ್ನು ಜೋಡಿಸಿದೆ. ಇದಲ್ಲದೆ video enhancement ವೈಶಿಷ್ಟ್ಯ ಕೂಡ ಇದರಲ್ಲಿ ಲಭ್ಯವಿದೆ.

Read More