Home> India
Advertisement

ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಕಾಂಗ್ರೆಸ್ ಪಾತ್ರವೇನು?

ಮಹಾರಾಷ್ಟ್ರದಲ್ಲಿ(Maharashtra) ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂಬೈಯಿಂದ ದೆಹಲಿಗೆ ರಾಜಕೀಯ ಆಂದೋಲನ ತೀವ್ರಗೊಂಡಿದೆ. ಶಿವಸೇನೆ(Shiv Sena)  ಮತ್ತು ಎನ್‌ಸಿಪಿ(NCP) ನಡುವೆ ಹೊಸ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್(Congress) ಪಾತ್ರ ಏನು ಎಂದು ಚರ್ಚಿಸಲು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
 

ಮಹಾರಾಷ್ಟ್ರದ ಹೊಸ ಸರ್ಕಾರದಲ್ಲಿ ಕಾಂಗ್ರೆಸ್ ಪಾತ್ರವೇನು?

ನವದೆಹಲಿ: ಮಹಾರಾಷ್ಟ್ರದಲ್ಲಿ(Maharashtra)  ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂಬೈಯಿಂದ ದೆಹಲಿಗೆ ರಾಜಕೀಯ ಚಳುವಳಿಗಳು ತೀವ್ರಗೊಂಡಿವೆ. ಶಿವಸೇನೆ(Shiv Sena)  ಮತ್ತು ಎನ್‌ಸಿಪಿ(NCP) ನಡುವೆ ಹೊಸ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್(Congress) ಪಾತ್ರ ಏನು ಎಂದು ಚರ್ಚಿಸಲು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ದೆಹಲಿಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi)  ಅವರ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಪರಿಸ್ಥಿತಿಯನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಮತ್ತೊಂದೆಡೆ, ಶರದ್ ಪವಾರ್ ಅವರು ಮುಂಬೈನಲ್ಲಿ ಪಕ್ಷದ ಶಾಸಕರ ಸಭೆ ಕರೆದಿದ್ದಾರೆ. ಮಹಾರಾಷ್ಟ್ರದ ಹೊಸ ಸರ್ಕಾರ ರಚನೆಯ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುವುದು.

ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಕೇಳಿದಾಗ, 'ಇಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ಸಭೆ ನಡೆಯಲಿದೆ. ಹೈಕಮಾಂಡ್‌ನ ಸೂಚನೆಗಳ ಪ್ರಕಾರ ನಾವು ಮುಂದುವರಿಯುತ್ತೇವೆ. ಆದರೆ ನಮ್ಮ ನಿರ್ಧಾರ ಮತ್ತು ಜನರ ನಿರ್ಧಾರವೆಂದರೆ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು' ಎಂದಿದ್ದಾರೆ.

ಎನ್‌ಡಿಎ ತೊರೆಯಲಿದೆಯೇ ಶಿವಸೇನೆ?
ಇದಕ್ಕೂ ಮುನ್ನ ಸೋಮವಾರ ಬೆಳಿಗ್ಗೆ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಶಿವಸೇನೆ ಕೋಟಾದಿಂದ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಾಲಿ ಸಚಿವರಾಗಿದ್ದ ಅರವಿಂದ ಸಾವಂತ್ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದರು. ಸಾವಂತ್ ಸ್ವತಃ ಟ್ವೀಟ್ ಮಾಡಿ ರಾಜೀನಾಮೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಗೆ ಮುನ್ನ, ಸ್ಥಾನ ಹಂಚಿಕೆ ಮತ್ತು ಅಧಿಕಾರ ಹಂಚಿಕೆ ಕುರಿತು ಸೂತ್ರವನ್ನು ನಿರ್ಧರಿಸಲಾಗಿದೆ. ಈ ಸೂತ್ರವನ್ನು ಇಬ್ಬರೂ ಒಪ್ಪಿಕೊಂಡರು.ಈಗ, ಈ ಸೂತ್ರವನ್ನು ನಿರಾಕರಿಸುವ ಮೂಲಕ, ಶಿವಸೇನೆಗೆ ಸುಳ್ಳು ಹೇಳುವ ಪ್ರಯತ್ನ ನಡೆಯುತ್ತಿದೆ. ಶಿವಸೇನೆ ಸತ್ಯದ ಪಕ್ಷ. ದೆಹಲಿ ಸರ್ಕಾರದ ಇಂತಹ ಸುಳ್ಳು ವಾತಾವರಣದಲ್ಲಿ ಏಕೆ ಇರಬೇಕು? ಎಂದು ಅರವಿಂದ ಸಾವಂತ್ ಹೇಳಿದ್ದಾರೆ.

Read More