Home> India
Advertisement

West Bengal Lockdown : 15 ದಿನ ಸಂಪೂರ್ಣ 'ಲಾಕ್​ಡೌನ್ ಘೋಷಿಸಿದ'​ ಪಶ್ಚಿಮ ಬಂಗಾಳ ಸರ್ಕಾರ!

 ಮೇ 16 ರಿಂದ 30 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್

West Bengal Lockdown : 15 ದಿನ ಸಂಪೂರ್ಣ 'ಲಾಕ್​ಡೌನ್ ಘೋಷಿಸಿದ'​ ಪಶ್ಚಿಮ ಬಂಗಾಳ ಸರ್ಕಾರ!

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ದಿನೆ ದಿನೆ ಕೊರೋನಾ ಪ್ರಕರಣ ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 16 ರಿಂದ 30 ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ. ಈ ಲಾಕ್​ಡೌನ್​ ನಾಳೆ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಸೀಮಿತ ಅವಕಾಶವಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ನಿನ್ನೆ ಬಂಗಾಳದಲ್ಲಿ 20,846 ಹೊಸ ಕೊರೋನಾ ಪ್ರಕರಣಗಳು(Corona Case) ದಾಖಲಾಗಿವೆ ಮತ್ತು 136 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪ್ರಸ್ತುತ ಕೋವಿಡ್ ಸನ್ನಿವೇಶದಿದಂದಾಗಿ ಎಲ್ಲಾ ಖಾಸಗಿ, ಸರ್ಕಾರಿ ಕಛೇರಿಗಳನ್ನು ಬಂದ್ ಮಾಡಲಾಗುವುದು ಮತ್ತು ತುಂಬಾ ತುರ್ತು ಪರಿಸ್ಥಿತಿ ಬಂದರೆ ಮಾತ್ರ ಕಾರ್ಯನಿರ್ವಹಿಸುವವು ಎಂದು ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂದ್ಯೋಪಾಧ್ಯಾಯ್​ ಹೇಳಿದ್ದಾರೆ.

ಇದನ್ನೂ ಓದಿ : West Bengal ಸಿಎಂ ಮಮತಾ ಬ್ಯಾನರ್ಜಿ ಸಹೋದರ ಕರೋನಾಗೆ ಬಲಿ

ಶಾಲೆಗಳು, ಕಾಲೇಜುಗಳು(School-College), ದೋಣಿ ಸೇವೆಗಳು, ಜಿಮ್‌ಗಳು, ಸಿನಿಮಾ ಹಾಲ್‌ಗಳು, ಸಲೂನ್‌ಗಳು, ಈಜುಕೊಳಗಳು, ಸ್ಥಳೀಯ ರೈಲುಗಳು, ಮೆಟ್ರೋ ಮತ್ತು ಅಂತರರಾಜ್ಯ ಬಸ್/ರೈಲು ಸೇವೆಗಳು ಸಹ ಮುಚ್ಚಲ್ಪಡುತ್ತವೆ ಎಂದಿದ್ದಾರೆ. ಖಾಸಗಿ ಕಾರು, ಟ್ಯಾಕ್ಸಿ, ಆಟೋರಿಕ್ಷಾಗಳ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ : PM Kisan: ನಿಮಗೂ ಪಿಎಂ ಕಿಸಾನ್ ಹಣ ಬಂದಿಲ್ಲವೇ? ತಕ್ಷಣವೇ ಈ ಕೆಲಸ ಮಾಡಿ

ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಕಾಲಾವಕಾಶ ಮಾಡಿಕೊಟ್ಟಿದ್ದು, ಹಣ್ಣು, ತರಕಾರಿ(Vegetables), ಹಾಲು, ಬ್ರೆಡ್​​ನಂತಹ ಅಗತ್ಯ ವಸ್ತುಗಳನ್ನು ಮಾರುವ ಮಾರುಕಟ್ಟೆಗಳು ಈ ಸಮಯದಲ್ಲಿ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಬ್ಯಾಂಕ್​ಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಓಡಾಟ ಹೊರತುಪಡಿಸಿ, ರಾತ್ರಿ ಕರ್ಫ್ಯೂ ಮುಂದುವರಿಯಲಿದೆ.

ಇದನ್ನೂ ಓದಿ : Corona ರೋಗಿಗಳಿಗೆ 'ಆಮ್ಲಜನಕ'ವಾಗಿ ಕಾರ್ಯನಿರ್ವಹಿಸಲಿದೆ DRDO ಡ್ರಗ್

ರಾಜ್ಯದಲ್ಲಿ ಯಾವುದೇ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜನ ಸೇರಲು ಅವಕಾಶ ಇರುವುದಿಲ್ಲ. ಮದುವೆ(Marriage)ಗಳಿಗೆ 50 ಜನರಿಗೆ ಮಾತ್ರ ಅವಕಾಶವಾದರೆ, ಅಂತ್ಯಕ್ರಿಯೆಯಲ್ಲಿ 20 ಜನ ಭಾಗವಹಿಸಬಹುದು ಎಂದು ಸರ್ಕಾರ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More