Home> India
Advertisement

Weather Update: ಮುಂದಿನ 2 ದಿನಗಳಲ್ಲಿ ಈ ಭಾಗಗಳಿಗೆ ಮಳೆರಾಯನ ಎಂಟ್ರಿ: ಭಾರೀ ವರ್ಷಧಾರೆಯ ಮುನ್ಸೂಚನೆ ಕೊಟ್ಟ ಇಲಾಖೆ

Rain Update: ಹವಾಮಾನ ಇಲಾಖೆಯು ಏಪ್ರಿಲ್ 28 ರವರೆಗೆ ದೇಶದ ಪೂರ್ವ ಭಾಗದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆ ಮುಂದುವರೆಯಲಿದೆ ಎಂದು ಹೇಳಿದೆ. ಮತ್ತೊಂದೆಡೆ, ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾರತದ ತಾಪಮಾನದಲ್ಲಿ ಕ್ರಮೇಣ ಹೆಚ್ಚಳವಾಗಬಹುದು ಎಂದೂ ಸಹ ಹೇಳಿದೆ.

Weather Update: ಮುಂದಿನ 2 ದಿನಗಳಲ್ಲಿ ಈ ಭಾಗಗಳಿಗೆ ಮಳೆರಾಯನ ಎಂಟ್ರಿ: ಭಾರೀ ವರ್ಷಧಾರೆಯ ಮುನ್ಸೂಚನೆ ಕೊಟ್ಟ ಇಲಾಖೆ

Rain Update: ಏಪ್ರಿಲ್ ತಿಂಗಳು ಮುಗಿಯುತ್ತಿದೆ. ಆದರೆ ಹವಾಮಾನ ಇನ್ನೂ ಬದಲಾವಣೆ ಕಂಡಿಲ್ಲ. ಪ್ರತಿ ವರ್ಷದಂತೆ ಏಪ್ರಿಲ್‌’ನಿಂದಲೇ ಬಿಸಿಲಿನ ಝಳ ಆರಂಭವಾಗಿದ್ದು, ಮಧ್ಯಾಹ್ನದ ನಂತರ ರಸ್ತೆಗೆ ಇಳಿಯಲು ಜನ ಪರದಾಡುವಂತಾಗಿದೆ. ಆದರೆ ಇದೀಗ ಮುಂಗಾರು ಪೂರ್ವ ಮಳೆಯು ಕಳೆದ 2-3 ದಿನಗಳಿಂದ ಉತ್ತರ ಬಯಲು ಪ್ರದೇಶಗಳು, ಮಧ್ಯ, ಪೂರ್ವ, ಈಶಾನ್ಯ ಮತ್ತು ದಕ್ಷಿಣ ಭಾರತದ ಭಾಗಗಳಲ್ಲಿ ಬೀಳುತ್ತಿದೆ. ಈ ಮಳೆಯು ದೇಶದಲ್ಲಿ ಬಿಸಿಗಾಳಿಯ ಪರಿಣಾಮವನ್ನು ಕೊನೆಗೊಳಿಸುತ್ತಿದೆ.

ಹವಾಮಾನ ಇಲಾಖೆಯು ಏಪ್ರಿಲ್ 28 ರವರೆಗೆ ದೇಶದ ಪೂರ್ವ ಭಾಗದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆ ಮುಂದುವರೆಯಲಿದೆ ಎಂದು ಹೇಳಿದೆ. ಮತ್ತೊಂದೆಡೆ, ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾರತದ ತಾಪಮಾನದಲ್ಲಿ ಕ್ರಮೇಣ ಹೆಚ್ಚಳವಾಗಬಹುದು ಎಂದೂ ಸಹ ಹೇಳಿದೆ.

ಇದನ್ನೂ ಓದಿ: Operation Kaveri: ಹಿಂಸಾಚಾರ ಪೀಡಿತ ಸುಡಾನ್ ನಿಂದ ಭಾರತೀಯರನ್ನು ಕರೆತರಲು ಸಿದ್ಧಗೊಂಡಿದೆ 'ಜೈಶಂಕರ್ ಪ್ಲಾನ್'

ಈ ರಾಜ್ಯಗಳಲ್ಲಿ ಭಾರೀ ವರ್ಷಧಾರೆ:

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಏಪ್ರಿಲ್ 28 ರಿಂದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ದಕ್ಷಿಣ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮಳೆ ಪ್ರಾರಂಭವಾಗಬಹುದು. ಈ ಮಳೆಯು ಕ್ರಮೇಣ ದೇಶದ ಬಹುತೇಕ ಭಾಗಗಳನ್ನು ಆವರಿಸುತ್ತದೆ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ ಹವಾಮಾನ ಹೀಗಿರುತ್ತದೆ!

ಮೇ ತಿಂಗಳ ಹವಾಮಾನದ ಬಗ್ಗೆ ಸಂಸ್ಥೆಯು ಅಪ್ಡೇಟ್ ನೀಡಿದೆ. ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಮೇ ಮೊದಲ ವಾರದಲ್ಲಿ ಮಳೆಯಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಮೇ ಅನ್ನು ವರ್ಷದ ಅತ್ಯಂತ ಬಿಸಿ ತಿಂಗಳುಗಳೆಂದು ಪರಿಗಣಿಸಲಾಗಿದೆ, ಆದರೆ ನಿರಂತರ ಮಳೆಯ ಈ ಚಟುವಟಿಕೆಗಳು ಜನರಿಗೆ ಶಾಖದ ಅಲೆ ಮತ್ತು ಬಿಸಿ ವಾತಾವರಣದಿಂದ ಹೆಚ್ಚಿನ ಮಟ್ಟಿಗೆ ಪರಿಹಾರವನ್ನು ನೀಡುತ್ತದೆ ಎನ್ನಬಹುದು. ಆದರೆ ಈ ಮಳೆಯಿಂದಾಗಿ ಗೋಧಿ ಮತ್ತು ಸಾಸಿವೆ ಬೆಳೆಗಳ ಕೊಯ್ಲು ಸಮಸ್ಯೆ ಎದುರಿಸುವ ಸಂಭವವಿದೆ.

ಮುಂದಿನ 24 ಗಂಟೆಗಳಲ್ಲಿ ಇಲ್ಲಿ ಮಳೆ:

ಮುಂದಿನ 24 ಗಂಟೆಗಳಲ್ಲಿ ತಮಿಳುನಾಡು, ಕೇರಳ, ಕರ್ನಾಟಕದ ದಕ್ಷಿಣ ಭಾಗ, ತೆಲಂಗಾಣ, ವಿದರ್ಭ, ಆಂಧ್ರಪ್ರದೇಶ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದೋ ಎರಡೋ ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ಛತ್ತೀಸ್‌’ಗಢದಲ್ಲಿ ಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Train Coach Number: ರೈಲು ಬೋಗಿಗಳಲ್ಲಿ ಬರೆಯಲಾದ 5 ಅಂಕಿಗಳ ರಹಸ್ಯವೇನು ಗೊತ್ತಾ? ಇದರ ಲೆಕ್ಕಾಚಾರದಲ್ಲಿ ರೈಲಿನ ಜಾತಕವೇ ಅಡಗಿದೆ!

ಅದೇ ರೀತಿ, ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯದ ಕೆಲವು ಭಾಗಗಳು, ನಾಗಾಲ್ಯಾಂಡ್, ಸಿಕ್ಕಿಂ, ಕರ್ನಾಟಕದ ಕೆಲ ಭಾಗಗಳು, ಮಹಾರಾಷ್ಟ್ರ ಮತ್ತು ಉತ್ತರಾಖಂಡದ 1 ಅಥವಾ 2 ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದೆಹಲಿ-ಎನ್‌’ಸಿಆರ್ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More