Home> India
Advertisement

ಆಂಧ್ರ ಪ್ರದೇಶ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

ಪ್ರಕಾಶಂ ಬ್ಯಾರೇಜ್ ಬಳಿ 15 ಅಡಿಗಿಂತ ಹೆಚ್ಚು ಎತ್ತರದಲ್ಲಿ ನೀರು ತುಂಬಿ ಹರಿಯುತ್ತಿದೆ.

ಆಂಧ್ರ ಪ್ರದೇಶ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

ವಿಜಯವಾಡ (ಆಂಧ್ರಪ್ರದೇಶ): ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಪ್ರಕಾಶಂ ಬ್ಯಾರೇಜ್‌ನ 70 ಕ್ರೆಸ್ಟ್ ಗೇಟ್‌ಗಳನ್ನು ತೆಗೆದ ಎರಡು ದಿನಗಳ ನಂತರ ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಪುಲಿಚಿಂಥಾಲಾ ಯೋಜನೆಯಿಂದ ಹೊರಹರಿವು ಇಂದು 7.52 ಲಕ್ಷ ಕ್ಯೂಸೆಕ್ ಆಗಿದ್ದರೆ, ಪ್ರಕಾಶಂ ಬ್ಯಾರೇಜ್‌ನಿಂದ ಒಳಹರಿವು 6.57 ಲಕ್ಷ ಕ್ಯೂಸೆಕ್‌ಗೆ ದಾಖಲಾಗಿದೆ. ಪ್ರಕಾಶಂ ಬ್ಯಾರೇಜ್ ಬಳಿ 15 ಅಡಿಗಿಂತ ಹೆಚ್ಚು ಎತ್ತರದಲ್ಲಿ ನೀರು ತುಂಬಿ ಹರಿಯುತ್ತಿದೆ.

ಆಗಸ್ಟ್ 18 ರಿಂದ ಆಗಸ್ಟ್ 20 ರವರೆಗೆ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಶುಕ್ರವಾರ ಮುನ್ಸೂಚನೆ ನೀಡಿದ್ದು, ಕೃಷ್ಣಾ ನದಿ ತೀರದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.

Read More