Home> India
Advertisement

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ - Mithun Chakraborty ವಿಚಾರಣೆ ನಡೆಸಿದ ಪೊಲೀಸರು

ಉದ್ರೇಕಿತ  ಭಾಷಣ ಮಾಡಿದ  ಆರೋಪದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಚಲನಚಿತ್ರ ನಟ ಮಿಥುನ್ ಚಕ್ರವರ್ತಿಯನ್ನು ಕೋಲ್ಕತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಚೋದನಕಾರಿ ಭಾಷಣ ಮಾಡಿದ ಆರೋಪ - Mithun Chakraborty ವಿಚಾರಣೆ ನಡೆಸಿದ ಪೊಲೀಸರು

ಕೋಲ್ಕತಾ : ಉದ್ರೇಕಿತ  ಭಾಷಣ ಮಾಡಿದ (contraversial speech) ಆರೋಪದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಚಲನಚಿತ್ರ ನಟ ಮಿಥುನ್ ಚಕ್ರವರ್ತಿಯನ್ನು (Mithun Chakraborty) ಕೋಲ್ಕತಾ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಿಥುನ್‌ ಚಕ್ರವರ್ತಿಯನ್ನು ಸುಮಾರು 45 ನಿ ಮಿಷಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು. 

ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದ ಮಿಥುನ್ ಚಕ್ರವರ್ತಿ : 

ತನ್ನ ವಿರುದ್ಧ ಪ್ರಕರಣ ಕೈಬಿಡುವಂತೆ ಕೋರಿ ಮಿಥುನ್ ಚಕ್ರವರ್ತಿ, ಕೋಲ್ಕತ್ತಾ ಹೈಕೋರ್ಟ್ (Kolkata high court) ಮೊರೆ ಹೋಗಿದ್ದರು.  ಐಪಿಸಿಯ 504, 505, 153 ಎ, 120 ಬಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿದ್ದರು. ಆದರೆ, ವರ್ಚುವಲ್ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆದೇಶಿಸಿತ್ತು. 

ಇದನ್ನೂ ಓದಿ : Schools Reopens In UP: ಜುಲೈ ಒಂದರಿಂದ ಶಾಲೆಗಳು ಪುನರಾರಂಭ..!

ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ: 
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Election) ಸಂದರ್ಭದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಿಥುನ್ ಚಕ್ರವರ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ನಂತರ ಕೋಲ್ಕತ್ತಾದ ಮಣಿಕಲ್ಲ ಪೊಲೀಸ್ ಠಾಣೆಯಲ್ಲಿ ಮಿಥುನ್ (Mithun Chakraborty) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. 

ಮಿಥುನ್ ಚಕ್ರವರ್ತಿ ಭಾಷಣ
ಮಾರ್ಚ್ 7 ರಂದು ನಡೆದ ರ್ಯಾಲಿಯಲ್ಲಿ ಮಿಥುನ್ ಚಕ್ರವರ್ತಿ 'ಪ್ರಚೋದನಕಾರಿ ಭಾಷಣ ಮಾಡಿದ್ದರು. ನಾನು ನಿನ್ನನ್ನು ಇಲ್ಲಿ ಕೊಂದರೆ, ಶವ ಸ್ಮಶಾನದಲ್ಲಿ ಬೀಳಲಿದೆ. ಹಾವು ಒಮ್ಮೆ ಕಚ್ಚಿದರೆ ನೀನು ಫೋಟೊದಲ್ಲಿರಬೇಕಾಗುತ್ತದೆ ಎಂಬ ಫಿಲ್ಮಿ ಡೈಲಾಗ್ ಗಳನ್ನು ಮಿಥುನ್ ಪ್ರಚಾರದ ವೇಳೆ ಹೇಳಿದ್ದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ದುರು ದಾಖಲಾಗಿತ್ತು. 

ಇದನ್ನೂ ಓದಿ : Corona Impact: ನಗದು ಬಳಕೆಯಲ್ಲಿ ವಿಚಿತ್ರ ಬದಲಾವಣೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More