Home> India
Advertisement

ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ

ಗುಜರಾತಿನ ಜುನಾಗಢದ ಭಾವನಾಥ್ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾದ ಬಳಿಕ ಸಿಂಹಗಳ ಹಿಂಡು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿದ ಘಟನೆ ನಡೆದಿದೆ.

ಜುನಾಗಢದ ಹೆದ್ದಾರಿಯಲ್ಲಿ ಕಂಡ ಸಿಂಹಗಳ ಹಿಂಡು! ವೈರಲ್ ಆಯ್ತು ವೀಡಿಯೋ

ಜುನಾಗಢ: ಗುಜರಾತಿನ ಜುನಾಗಢಕ್ಕೆ ರಾತ್ರೋರಾತ್ರಿ ಕಾಡಿನಿಂದ ಆಗಮಿಸಿದ 7 ಸಿಂಹಗಳ ಹಿಂಡೊಂದು ಹೆದ್ದಾರಿಯಲ್ಲಿ ಸಂಚರಿಸಿ ಕ್ಷಣಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ. 

ಜುನಾಗಢದ ಭಾವನಾಥ್ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾದ ಬಳಿಕ ಸಿಂಹಗಳ ಹಿಂಡು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ಕಂಡ ಭಾರ್ತಿ ಆಶ್ರಮದ ವ್ಯಕ್ತಿಯೊಬ್ಬರು ಆ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಕೆಲ ಕ್ಷಣಗಳ ಬಳಿಕ ಯಾವುದೇ ತೊಂದರೆ ಮಾಡದೆ ಸಿಂಹಗಳು ಮರಳಿ ಕಾಡಿಗೆ ಹಿಂದಿರುಗಿವೆ.

ಸಾಮಾನ್ಯವಾಗಿ ಮಳೆ ಸಂದರ್ಭದಲ್ಲಿ ಸಿಂಹಗಳು ಆಹಾರ ಅರಸಿ ವಸತಿ ಪ್ರದೇಶಗಳಿಗೆ ಬರುತ್ತವೆ. ಇದರಿಂದಾಗಿ ಜನರ ಜೀವಕ್ಕೂ ಅಪಾಯವಿದೆ ಎಂದು ವೀಡಿಯೋ ನೋಡಿದ ಜನರ ಕಳವಳ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿಗಳು, ಸಮೀಪದಲ್ಲಿರುವ ಗಿರ್ನಾರ್ ಅರಣ್ಯ ಪ್ರದೇಶದಿಂದ ಕಾಡು ಪ್ರಾಣಿಗಳು ನಗರ ಪ್ರದೇಶಗಳಿಗೆ ಬರುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Read More