Home> India
Advertisement

Viral Video:ಚಟ್ನಿಯೊಂದಿಗೆ ಗೋಲ್ಗಪ್ಪ ಐಸ್ ಕ್ರೀಮ್ ರೋಲ್! ಎಂದಾದರೂ ತಿಂದಿದ್ದೀರಾ?

ಪಾನಿ ಪುರಿ ಐಸ್ ಕ್ರೀಂ ರುಚಿಯಾಗಿದೆ ಎಂದು ಬ್ಲಾಗರ್ ಹೇಳಿದ್ದಾರೆ. ಆದರೆ ನೆಟ್ಟಿಗರು ಗೋಲ್ಗಪ್ಪಾ ಜೊತೆ ಐಸ್ ಕ್ರೀಂ ಬೆರೆಸಿರುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Viral Video:ಚಟ್ನಿಯೊಂದಿಗೆ ಗೋಲ್ಗಪ್ಪ ಐಸ್ ಕ್ರೀಮ್ ರೋಲ್! ಎಂದಾದರೂ ತಿಂದಿದ್ದೀರಾ?

ಇತ್ತೀಚಿಗೆ ಇಂತಹ ಹಲವಾರು ವಿಡಿಯೋಗಳು ವೈರಲ್ (Video Viral) ಆಗಿವೆ. ಐಸ್ ಕ್ರೀಂನಲ್ಲಿ ಮೊಮೊಸ್, ದೋಸೆ ಮತ್ತು ಧೋಕ್ಲಾ ಮಿಕ್ಸ್ ಮಾಡುವುದನ್ನು ನೋಡಿದ್ದೇವೆ. ಇದೀಗ ಗೋಲ್ಗಪ್ಪಾ ಜತೆ ಐಸ್ ಕ್ರೀಂ ಸೇರಿಸಲಾಗಿದೆ.

ಇದನ್ನೂ ಓದಿ:  "ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ": ಸಿಎಂ ಬೊಮ್ಮಾಯಿ

ಫುಡ್ ಬ್ಲಾಗಿಂಗ್ ಚಾನೆಲ್, ದಿ ಗ್ರೇಟ್ ಇಂಡಿಯನ್ ಫುಡೀ, ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ಗೋಲ್ಗಪ್ಪಾದೊಂದಿಗೆ ಐಸ್ ಕ್ರೀಮ್ ರೋಲ್‌ಗಳನ್ನು (Icecream Roll) ತಯಾರಿಸುವುದನ್ನು ಕಾಣಬಹುದು.

 

 

ಅವರು ಸುಖ ಪುರಿ, ಆಲೂ, ಚೋಲೆ ಮತ್ತು ಸಾಕಷ್ಟು ಚಟ್ನಿಗಳೊಂದಿಗೆ ಒಂದೆರಡು ಗೋಲ್ಗಪ್ಪಗಳನ್ನು (Golgappa) ತಯಾರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಬಳಿಕ ಇದಕ್ಕೆ ಸ್ವಲ್ಪ ಕೆನೆ ಸೇರಿಸುತ್ತಾರೆ. ನಂತರ ಐಸ್ ಕ್ರೀಮ್ ರೋಲ್ ಮಾಡುತ್ತಾರೆ.

ಇದನ್ನೂ ಓದಿ:  ಟಾಲಿವುಡ್​ ನಲ್ಲೂ ಕಿಚ್ಚನ ಹವಾ... ಫೆಬ್ರವರಿ 4ರಂದು ರಿಲೀಸ್​ ಆಗುತ್ತಿದೆ ಸುದೀಪ್ ಸಿನಿಮಾ

ಈ ವಿಡಿಯೋ 1,51,000 ವೀಕ್ಷಣೆಗಳನ್ನು ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಪಾನಿ ಪುರಿ ಐಸ್ ಕ್ರೀಂ ರುಚಿಯಾಗಿದೆ ಎಂದು ಬ್ಲಾಗರ್ ಹೇಳಿದರೆ, ನೆಟ್ಟಿಗರು ಗೋಲ್ಗಪ್ಪಾಗಳೊಂದಿಗೆ ಐಸ್ ಕ್ರೀಂ ಬೆರೆಸಿರುವುದನ್ನು ನೋಡಿ ಅಸಹ್ಯ ವ್ಯಕ್ತಪಡಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More