Home> India
Advertisement

Viral Video: ಮಂಟಪದಲ್ಲಿಯೇ ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ ವರ, ವಧು ಮಾಡಿದ್ದೇನು..?

ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರ ಮಂಟಪದಲ್ಲಿಯೇ ಅಳಲು ಶುರು ಮಾಡುತ್ತಾನೆ. ಆಗ ವಧು ಏನ್ ಮಾಡಿದಳು ಗೊತ್ತಾ..?

Viral Video: ಮಂಟಪದಲ್ಲಿಯೇ ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ ವರ, ವಧು ಮಾಡಿದ್ದೇನು..?

ನವದೆಹಲಿ: ಮದುವೆಯ ಸಂದರ್ಭದಲ್ಲಿ ವಧು ಮತ್ತು ವರರು(Bride Groom Video) ತುಂಬಾ ಭಾವುಕರಾಗಿರುತ್ತಾರೆ. ಏಕೆಂದರೆ ಹುಡುಗಿ ತನ್ನ ಕುಟುಂಬದಿಂದ ಬೇರ್ಪಡುವ ಬಗ್ಗೆ ದುಃಖಿತಳಾಗಿರುತ್ತಾಳೆ. ಅದೇ ರೀತಿ ಹುಡುಗ ಕೂಡ ಕೊಂಚ ಭಾವುಕನಾಗಿರುತ್ತಾನೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿರುವುದನ್ನು ನೀವೂ ಕೂಡ ನೋಡಿರುತ್ತೀರಿ.

ವಧು ಬೀಳ್ಕೊಡುಗೆ ವೇಳೆ ಅಳಲು ಶುರು ಮಾಡಿದರೆ, ವರ ತನ್ನ ಮದುವೆ ಆಯಿತಲ್ಲಾ ಅನ್ನೋ ಸಂತೋಷದಲ್ಲಿ ಭಾವುಕರಾಗುತ್ತಾರೆ. ಅದೇ ರೀತಿಯ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಸಖತ್ ವೈರಲ್ ಆಗಿದೆ. ಈ ವಿಡಿಯೋ(Groom Weeping)ವನ್ನು ಲಕ್ಷಾಂತರ ಜನರು ವೀಕ್ಷಿಸಿ ವರನ ಅವಸ್ಥೆ ಕಂಡು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral video : ಮನೆಯ ಒಳಗೆ ನುಗ್ಗಲು ಯತ್ನಿಸುವ ಹಾವಿನ ವಿರುದ್ದ ಭಯಂಕರವಾಗಿ ಕಾದಾಡುವ ಬೆಕ್ಕು

ಮಂಟಪದಲ್ಲಿಯೇ ಅಳಲು ಶುರುಮಾಡಿದ ವರ!

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್(Viral Video) ಆಗಿರುವ ಈ ವಿಡಿಯೋದಲ್ಲಿ ಮಂಟಪದಲ್ಲಿ ಕುಳಿತಿದ್ದ ವರ ಇದ್ದಕ್ಕಿದ್ದಂತೆಯೇ ಅಳಲು ಶುರುಮಾಡುತ್ತಾನೆ. ಮಂಟಪದಲ್ಲಿ ವಧು-ವರರು ಕುಳಿತಿರುವ ವೇಳೆ ಪಂಡಿತರು ಮಂತ್ರ ಪಠಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಆಗ ವರ ಏನನ್ನೋ ಯೋಚಿಸುತ್ತಾ ಭಾವುಕನಾಗಿ ಎಲ್ಲರ ಮುಂದೆ ಅಳಲು ಶುರುಮಾಡುತ್ತಾನೆ. ಅವನು ಅಳುವುದನ್ನು ನೋಡಿ ವಧು(Bride) ಕೂಡ ಭಾವುಕಳಾಗುತ್ತಾಳೆ. ಕೊನೆಯಲ್ಲಿ ವರನು ವಧುವನ್ನು ಚುಂಬಿಸುವ ಮೂಲಕ ಈ ಮದುವೆಯಲ್ಲಿ ನಾನು ತುಂಬಾ ಸಂತೋಷವಾಗಿದ್ದೇನೆಂದು ಹೇಳುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ವೆಡ್ಡಿಂಗ್ ವರ್ಲ್ಡ್ ಪೇಜ್ ಹೆಸರಿನ ಮದುವೆ(Wedding Video)ಯ ಪುಟದಿಂದ ಈ ವಿಡಿಯೋವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋಗೆ ‘ವರ ಸಂತೋಷದಿಂದ ಅಳಲು ಪ್ರಾರಂಭಿಸಿದ’ ಎಂದು ಕ್ಯಾಪ್ಶನ್ ಬರೆಯಲಾಗಿದೆ. ನೀವು ಈ ವಿಡಿಯೋದಲ್ಲಿ ಮಂಗಳಸೂತ್ರ ಕಟ್ಟುವಾಗ ವಧುವಿಗೆ ಮುತ್ತು ಕೊಟ್ಟ ಕೊನೆಯ ಭಾಗವನ್ನು ತಪ್ಪದೇ ನೋಡಿ. 

ಇದನ್ನೂ ಓದಿ: Economic Crisis:ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ ಶ್ರೀಲಂಕಾ: ಭಾರತದಿಂದ ಸಹಾಯಹಸ್ತ ಮುಂದುವರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More