Home> India
Advertisement

VIRAL PIC: ಇದೀಗ ನೆಟ್ಟಿಗರ ಮನಮುಟ್ಟಿದೆ ನಾರಾಯಣ್ ಮೂರ್ತಿ ಅವರ ಈ ಭಾವಚಿತ್ರ

ಪ್ರಶಸ್ತಿ ನೀಡಲು ವೇದಿಕೆಯ ಮೇಲೆ ಆಗಮಿಸಿದ 73 ವರ್ಷ ವಯಸ್ಸಿನ ನಾರಾಯಣ ಮೂರ್ತಿ 82 ವರ್ಷ ವಯಸ್ಸಿನ ರತನ್ ಟಾಟಾ ಅವರ ಪಾದ ಸ್ಪರ್ಶಿಸಿ ಅವರ ಆಶೀರ್ವಾದ ಪಡೆದಿದ್ದಾರೆ. ಸದ್ಯ ಈ ಫೋಟೋ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗಿದೆ

VIRAL PIC: ಇದೀಗ ನೆಟ್ಟಿಗರ ಮನಮುಟ್ಟಿದೆ ನಾರಾಯಣ್ ಮೂರ್ತಿ ಅವರ ಈ ಭಾವಚಿತ್ರ

ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಕೆಲ ದಿನಗಳ ಹಿಂದೆ ಇವರು ತಮ್ಮ ಹರೆಯದ ದಿನಗಳ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅವರ ಈ ಫೋಟೋ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿ ಇಂಟರ್ನೆಟ್ ಮೇಲೆ ವೈರಲ್ ಆಗಿತ್ತು. ಇದೀಗ ರತನ್ ಟಾಟಾ ಹಾಗೂ ಉದ್ಯಮ ಕ್ಷೇತ್ರದ ಮತ್ತೋರ್ವ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಾರಾಯಣ್ ಮೂರ್ತಿ ಅವರ ಮತ್ತೊಂದು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಹೃದಯ ತಟ್ಟಿದೆ.

ಮುಂಬೈನಲ್ಲಿ ಮಂಗಳವಾರ ಟೈಕಾನ್(TiECon) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ಜೀವನ್ಮಾನದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಪೋರೆಟ್ ಜಗತ್ತಿನಲ್ಲಿ ತಮ್ಮ ಮೌಲ್ಯಗಳಿಗೆ ಹೆಸರುವಾಸಿಯಾಗಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಶ್ರೀ ನಾರಾಯಣ್ ಮೂರ್ತಿ ಅವರು ರತನ್ ಟಾಟಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ನೀಡಲು ವೇದಿಕೆಯ ಮೇಲೆ ಆಗಮಿಸಿರುವ ನಾರಾಯಣ್ ಮೂರ್ತಿ, 83 ವರ್ಷದ ರತನ್ ಟಾಟಾ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿ ಅವರ ಆಶೀರ್ವಾದ ಪಡೆದಿದ್ದಾರೆ. ಸದ್ಯ ಈ ಫೋಟೋ ಇಂಟರ್ನೆಟ್ ಮೇಲೆ ಭಾರಿ ವೈರಲ್ ಆಗಿದೆ.
fallbacks

ಕಳೆದ ಗುರುವಾರ ತಮ್ಮ ಹದಿಹರೆಯದ ಫೋಟೋವೊಂದನ್ನು ಹಂಚಿಕೊಂಡಿದ್ದ ರತನ್ ಟಾಟಾ, "ನಾನು ಈ ಭಾವಚಿತ್ರವನ್ನು ನಿನ್ನೆಯೇ ಹಂಚಿಕೊಳ್ಳಲು ಬಯಸಿದ್ದೆ, ಆದರೆ, ಥ್ರೋಬ್ಯಾಕ್ ಗುರುವಾರ (#ThrowbackThursday) ಮಾಡಲಾಗುತ್ತದೆ ಎಂದು ನನಗೆ ಹೇಳಲಾಗಿತ್ತು. ಹೀಗಾಗಿ ನಾನು ಈ ಭಾವಚಿತ್ರದ ಮೂಲಕ ಥ್ರೋಬ್ಯಾಕ್ ಮಾಡುತ್ತಿದ್ದೇನೆ. ನಾನು ಖುಷಿ-ಖುಷಿಯಾಗಿ ಭಾರತಕ್ಕೆ ಮರಳುವ ಮುನ್ನ ಲಾಸ್ ಎಂಜಲಿಸ್ ನಲ್ಲಿ ಕ್ಲಿಕ್ಕಿಸಲಾಗಿದೆ" ಎಂದು ಬರೆದುಕೊಂಡಿದ್ದರು. 

Read More