Home> India
Advertisement

VIDEO: ವಿಮಾನ ನಿಲ್ದಾಣದಲ್ಲಿಯೇ ಹೆಲಿಕಾಪ್ಟರ್‌ಗೆ ಕಲ್ಲು ತೂರಿ ರನ್ ವೇನಲ್ಲಿ ಮಲಗಿದ ಭೂಪ..!

ಭೋಪಾಲ್‌ನ ರಾಜಭೋಜ್ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವ ಸ್ಪೈಸ್ ಜೆಟ್ ವಿಮಾನದ ಮುಂದೆ ಮಲಗಿದ್ದ ಯುವಕ.

VIDEO: ವಿಮಾನ ನಿಲ್ದಾಣದಲ್ಲಿಯೇ ಹೆಲಿಕಾಪ್ಟರ್‌ಗೆ ಕಲ್ಲು ತೂರಿ ರನ್ ವೇನಲ್ಲಿ ಮಲಗಿದ ಭೂಪ..!

ಭೋಪಾಲ್:  ಸಾಮಾನ್ಯವಾಗಿ ಎಲ್ಲೆಡೆಗಿಂತ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಇರಿಸಲಾಗುತ್ತದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ರಾಜಭೋಜ್ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆಯನ್ನು ಗಮನಿಸಿದರೆ ಇಲ್ಲಿ ಭದ್ರತೆ ಎಷ್ಟರ ಮಟ್ಟಿಗಿದೆ ಎಂಬುದರ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ವಾಸ್ತವವಾಗಿ ಈ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಟಿದ್ದ  ಹೆಲಿಕಾಪ್ಟರ್‌ ರನ್ ವೇ ನಲ್ಲಿದ್ದಾಗ ಯುವಕನೊಬ್ಬ  ಹೆಲಿಕಾಪ್ಟರ್‌ಗೆ ಕಲ್ಲು ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್‌ನ ಗಾಜು ಒಡೆಡಿದೆ.

ಈ ಘಟನೆ ಬಳಿಕ ಆ ಯುವಕ ದೆಹಲಿಗೆ ಹೋಗುವ ವಿಮಾನ ಮುಂದೆ ಮಲಗಿದ್ದಾನೆ. ಈ ಕಾರಣದಿಂದಾಗಿ ವಿಮಾನವನ್ನು ಅವಸರದಲ್ಲಿ ನಿಲ್ಲಸಬೇಕಾಯಿತು. ಗಹ್ತಾನೆ ಬಳಿಕ ತಕ್ಷಣವೇ ಸ್ಥಳಕ್ಕೆ ಧಾವಿಸಿದ ವಿಮಾನ ನಿಲ್ದಾಣ ಅಧಿಕಾರಿ ಮತ್ತು ಸಿಐಎಸ್ಎಫ್ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಯುವಕನನ್ನು 20 ವರ್ಷದ ಯೋಗೇಶ್  ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಆತ ಭೋಪಾಲ್‌ನ  ಅರೆರಾ ಕಾಲೋನಿ 1100 2/194 ರ ನಿವಾಸಿ ಎಂದು ತಿಳಿದು ಬಂದಿದೆ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಸಿಬ್ಬಂದಿ ಆತನನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಘಟನೆ ಹಿಂದಿನ ಕಾರಣವನ್ನು ಪತ್ತೆ ಹಚ್ಚಲಾಗುತ್ತಿದೆ.

ಮತ್ತೊಂದೆಡೆ, ಘಟನೆಯ ನಂತರ, ವಿಮಾನ ನಿಲ್ದಾಣದಲ್ಲಿನ ಭದ್ರತೆ, ಯುವಕ ರನ್ ವೇಯಲ್ಲಿ ಹೇಗೆ ತಲುಪಿದನು? ವಿಮಾನ ನಿಲ್ದಾಣದ ಭದ್ರತೆಯಲ್ಲಿ ಎಲ್ಲಿ ಲೋಪವಾಗಿದೆ ಮತ್ತು ಅಲ್ಲಿ ಹೆಲಿಕಾಪ್ಟರ್‌ನ ಗಾಜನ್ನು ಹೇಗೆ ಒಡೆದನು ಎಂಬ ಪ್ರಶ್ನೆಗಳೂ ಉದ್ಭವಿಸಿದ್ದು, ಎಲ್ಲದರ ಬಗ್ಗೆ ವಿಚಾರಣೆ ಆರಂಭವಾಗಿದೆ.

Read More