Home> India
Advertisement

Gyanvapi Case: ಹಿಂದೂಗಳ ಪರ ಮಹತ್ವದ ತೀರ್ಪು: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಕೋರ್ಟ್

Gyanvapi Case Latest Updates: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ನಿಯಮಿತ ಪೂಜೆಯನ್ನು ಮಾಡಬೇಕೆಂಬ ಹಿಂದೂ ಸಮುದಾಯದ ಬೇಡಿಕೆಯನ್ನು ಅಂಗೀಕರಿಸಿದೆ. 7 ದಿನಗಳಲ್ಲಿ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ವ್ಯಾಸ ಕುಟುಂಬಕ್ಕೆ ನಿಯಮಿತ ಪೂಜೆ ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.

Gyanvapi Case: ಹಿಂದೂಗಳ ಪರ ಮಹತ್ವದ ತೀರ್ಪು: ಜ್ಞಾನವಾಪಿ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಕೋರ್ಟ್

Gyanvapi Case Latest Updates: ವಾರಣಾಸಿಯ ಜ್ಞಾನವಾಪಿ ಪ್ರಕರಣದಲ್ಲಿ ತನ್ನ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಹಿಂದೂ ಸಮುದಾಯಕ್ಕೆ ಬುಧವಾರ ದೊಡ್ಡ ಯಶಸ್ಸು ಸಿಕ್ಕಿದೆ. ಸುದೀರ್ಘ ಕಾನೂನು ಹೋರಾಟದ ಬಳಿಕ, ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ನಿಯಮಿತ ಪೂಜೆಯನ್ನು ಮಾಡಬೇಕೆಂಬ ಹಿಂದೂ ಸಮುದಾಯದ ಬೇಡಿಕೆಯನ್ನು ಅಂಗೀಕರಿಸಿದೆ. 7 ದಿನಗಳಲ್ಲಿ ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ವ್ಯಾಸ ಕುಟುಂಬಕ್ಕೆ ನಿಯಮಿತ ಪೂಜೆ ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.

ಇದನ್ನೂ ಓದಿ: 'ರೋಹಿತ್ ಬದಲು ಈತ ನಾಯಕನಾಗಿದ್ರೆ, ಭಾರತ ಟೆಸ್ಟ್’ನಲ್ಲಿ ಸೋಲುತ್ತಿರಲಿಲ್ಲ'!

'ಪೂಜಿಸುವ ಹಕ್ಕು ಎಲ್ಲರಿಗೂ ಇರುತ್ತದೆ'

ನ್ಯಾಯಾಲಯದಲ್ಲಿ ಹಿಂದೂ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, "ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ಕಾನೂನು ಕೆಲಸ ಮುಗಿಸಿದ್ದೇವೆ. ಈಗ 7 ದಿನದೊಳಗೆ ನೆಲಮಾಳಿಗೆಯಲ್ಲಿ ಪೂಜೆ ಆರಂಭವಾಗಲಿದೆ. ಭಕ್ತರು ಮತ್ತು ಅರ್ಚಕರಿಗೆ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಇದು ಈ ಪ್ರಕರಣದ ಐತಿಹಾಸಿಕ ಆದೇಶ” ಎಂದಿದ್ದಾರೆ.

ಸೋಮನಾಥ ವ್ಯಾಸ ಕುಟುಂಬಕ್ಕೆ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅನುಮತಿ ಕೋರಿ ಹಿಂದೂ ಕಡೆಯವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸೋಮನಾಥ ವ್ಯಾಸ್ ಅವರ ಕುಟುಂಬವು 1993 ರವರೆಗೆ ನೆಲಮಾಳಿಗೆಯಲ್ಲಿ ನಿಯಮಿತವಾಗಿ ಪೂಜೆಯನ್ನು ಮಾಡುತ್ತಿತ್ತು. ಆದರೆ 1993ರ ನಂತರ ಅಂದಿನ ಮುಲಾಯಂ ಸಿಂಗ್ ಯಾದವ್ ಸರ್ಕಾರದ ಆದೇಶದ ಮೇರೆಗೆ ನೆಲಮಾಳಿಗೆಯನ್ನು ಮುಚ್ಚಿ ಬ್ಯಾರಿಕೇಡ್ ಹಾಕಲಾಯಿತು. ಇದರೊಂದಿಗೆ ಜ್ಞಾನವಾಪಿಯಲ್ಲಿ ನಡೆಯುತ್ತಿದ್ದ ಪೂಜೆ ನಿಂತೇಹೋಯಿತು.

ಇದನ್ನೂ ಓದಿ: Cricket: ನೀರು ಎಂದು ತಪ್ಪಾಗಿ ಆಸಿಡ್ ಕುಡಿದ ಭಾರತದ ಸ್ಟಾರ್ ಓಪನರ್! ಆಸ್ಪತ್ರೆಗೆ ದಾಖಲು

ಕೋರ್ಟ್ ಮಹತ್ವದ ಆದೇಶ

ಸುದೀರ್ಘ ನ್ಯಾಯಾಲಯದ ಹೋರಾಟದ ನಂತರ, ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಎಎಸ್‌’ಐ ಜ್ಞಾನವಾಪಿ ಸಂಕೀರ್ಣವನ್ನು ಸರ್ವೆ ಮಾಡಿತ್ತು. ಈ ಸಮಯದಲ್ಲಿ, ನೆಲಮಾಳಿಗೆಯನ್ನು ಸ್ವಚ್ಛಗೊಳಿಸಿದ ನಂತರ, ಜನವರಿ 17, 2024 ರಂದು, ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಡಳಿತ ಅದನ್ನು ಸೀಲ್ ಮಾಡಿ ತನ್ನ ವಶಕ್ಕೆ ತೆಗೆದುಕೊಂಡಿತು. ಇದೀಗ ಜಿಲ್ಲಾ ನ್ಯಾಯಾಲಯವು 7 ದಿನಗಳೊಳಗೆ ಎಲ್ಲ ಅಡೆತಡೆಗಳನ್ನು ನಿವಾರಿಸಿ ನಿತ್ಯ ಪೂಜೆ ನಡೆಸುವ ವ್ಯಾಸ್ ಕುಟುಂಬದ ಹಕ್ಕನ್ನು ಮರುಸ್ಥಾಪಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More