Home> India
Advertisement

ಅಮೇರಿಕಾದಲ್ಲಿ ಮೃತಪಟ್ಟ ಉತ್ತರಾಖಂಡದ ಹಣಕಾಸು ಸಚಿವ ಪ್ರಕಾಶ್ ಪಂತ್

ಉತ್ತರಾಖಂಡದ ಹಣಕಾಸು ಸಚಿವ ಪ್ರಕಾಶ್ ಪಂತ್ ಬುಧವಾರದಂದು ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅವರು ಶ್ವಾಸಕೋಶ ಸಮಸ್ಯೆಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ. 

ಅಮೇರಿಕಾದಲ್ಲಿ ಮೃತಪಟ್ಟ ಉತ್ತರಾಖಂಡದ ಹಣಕಾಸು ಸಚಿವ ಪ್ರಕಾಶ್ ಪಂತ್

ಡೆಹ್ರಾಡೂನ್: ಉತ್ತರಾಖಂಡದ ಹಣಕಾಸು ಸಚಿವ ಪ್ರಕಾಶ್ ಪಂತ್ ಬುಧವಾರದಂದು ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅವರು ಶ್ವಾಸಕೋಶ ಸಮಸ್ಯೆಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು ಎನ್ನಲಾಗಿದೆ. 

ಈಗ ಉತ್ತರಖಂಡದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಲಾಗಿದ್ದು.ಗುರುವಾರದಂದು ಒಂದು ದಿನ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.ಪಂತ್ ಅವರ ಅಕಾಲಿಕ ಮರಣಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಉತ್ತರಖಂಡದ ಹಣಕಾಸು ಸಚಿವ ಶ್ರೀ ಪ್ರಕಾಶ್ ಪಂತ್ ಅವರ ಅಕಾಲಿಕ ಮರಣ ನೋವನ್ನು ತರಿಸಿದೆ. ಅವರ ಸಾಂಸ್ಥಿಕ ಕೌಶಲ್ಯಗಳು ಬಿಜೆಪಿ ಮತ್ತು ಉತ್ತರಾಖಂಡದ ಪ್ರಗತಿಗೆ ಆಡಳಿತಾತ್ಮಕ ಕೌಶಲ್ಯಗಳನ್ನು ಬಲಪಡಿಸಲು ನೆರವಾಗಿವೆ. " ಎಂದು ಅವರು ಟ್ವೀಟ್ ಮಾಡಿದ್ದಾರೆ.

1960 ರ ನವೆಂಬರ್ 11 ರಂದು ಉತ್ತರಾಖಂಡದ ಪಿಥೋರಗಢ್ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪಂತ್, ಏಸ್-ಶೂಟರ್ ಕೂಡ ಆಗಿದ್ದರು ಅಲ್ಲದೆ ಉತ್ತರಾಖಂಡ್ ವಿಧಾನಸಭೆಯ ಮೊದಲ ಸ್ಪೀಕರ್ ಆಗಿದ್ದರು.ಈ  ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅವರು ಅನೇಕ ಖಾತೆಗಳನ್ನು ನಿಭಾಯಿಸಿದ್ದರು.2017 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಮುಖ್ಯಮಂತ್ರಿಯ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಯಾಗಿದ್ದರು.
 

Read More