Home> India
Advertisement

ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಸ್ಥಾಪನೆ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ತೇಜಸ್ವಿ ಸೂರ್ಯ

ಯುಎಸ್ ರಾಯಭಾರಿ ಕಚೇರಿಯು ಬೆಂಗಳೂರಿನಲ್ಲಿ ಕಾರ್ಯಾರಂಭಿಸಲು, ಕಾರಣೀಕರ್ತರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದರು.

ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಸ್ಥಾಪನೆ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ತೇಜಸ್ವಿ ಸೂರ್ಯ

 ಬೆಂಗಳೂರು: ಯುಎಸ್ ರಾಯಭಾರಿ ಕಚೇರಿಯು ಬೆಂಗಳೂರಿನಲ್ಲಿ ಕಾರ್ಯಾರಂಭಿಸಲು, ಕಾರಣೀಕರ್ತರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದರು.

ಪ್ರಧಾನಿ ಮೋದಿಯವರ ಅಮೇರಿಕಾ ಭೇಟಿಯ ಹಿನ್ನಲೆಯಲ್ಲಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಗುರುವಾರ  ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು (ರಾಯಭಾರಿ ಕಚೇರಿಗಳು) ತೆರೆಯಲಿದ್ದು, ಭಾರತವು ಸಿಯಾಟಲ್‌ನಲ್ಲಿ ಮಿಷನ್ ಸ್ಥಾಪಿಸಲಿದೆ ಎಂದು ಘೋಷಿಸಿದ್ದಾರೆ.ಬೆಂಗಳೂರಿನಲ್ಲಿ ರಾಯಭಾರಿ ಕಚೇರಿಯ ಸ್ಥಾಪನೆಯ ವಿಚಾರವಾಗಿಸೂರ್ಯ ಅವರು, ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು  ಯುಎಸ್ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದ್ದರು.

ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿಯನ್ನು ಸ್ಥಾಪಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ @narendramodi Ji ಮತ್ತು ಕೇಂದ್ರ ವಿದೇಶಾಂಗ ಸಚಿವರಾದ ಶ್ರೀ @DrSJaishankar ಅವರಿಗೆ ಧನ್ಯವಾದಗಳು. ಸಾವಿರಾರು ಅಂತರಾಷ್ಟ್ರೀಯ ಕಂಪನಿಗಳೊಂದಿಗೆ  ವೇಗವಾಗಿ ಬೆಳೆಯುತ್ತಿರುವ ಮತ್ತು IT ಶಕ್ತಿ ಕೇಂದ್ರವಾಗಿರುವ ಬೆಂಗಳೂರಿಗೆ, ಇದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಇದು ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯ ಮಾಡುತ್ತದೆ ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.

ಈ ವರ್ಷದ ಮಾರ್ಚ್ 24 ರಂದು, ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ಇಲಾಖೆಯೊಂದಿಗೆ ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿಯನ್ನು ಸ್ಥಾಪಿಸಲು ಸೂರ್ಯ ಅವರು ವಿದೇಶಾಂಗ ಸಚಿವರಾದ ಶ್ರೀ ಜೈಶಂಕರ್ ಅವರ ಬಳಿ ಮನವಿ ಮಾಡಿದ್ದರು. 
ಆಗ, ಜೈಶಂಕರ್  “ ಮುಂದಿನ ಬಾರಿ ನಾನು  ಆಂಥೋನಿ ಬ್ಲಿಂಕನ್ ಅವರನ್ನು ಭೇಟಿಯಾದಾಗ, ನಿಮ್ಮ ಈ ಮನವಿಯನ್ನು, ನಿಮ್ಮಷ್ಟೇ ಬಲವಾಗಿ ಅವರ ಬಳಿ ಇಡುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ." ಎಂದು ಹೇಳಿದರು.

ನವೆಂಬರ್ 2019 ರಲ್ಲಿ, ಸೂರ್ಯ ಅವರು  ಬೆಂಗಳೂರಿನಲ್ಲಿ USನ ರಾಯಭಾರಿ ಕಚೇರಿಗಾಗಿ  ಲಿಖಿತ ಮನವಿಯೊಂದಿಗೆ ಜೈಶಂಕರ್ ಅವರನ್ನು ಭೇಟಿಯಾಗಿದ್ದರು. “_ಬೆಂಗಳೂರಿನಲ್ಲಿ ಸುಮಾರು 750 ಬಹು-ರಾಷ್ಟ್ರೀಯ ಕಂಪನಿಗಳಿವೆ ಮತ್ತು ಅವುಗಳಲ್ಲಿ ಸುಮಾರು 370 ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. ಬೆಂಗಳೂರು ಮತ್ತು ಕರ್ನಾಟಕ ಒಟ್ಟಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ದೊಡ ಸಂಖ್ಯೆ ಇದೆ. ಅಸ್ತಿತ್ವದಲ್ಲಿರುವ ವರ್ಚುವಲ್ ಕಾನ್ಸುಲೇಟ್‌ಗಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಯುಎಸ್ ಕಾನ್ಸುಲೇಟ್ ಅನ್ನು ಹೊಂದಿದ್ದರೆ ಕರ್ನಾಟಕದ ಕನಿಷ್ಠ ಅರ್ಧ ಮಿಲಿಯನ್ ಜನರಿಗೆ ಅನುಕೂಲಕರವಾಗಿರುತ್ತದೆ ಮತ್ತು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ಗಳ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ, ”ಎಂದು ಅವರು ನವೆಂಬರ್ 18 2019 ರ ಪತ್ರದಲ್ಲಿ ಬರೆದಿದ್ದರು, .

ಸೂರ್ಯ ಅವರು ಮಾರ್ಚ್ 2020 ರಲ್ಲಿ ಭಾರತದಲ್ಲಿನ ಯುಎಸ್ ರಾಯಭಾರಿಯ ಡಾ ಕೆನ್ನೆತ್ ಜಸ್ಟರ್ ಅವರ ಬಳಿಯೂ ತಮ್ಮ ಮನವಿಯನ್ನು ಸಲ್ಲಿಸಿದ್ದರು.ಗುರುವಾರ ಬೆಂಗಳೂರಿನಲ್ಲಿ ಕಾನ್ಸುಲೇಟ್‌ನ ಘೋಷಣೆಯಾದಾಗ, ಇದರಿಂದ ಬೆಂಗಳೂರು ನಗರವು ಮಹತ್ತರವಾದ ಪ್ರಯೋಜನ ಪಡೆಯುತ್ತದೆ ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯವು ಗಟ್ಟಿಗೊಳ್ಳುತ್ತದೆ ಎಂದು ಸೂರ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

“ಬೆಂಗಳೂರಿನಲ್ಲಿರುವ US ರಾಯಭಾರಿಯ ಕಛೇರಿ, ನಗರದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡುವುದರ ಜೊತೆಗೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ವಾಣಿಜ್ಯ ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ.ಬೆಂಗಳೂರಿನ ಹಿತಾಸಕ್ತಿಗಳನ್ನು ಉತ್ತೇಜಿಸಲು ಮತ್ತು ಬಹುಕಾಲದಿಂದ  ಉಳಿದಿರುವ ಬೇಡಿಕೆಯನ್ನು ಈಡೇರಿಸಿರುವುದಕ್ಕಾಗಿ ನಾನು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More