Home> India
Advertisement

52 ಚೀನಾ ಆಪ್ ಗಳನ್ನು ತೆಗೆದುಹಾಕಲು STF ಆದೇಶ

ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ ತನ್ನ ನೌಕರಿಗೆ ಕಾನ್ಫಿಡೆನ್ಸಿಯಲ್ ಪತ್ರವೊಂದನ್ನು ರವಾನಿಸಿ ತಮ್ಮ ತಮ್ಮ ಮೊಬೈಲ್ ಬಳಲ್ಲಿನ 52 ಚೈನೀಸ್ ಆಪ್ ಗಳನ್ನು ತೆಗೆದು ಹಾಕಲು ನಿರ್ದೇಶನ ನೀಡಿದೆ.

52 ಚೀನಾ ಆಪ್ ಗಳನ್ನು ತೆಗೆದುಹಾಕಲು STF ಆದೇಶ

ನವದೆಹಲಿ:ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ ತನ್ನ ನೌಕರಿಗೆ ಕಾನ್ಫಿಡೆನ್ಸಿಯಲ್ ಪತ್ರವೊಂದನ್ನು ರವಾನಿಸಿ ತಮ್ಮ ತಮ್ಮ ಮೊಬೈಲ್ ಬಳಲ್ಲಿನ 52 ಚೈನೀಸ್ ಆಪ್ ಗಳನ್ನು ತೆಗೆದು ಹಾಕಲು ನಿರ್ದೇಶನ ನೀಡಿದೆ. ಈ ಅಲ್ಲ 52 ಚೈನೀಸ್ ಆಪ್ ಗಳನ್ನು ಆದಷ್ಟು ಶೀಘ್ರದಲ್ಲಿಯೇ ಸ್ಮಾರ್ಟ್ ಫೋನ್ ನಿಂದ ತೆಗೆದುಹಾಕಲು STF ಆದೇಶ ಜಾರಿಗೊಳಿಸಿದೆ.

STF IG ಅಮಿತಾಭ್ ಯಶ್ ಅವರು ಮೊಬೈಲ್ ನಿಂದ ಈ 52 ಆಪ್ ಗಳನ್ನು ತೆಗೆದುಹಾಕಲು ಆದೇಶ ನೀಡಿದ್ದಾರೆ ಎನ್ನಲಾಗಿದೆ. STF ಸಿಬ್ಬಂದಿ ಹಾಗೂ ಅವರ ಸಂಬಂಧಿಕರು ಈ ಆಪ್ ಗಳನ್ನು ತೆಗೆದುಹಾಕಲು ಈ ಆದೇಶ ನೀಡಿದ್ದಾರೆ. ಕೇಂದ್ರ ಗೃಹ ಇಲಾಖೆಯ ಗೈಡ್ ಲೈನ್ಸ್ ಬಳಿಕ STF ವತಿಯಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಈ ಆಪ್ ಗಳನ್ನು ಬಳಸಿ ವೈಯಕ್ತಿಕ ಮಾಹಿತಿ ಹಾಗೂ ಇತರೆ ಡೇಟಾ ಕಳುವು ಮಾಡಲಾಗಿದೆ ಎಂಬ ಸಂಶಯ ವ್ಯಕ್ತಪಡಿಸಲಾಗಿದೆ.

ಇದಕ್ಕೂ ಮೊದಲು ಭಾರತೀಯ ಗುಪ್ತಚರ ಇಲಾಖೆ ಒಟ್ಟು 52 ಆಪ್ ಗಳ ಪಟ್ಟಿಯನ್ನು ಭಾರತ ಸರ್ಕಾರಕ್ಕೆ ನೀಡಿದ್ದು, ಈ ಆಪ್ ಗಳು ಚೀನಾ ಜೊತೆ ಸಂಪರ್ಕಹೊಂದಿವೆ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಆಪ್ ಗಳನ್ನು ಬ್ಲಾಕ್ ಮಾಡುವಂತೆ ಕೋರಿತ್ತು. ಏಪ್ರಿಲ್ ತಿಂಗಳಿನಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಲಿಸ್ಟ್ ನಲ್ಲಿ ಟಿಕ್ ಟಾಕ್, ಝೂಮ್, ಯುಸಿ ಬ್ರೌಸರ್, ಕ್ಲೀನ್ ಮಾಸ್ಟರ್, ಜೆಂಡರ್ ಹಾಗೂ ಶೇರ್ ಇಟ್ ಗಳಂತಹ ಜನಪ್ರೀಯ ಆಪ್ ಗಳು ಶಾಮೀಲಾಗಿವೆ.

ಆದರೆ, ಸರ್ಕಾರದವತಿಯಿಂದ ಇದುವರೆಗೆ ಈ ಆಪ್ ಗಳನ್ನು ಬ್ಲಾಕ್ ಮಾಡಲು ಅಥವಾ ಬಳಕೆ ಮಾಡಲು ಯಾವುದೇ ರೀತಿಯ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ. ಏಕೆಂದರೆ ಭಾರತದಲ್ಲಿ ಈ ಆಪ್ ಗಳು ಕೋಟ್ಯಂತರ ಬಳಕೆದಾರರನ್ನು ಹೊಂದಿವೆ. ಈ ಆಪ್ ಗಳು ದಿನನಿತ್ಯ ಭಾರತೀಯ ಬಳಕೆದಾರರ ಡೇಟಾ ಅನ್ನು ಚೀನಾದಲ್ಲಿ ಸ್ಥಾಪಿಸಲಾಗಿರುವ ಸರ್ವರ್ಗಳಿಗೆ ಸವಾನಿಸುತ್ತವೆ ಎಂಬ ಆರೋಪವಿದೆ.

ಗುಪ್ತಚರ ಇಲಾಖೆ ಸಿದ್ಧಪಡಿಸಿರುವ ಈ ಪಟ್ಟಿಯಲ್ಲಿ ಒಟ್ಟು ಐದು ವಿಡಿಯೋ ಶೇರಿಂಗ್ ಆಪ್ ಗಳಿವೆ. ಇಲ್ಲಿ ಆಶ್ಚರ್ಯದ ಸಂಗತಿ ಎಂದರೆ, ಚೈನಾ ಮೊಬೈಲ್ ತಯಾರಕ ಕಂಪನಿಗಳು ಈ ಐದು ಆಪ್ ಗಳಲ್ಲಿ ಒಂದನ್ನಾದರೂ ಇನ್ ಬಿಲ್ಟ್ ರೂಪದಲ್ಲಿ ನೀಡುತ್ತವೆ. ಟಿಕ್ ಟಾಕ್, ವಿಗೋ ವಿಡಿಯೋ, ಬಿಗೋ ಲೈವ್, ವೆಬೋ, ವಿ ಚಾಟ್, ಹಲೋ ಹಾಗೂ ಲೈಕ್ ಗಳು ಸೇರಿದಂತೆ ಹಲವು ಆಪ್ ಗಳೂ ಕೂಡ ಇವುಗಳಲ್ಲಿ ಶಾಮೀಲಾಗಿವೆ.

Read More