Home> India
Advertisement

ಉತ್ತರಪ್ರದೇಶ: ಮತದಾನಕ್ಕೂ ಮುನ್ನ 500 ರೂ. ನೀಡಿ ಮತದಾರರ ಬೆರಳಿಗೆ ಹಾಕಿದ್ರು ಶಾಯಿ! ಮುಂದೆ...

ಚಂದೌಲಿ ಲೋಕಸಭಾ ಕ್ಷೇತ್ರದ ತಾರಾಜೀವನಪುರ್ ಹಳ್ಳಿಯಲ್ಲಿ ದಲಿತ ಕಾಲೋನಿ ಜನರಿಗೆ ಮತ ಚಲಾಯಿಸದಂತೆ ಬೆದರಿಕೆ ಹಾಕಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿರುವ ಆರೋಪ ಕೇಳಿಬಂದಿದೆ.  

ಉತ್ತರಪ್ರದೇಶ: ಮತದಾನಕ್ಕೂ ಮುನ್ನ 500 ರೂ. ನೀಡಿ ಮತದಾರರ ಬೆರಳಿಗೆ ಹಾಕಿದ್ರು ಶಾಯಿ! ಮುಂದೆ...

ನವದೆಹಲಿ: ಲೋಕಸಭಾ ಚುನಾವಣೆ 2019ರ ಏಳನೇ ಹಾಗೂ ಕಡೆಯ ಹಂತದ ಮತದಾನ ಇಂದು ಎಂಟು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 59 ಸ್ಥಾನಗಳಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮತದಾನಕ್ಕೂ ಮುನ್ನಾ ದಿನ ಮತದಾರರ ಬೆರಳಿಗೆ ಶಾಹಿ ಹಾಕಿ, 500 ರೂ. ನೀಡಿರುವ ಘಟನೆಯೊಂದು ಭಾನುವಾರ ಬೆಳಕಿಗೆ ಬಂದಿದೆ. 

ಚಂದೌಲಿ ಲೋಕಸಭಾ ಕ್ಷೇತ್ರದ ತಾರಾಜೀವನಪುರ್ ಹಳ್ಳಿಯಲ್ಲಿ ದಲಿತ ಕಾಲೋನಿ ಜನರಿಗೆ ಮತ ಚಲಾಯಿಸದಂತೆ ಬೆದರಿಕೆ ಹಾಕಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿರುವ ಆರೋಪ ಕೇಳಿಬಂದಿದೆ.  ಅಷ್ಟೇ ಅಲ್ಲದೆ, ಮತಹಾಕದಂತೆ ಹಣ ನೀಡಿ, ಜನರ ಬೆರಳಿಗೆ ಮತದಾನದ ಬಳಿಕ ಬೆರಳಿಗೆ ಹಾಕುವ ಶಾಯಿಯನ್ನು ಹಾಕಿ ಹೋಗಿದ್ದಾರೆ. ಹೀಗಾಗಿ ಅಲ್ಲಿನ ಜನರು ಮತಚಲಾಯಿಸದಂತಾಗಿದೆ. 

fallbacksಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಚಂದೌಲಿಯ SDM ಕುಮಾರ್ ಹರ್ಷ, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಜನರು ಘಟನೆ ಬಗ್ಗೆ ದೂರು ನೀಡಿದ್ದಾರೆ. ಈಗಲೂ ಸಹ ಆ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಏಕೆಂದರೆ ವಿಷಯ ಬೆಳಕಿಗೆ ಬಂದಾಗ ಇನ್ನೂ ಮತದಾನ ಆರಂಭವಾಗಿರಲಿಲ್ಲ. ಅಲ್ಲದೆ, ಅವರು ನೀಡಿರುವ ದೂರಿನಲ್ಲಿ ಒತ್ತಾಯಪೂರ್ವಕವಾಗಿ ಶಾಯಿ ಹಾಕಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

ಚಂದೌಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ಮಹೇಂದ್ರ ನಾಥ್ ಪಾಂಡೆಯ ಕಣದಲ್ಲಿದ್ದು, ಅದೇ ಕ್ಷೇತ್ರದಲ್ಲಿ ಮಹಾಘಟಬಂಧನದ ಅಭ್ಯರ್ಥಿಯಾಗಿ ಡಾ.ಸಂಜಯ್ ಚೌಹಾನ್ ಸ್ಪರ್ಧಿಸಿದ್ದಾರೆ.

Read More