Home> India
Advertisement

AIIMS ಹೇಳಿದ್ದು: ದೆಹಲಿ AIIMS ನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ Underworld Don Chota Rajan, ಸಾವಿನ ಸುದ್ದಿ ವದಂತಿ!

Chhota Rajan Is Alive - ಭೂಗತ ಪಾತಕಿ ಛೋಟಾ ರಾಜನ್ ದೆಹಲಿಯ AIIMSನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚೆಗಷ್ಟೇ ಕೊರೊನಾ ಹಿನ್ನೆಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

AIIMS ಹೇಳಿದ್ದು:  ದೆಹಲಿ AIIMS ನಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ Underworld Don Chota Rajan, ಸಾವಿನ ಸುದ್ದಿ ವದಂತಿ!

ನವದೆಹಲಿ: Chhota Rajan Is Alive - ಭೂಗತ ಪಾತಕಿ (Underworld Don) ಛೋಟಾ ರಾಜನ್ ಸಾವಿನ ಸುದ್ದಿ ವದಂತಿ ಎಂದು ಸಾಬೀತಾಗಿದೆ. ಆತನ ಸಾವಿನ ಸುದ್ದಿ ಸುಳ್ಳು ಸುದ್ದಿ ಎಂದು ANI ಸುದ್ದಿ ಸಂಸ್ಥೆಗೆ ಹೇಳಿರುವ AIIMS, ಆತ ಜೀವಂತವಾಗಿದ್ದು, ಆತನ ಮೇಲೆ ಚಿಕಿತ್ಸೆ ನಡೆಸಲಾಗುತ್ತಿದೆ ಎಂದಿದೆ.

ಇತ್ತೀಚೆಗಷ್ಟೇ ಹಲವು ವರದಿಗಳು ಛೋಟಾ ರಾಜನ್ ಕೊರೊನಾಗೆ ಬಲಿಯಾಗಿದ್ದಾನೆ ಎಂದು ಎಂದಿವೆ. ಕೊರೊನಾಗೆ ಬಲಿಯಾದ ಬಳಿಕ 62 ವರ್ಷದ ಛೋಟಾ ರಾಜನ್ ನನ್ನು ತಿಹಾರ್ ಜೈಲಿನಿಂದ ಏಪ್ರಿಲ್ 25 ತಂದು AIIMS ನಲ್ಲಿ ದಾಖಲಿಸಲಾಗಿದೆ.

ಛೋಟಾ ರಾಜನ್ ಸುಮಾರು ಎರಡು ಡಜನ್ ಗೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಸುಮಾರು 4 ಪ್ರಕರಣಗಳಲ್ಲಿ ನ್ಯಾಯಾಲಯ ಆತನನ್ನು ದೋಷಿ ಎಂದು ತೀರ್ಪು ನೀಡಿದೆ. ಛೋಟಾ ರಾಜನ್ ಉರ್ಫ್ ಸದಾಶಿವ್ ನನ್ನು ತಿಹಾರ್ ಜೈಲು ಪರಿಸರದ ಜೈಲ್ ನಂ.2 ನ ಅತಿ ಸುರಕ್ಷಿತ ವಾರ್ಡ್ ನಲ್ಲಿರಿಸಲಾಗಿದೆ. ಕೊರೊನಾ (Coronavirus) ಸೋಂಕಿಗೆ ಗುರಿಯಾದ ಬಳಿಕ ಆತನನ್ನು AIIMS ಗೆ ಕರೆತರಲಾಗಿತ್ತು. 

ಛೋಟಾ ರಾಜನ್ (Chhota Rajan) ಹಾಗೂ ಪಾಕ್ ನಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವುದ್ ಇಬ್ರಾಹಿಮ್ (Dawood Ibrahim) ಒಂದೇ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಬಳಿಕ ದಾವುದ್ ಇಬ್ರಾಹಿಮ್ ಭಾರತ ವಿರೋಧಿ ಶಕ್ತಿಗಳ ಜೊತೆಗೆ ಕೈಜೋಡಿಸಿದ ಬಳಿಕ ಛೋಟಾ ರಾಜನ್ ಅವನಿಂದ ದೂರವಾಗಿದ್ದ. ಇದಾದ ಬಳಿಕ ಬ್ಯಾಂಕಾಕ್ ನಲ್ಲಿ ದಾವುದ್ ಗುಂಪಿಗೆ ಸೇರಿದ ಜನರು ಛೋಟಾ ರಾಜನ್ ಮೇಲೆ ದಾಳಿ ಕೂಡ ನಡೆಸಿದ್ದರು. ಈ ದಾಳಿಯಲ್ಲಿ ಛೋಟಾ ರಾಜನ್ ಗಂಭೀರವಾಗಿ ಗಾಯಗೊಂಡಿದ್ದ ಹಾಗೂ ಆತನ ಹೊಟ್ಟೆಯಲ್ಲಿ ಮಹತ್ವದ ಕರುಳಿನ ಭಾಗಕ್ಕೆ ಭಾರಿ ಹಾನಿ ತಲುಪಿತ್ತು.

ಇದನ್ನೂ ಓದಿ- ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯ : ಸಿಎಂ ಯಡಿಯೂರಪ್ಪ

ಇದಾದ ಬಳಿಕ ಸಿಬಿಐ  ಮೂಲಕ ಜಾರಿಗೊಳಿಸಲಾಗಿರುವ ಒಂದು ಹೊಸ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಆತನನ್ನು ಮಲೇಷಿಯಾದಲ್ಲಿ ಬಂಧಿಸಿ 2015 ರಲ್ಲಿ ಭಾರತಕ್ಕೆ ಡಿಪೋರ್ಟ್ ಮಾಡಲಾಗಿತ್ತು.

ಇದನ್ನೂ ಓದಿ- Corona Vaccine ಹಾಕಿಸುವ ಮುನ್ನ ಹಾಗೂ ನಂತರ ಏನು ಮಾಡ್ಬೇಕು ಮತ್ತು ಏನ್ಮಾಡಬಾರದು? ಇಲ್ಲಿವೆ ಸರ್ಕಾರದ New Guidelines

ಭಾರತಕ್ಕೆ ಕರೆತಂದ ಬಳಿಕವೂ ಕೂಡ ಸುರಕ್ಷತೆಯ ಆಧಾರದ ಮೇಲೆ ಆತನನ್ನು ಮುಂಬೈ ಜೈಲಿಗೆ ಕರೆತರಲಾಗಿರಲಿಲ್ಲ. ಏಕೆಂದರೆ ದಾವುದ್ ಬೆಂಬಲಿತ ಜನರು ಆತನ ವಿರುದ್ಧ ಕುತಂತ್ರ ರಚಿಸುವ ಸಾಧ್ಯತೆ ಇದ್ದು, ಮುಂಬೈ ಜೈಲಿನಲ್ಲಿ ಆತನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂದು ವರ್ತಿಸಲಾಗಿತ್ತು. ಈ ಶಂಕೆಯ ಹಿನ್ನೆಲೆ ಛೋಟಾ ರಾಜನ್ ನನ್ನು ಎಲ್ಲ ಪ್ರಕರಣಗಳ ಶಿಕ್ಷೆ ಅನುಭವಿಸಲು ದೆಹಲಿಯ ತಿಹಾರ್ ಜೈಲಿಗೆ (Tihar Jail) ಕಳುಹಿಸಲಾಗಿತ್ತು.

ಇದನ್ನೂ ಓದಿ- ಮೇ 10 ರಿಂದ 25 ರವರೆಗೆ ರಾಜ್ಯದಲ್ಲಿ ಸಂಪೂರ್ಣ 'ಲಾಕ್ ಡೌನ್'!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More