Home> India
Advertisement

ಬಿಸಿಬಿಸಿ ಸಕ್ಕರೆ ಪಾಕಕ್ಕೆ ಬಿದ್ದು 2 ವರ್ಷದ ಮಗು ಸಾವು

ಆಟವಾಡುತ್ತಿದ್ದ 2 ವರ್ಷದ ಬಾಲಕ ರಾಜವೀರ್ ನಿತಿನ್ ಮೆಘ್‌ವಾಲೆ ಆಕಸ್ಮಿಕವಾಗಿ ಬಿಸಿ ಸಕ್ಕರೆ ಪಾಕವಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದ ಪರಿಣಾಮ ಮೈತುಂಬಾ ಸುಟ್ಟ ಗಾಯಗಳಾಗಿತ್ತು.

ಬಿಸಿಬಿಸಿ ಸಕ್ಕರೆ ಪಾಕಕ್ಕೆ ಬಿದ್ದು 2 ವರ್ಷದ ಮಗು ಸಾವು

ಔರಂಗಾಬಾದ್: ಬಿಸಿಬಿಸಿ ಗುಲಾಬ್ ಜಾಮೂನ್ ತಯಾರಿಸಿದ್ದ ದೊಡ್ಡ ಪಾತ್ರೆಯೊಳಗೆ ಬಿದ್ದು 2 ವರ್ಷದ ಮಗುವೊಂದು ಸಾವನ್ನಪ್ಪಿದ್ದ ಮನಕಲಕುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

ಪೈಥಾನ್ ಗೇಟ್‌ನ ದಳಲ್ವಾಡಿಯಲ್ಲಿ ಧಾರ್ಮಿಕ ಉತ್ಸವಕ್ಕಾಗಿ ಮಹಾಪ್ರಸಾದವಾಗಿ ಬಿಸಿಬಿಸಿ ಗುಲಾಬ್ ಜಾಮೂನ್ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲೇ ಆಟವಾಡುತ್ತಿದ್ದ 2 ವರ್ಷದ ಬಾಲಕ ರಾಜವೀರ್ ನಿತಿನ್ ಮೆಘ್‌ವಾಲೆ ಆಕಸ್ಮಿಕವಾಗಿ ಬಿಸಿ ಸಕ್ಕರೆ ಪಾಕವಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದ ಪರಿಣಾಮ ಮೈತುಂಬಾ ಸುಟ್ಟ ಗಾಯಗಳಾಗಿವೆ. ಕೂಡಲೇ ಮಗುವನ್ನು ವ್ಯಾಲಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಬಳಿಕ ಮಗು ಮೃತಪಟ್ಟಿದೆ.

ಉತ್ಸವದ ಸಿದ್ಧತೆಯಲ್ಲಿ ಮನೆಯವರೆಲ್ಲ ತೊಡಗಿದ್ದರಿಂದ ಮಗುವಿನ ಕಡೆ ಗಮನ ಹರಿಸದ ಕಾರಣ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಘಟನೇ ಸಂಬಂಧ ಕ್ರಾಂತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Read More