Home> India
Advertisement

ರೈಲಿಗೆ ಸಿಲುಕಿ ಎರಡು ಹುಲಿಮರಿಗಳ ಸಾವು!

ಅರಣ್ಯ ಅಧಿಕಾರಿಗಳು ಈ ಘಟನೆ ಬಗ್ಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಈ ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗಿದೆ. 

ರೈಲಿಗೆ ಸಿಲುಕಿ ಎರಡು ಹುಲಿಮರಿಗಳ ಸಾವು!

ಚಂದ್ರಾಪುರ: ಸುಮಾರು 8 ರಿಂದ 10 ತಿಂಗಳ ಎರಡು ಹುಲಿ ಮರಿಗಳು ಚಂದಾ ಫೋರ್ಟ್-ಗೊಂಡಿಯಾ ಮಾರ್ಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದ ಧಾರುಣ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಜುನೋನ ಅರಣ್ಯ ಪ್ರದೇಶದ ನಡೆದಿದೆ.

ಅರಣ್ಯ ಅಧಿಕಾರಿಗಳು ಈ ಘಟನೆ ಬಗ್ಗೆ ಗುರುವಾರ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಈ ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗಿದೆ. 

ಮತ್ತೊಂದೆಡೆ, ನರಭಕ್ಷಕ ಹುಲಿ ಎಂದೇ ಬಿಂಬಿತವಾಗಿ ಇತ್ತೀಚೆಗೆ ಅರಣ್ಯ ಸಿಬ್ಬಂದಿ ಗುಂಡಿಗೆ ಬಲಿಯಾದ T1/ಅವನಿಯ ಎರಡು ಮರಿಗಳು ವಿಹಿರ್​ಗಾವ್​ ಗ್ರಾಮದ ಬಳಿ ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಸಂರಕ್ಷಣೆ ಇಲಾಖೆಯ ಹೆಚ್ಚುವರಿ ಮುಖ್ಯಸ್ಥ ಸುನಿಲ್​ ಲಿಮಾಯೆ ಅವರು, ಅವನಿಯ ಎರಡೂ ಮರಿಗಳು ಒಟ್ಟಿಗೆ ಓಡಾಡುತ್ತಿದ್ದುದು ಪತ್ತೆಯಾಗಿದೆ. ನಮ್ಮ ತಂಡ ಈಗಾಗಲೇ ಆ ಸ್ಥಳಕ್ಕೆ ತೆರಳಿದ್ದು, ಅವುಗಳನ್ನು ಸೆರೆಹಿಡಿಯುವ ಕಾರ್ಯದಲ್ಲಿ ನಿರತವಾಗಿವೆ ಎಂದಿದ್ದಾರೆ. 
 

Read More