Home> India
Advertisement

ಜಮ್ಮು-ಕಾಶ್ಮೀರ: ಎಲ್‌ಇಟಿಗೆ ಸೇರಿದ ಇಬ್ಬರು ಪಾಕ್ ನಾಗರಿಕರು ಅರೆಸ್ಟ್

ಆಗಸ್ಟ್ 21ರಂದು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಭಾರತೀಯ ಸೇನೆ ಬಂಧಿಸಿದೆ.

ಜಮ್ಮು-ಕಾಶ್ಮೀರ: ಎಲ್‌ಇಟಿಗೆ ಸೇರಿದ ಇಬ್ಬರು ಪಾಕ್ ನಾಗರಿಕರು ಅರೆಸ್ಟ್

ಶ್ರೀನಗರ: ಆಗಸ್ಟ್ 21ರಂದು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸೇರಿದ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಭಾರತೀಯ ಸೇನೆ ಬಂಧಿಸಿದೆ.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್, "ಆಗಸ್ಟ್ 5ರ ಬಳಿಕ ಪಾಕಿಸ್ತಾನವು ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತೊಡೆದುಹಾಕಲು ಭಯೋತ್ಪಾದನೆಯ್ ಮೂಲಕ ಪ್ರತಿದಿನವೂ ಪ್ರಯತ್ನಿಸುತ್ತಿದೆ" ಎಂದು ಹೇಳಿದರು.

"ಆಗಸ್ಟ್ 21 ರಂದು ಪಾಕ್ ನಡೆಸಿದ ಅಂತಹ ಒಂದು ಪ್ರಯತ್ನದಲ್ಲಿ, ನಾವು ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದೇವೆ. ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿಗೆ ಸೇರಿದ ಇಬ್ಬರು ಪಾಕಿಸ್ತಾನಿ ನಾಗರಿಕರನ್ನು ಭಾರತೀಯ ಸೇನೆಯು ನೇರವಾಗಿ ಬಂಧಿಸಿದೆ" ಎಂದು ಚಿನಾರ್ ಹೇಳಿದರು.

ಆರ್ಟಿಕಲ್ 370 ರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಆಗಿ ಆಗಸ್ಟ್ 5 ರಂದು ವಿಭಜಿಸಿದ ಬಳಿಕ ಈ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Read More