Home> India
Advertisement

'ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ' ಭಿತ್ತಿಪತ್ರ ಹಿಡಿದು ವಿವಾದಕ್ಕೆ ಸಿಲುಕಿದ ಟ್ವಿಟ್ಟರ್ ಸಿಇಓ

ಭಾರತದ ಪ್ರವಾಸದಲ್ಲಿರುವ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಈಗ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ ಎನ್ನುವ ಪೋಸ್ಟರ್ ಹಿಡಿದು ವಿವಾದಕ್ಕೆ ಕಾರಣವಾಗಿದ್ದಾರೆ.

'ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ' ಭಿತ್ತಿಪತ್ರ ಹಿಡಿದು ವಿವಾದಕ್ಕೆ ಸಿಲುಕಿದ ಟ್ವಿಟ್ಟರ್ ಸಿಇಓ

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಈಗ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ ಎನ್ನುವ ಪೋಸ್ಟರ್ ಹಿಡಿದು ವಿವಾದಕ್ಕೆ ಕಾರಣವಾಗಿದ್ದಾರೆ.

ಪತ್ರಕರ್ತರು, ಬರಹಗಾರರು, ಸಾಮಾಜಿಕ ಹೋರಾಟಗಾರರೊಂದಿಗೆ ನಡೆದ ದುಂಡು ಮೇಜಿನ ಸಭೆಯಲ್ಲಿ ಟ್ವಿಟ್ಟರ್ ಸಿಇಓ ಜಾಕ್ ಡೋರ್ಸಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದಲಿತ ಹೋರಾಟಗಾರ್ತಿಯೊಬ್ಬರು ಅವರಿಗೆ ಬ್ರಾಹ್ಮಣಿಕಲ್ ಪ್ರಭುತ್ವ ನಾಶಪಡಿಸಿ(Smash Brahmanical Patriarchy) ಎನ್ನುವ ಭಿತ್ತಿಪತ್ರವನ್ನು ನೀಡಿದ್ದಾರೆ. ಈ ಭಿತ್ತಿಪತ್ರವನ್ನು ಜಾಕ್ ಡೋರ್ಸಿ  ಹಿಡಿರುವ ಚಿತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ.

ಈ ಫೋಟೋವನ್ನು ಅನ್ನಾ ಎಂಎಂ ವೆಟ್ಟಿಕಾಡ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ " ಎಂತಹ ಅವಮಾನವಿದು; ಅದೇಗೆ ಜನರು ಸಮುದಾಯವೊಂದರ ಬಗ್ಗೆ ದ್ವೇಷ ಕಾರುವ ಪೋಸ್ಟರ್ ಹಾಕುತ್ತಾರೆ; ಜಾಕ್ ಡೋರ್ಸಿ ನೀವು ಟ್ವಿಟ್ಟರ್ ಸಿಇಓ ಆಗಿ ಅದೇಗೆ ಇಂತಹ ದ್ವೇಷದ ಭಾಗವಾಗಿದ್ದಿರಿ? ಇದು ನಿಜಕ್ಕೂ ಅಚ್ಚರಿ ಬ್ರಾಹ್ಮಿಣೋಪೋಬಿಯಾ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಟ್ವಿಟ್ಟರ್ ಇಂಡಿಯಾ " ಇದು ಟ್ವಿಟ್ಟರ್ ಅಥವಾ ನಮ್ಮ ಸಿಇಓ ಹೇಳಿಕೆಯಲ್ಲ, ಆದರೆ ವಿಶ್ವದಾದ್ಯಂತ ನಮ್ಮ ಸೇವೆಯ ವಿಚಾರವಾಗಿ ಪ್ರಮುಖ ಸಾರ್ವಜನಿಕ ಚರ್ಚೆಗಳನ್ನು ನೋಡಲು, ಕೇಳಲು ಮತ್ತು ಅರ್ಥಮಾಡಿಕೊಳ್ಳವ ಭಾಗವಾಗಿ ಟ್ವಿಟ್ಟರ್ ನ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು.

Read More