Home> India
Advertisement

ಭಕ್ತರ ಗಮನಕ್ಕೆ : ತಿರುಪತಿಯಲ್ಲಿ ಈ ತಪ್ಪು ಮಾಡಿದ್ರೆ ದೇವರ ದರ್ಶನ ಸಿಗಲ್ಲ..!

TTD News : ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್‌ಗಳನ್ನು ನೀಡಲಾಗುತ್ತಿತ್ತು. ಇದೀಗ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್‌ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್‌ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದೆ. 

ಭಕ್ತರ ಗಮನಕ್ಕೆ : ತಿರುಪತಿಯಲ್ಲಿ ಈ ತಪ್ಪು ಮಾಡಿದ್ರೆ ದೇವರ ದರ್ಶನ ಸಿಗಲ್ಲ..!

Tirumala Darshan Tokens : ಬೇಸಿಗೆ ರಜೆ ಹಿನ್ನೆಲೆ ತಿರುಪತಿ ಬಾಲಾಜಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ತಿರುಮಲಕ್ಕೆ ಹೋಗಲು ಪ್ಲಾನ್‌ ಮಾಡಿಕೊಂಡಿರುವ ಭಕ್ತರು ಖಂಡಿತವಾಗಿಯೂ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ದರ್ಶನ್ ಟೋಕನ್‌ಗಳ ವಿಷಯದಲ್ಲಿ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. 

ಅಲಿಪಿರಿಯಿಂದ ಕಾಲ್ನಡಿಗೆಯ ಮೂಲಕ ದೇವರ ದರ್ಶನಕ್ಕೆ ಹೋಗುವ ಭಕ್ತರಿಗೆ ಗಾಲಿ ಗೋಪುರದಲ್ಲಿ ದಿವ್ಯ ದರ್ಶನ ಟೋಕನ್‌ಗಳನ್ನು ನೀಡಲಾಗುತ್ತಿತ್ತು. ಇದೀಗ ಶುಕ್ರವಾರದಿಂದ ದಿವ್ಯ ದರ್ಶನ ಟೋಕನ್‌ಗಳ ವಿತರಣಾ ಕೇಂದ್ರವನ್ನು ಬದಲಾಯಿಸಲಾಗಿದೆ. ಸದ್ಯ ಅಲಿಪಿರಿಯ ಭೂದೇವಿ ಕಾಂಪ್ಲೆಕ್ಸ್‌ನಲ್ಲಿಯೇ ದರ್ಶನದ ಟೋಕನ್ ವಿತರಿಸಲಾಗುತ್ತಿದೆ. ಟೋಕನ್ ಪಡೆದ ಭಕ್ತರು ಗಾಲಿ ಗೋಪುರದಲ್ಲಿ ಸ್ಕ್ಯಾನಿಂಗ್ ಮಾಡಿಸಿ ದರ್ಶನ ಪಡೆಯಬೇಕು. ಸ್ಕ್ಯಾನಿಂಗ್ ಮಾಡಿಸಿಕೊಳ್ಳದೆ ಬೇರೆ ಮಾರ್ಗದಲ್ಲಿ ತಿರುಮಲಕ್ಕೆ ಹೋದರೂ ಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. 

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಗೆ ಸಮನ್ಸ್ ಜಾರಿ 

ಶ್ರೀವಾರಿ ಮೆಟ್ಟು ಮಾರ್ಗದಿಂದ ತೆರಳುವ ಭಕ್ತರಿಗೆ 1240ನೇ ಮೆಟ್ಟಿಲಲ್ಲಿ ದಿವ್ಯ ದರ್ಶನ ಟೋಕನ್ ನೀಡಲಾಗುವುದು. ಈ ಕೇಂದ್ರವನ್ನು ಬದಲಾಯಿಸಿಲ್ಲ. ಟಿಟಿಡಿ ಅಧಿಕಾರಿಗಳು ಟೈಮ್ ಸ್ಲಾಟ್ ಸರ್ವದರ್ಶನ ಟೋಕನ್‌ಗಳ ಕೇಂದ್ರವನ್ನು ಮಾತ್ರ ಬದಲಾಯಿಸಿದ್ದಾರೆ. ಅಲಿಪಿರಿ ಭೂದೇವಿ ಸಂಕೀರ್ಣವನ್ನು ವಿಷ್ಣು ನಿವಾಸ ಯಾತ್ರಿ ವಸತಿ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗಿದೆ.

ಇನ್ನು ವಾಹನಗಳ ಮೂಲಕ ತಿರುಮಲಕ್ಕೆ ತೆರಳುವ ಭಕ್ತರಿಗೆ ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಶ್ರೀನಿವಾಸಂ, ರೈಲ್ವೆ ನಿಲ್ದಾಣದ ಎದುರಿನ ವಿಷ್ಣುನಿವಾಸ ಮತ್ತು ತಿರುಪತಿ ರೈಲು ನಿಲ್ದಾಣದಲ್ಲಿ ಗೋವಿಂದ ರಾಜಸತ್ರಗಳಲ್ಲಿ ಸರ್ವದರ್ಶನಂ ಟೋಕನ್‌ಗಳನ್ನು ನೀಡಲಾಗುತ್ತದೆ. ಭಕ್ತರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸಬೇಕಾಗಿ ಟಿಟಿಡಿ ಅಧಿಕಾರಿಗಳು ಕೋರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More