Home> India
Advertisement

Tina Dabi: 2ನೇ ಮದುವೆ ಬಗ್ಗೆ ಐಎಎಸ್ ಟಾಪರ್ ಟೀನಾ ದಾಬಿ ಹೇಳಿದ್ದೇನು..?

2015ನೇ ಸಾಲಿನ UPSC ಟಾಪರ್, ಐಎಎಸ್ ಅಧಿಕಾರ ಟೀನಾ ದಾಬಿ ರಾಜಸ್ಥಾನದ ಪುರಾತತ್ವ ಇಲಾಖೆಯ ನಿರ್ದೇಶಕ ಪ್ರದೀಪ್ ಗವಾಂಡೆ ಅವರನ್ನು ಮದುವೆಯಾಗಲಿದ್ದಾರೆ.

Tina Dabi: 2ನೇ ಮದುವೆ ಬಗ್ಗೆ ಐಎಎಸ್ ಟಾಪರ್ ಟೀನಾ ದಾಬಿ ಹೇಳಿದ್ದೇನು..?

ನವದೆಹಲಿ: ದೇಶದ ಖ್ಯಾತ ಐಎಎಸ್ ಅಧಿಕಾರಿ ಟೀನಾ ದಾಬಿ 2ನೇ ಮದುವೆ(Tina Dabi 2nd Marriage) ವಿಚಾರವಾಗಿ ಸುದ್ದಿಯಾಗಿದ್ದಾರೆ. ಅವರ 2ನೇ ಮದುವೆಗೆ ಜನರು ಶುಭ ಹಾರೈಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಧನ್ಯವಾದ ಹೇಳಿದ್ದಾರೆ. 2015ರ UPSC ಟಾಪರ್ ಟೀನಾ ದಾಬಿ(Tina Dabi) ರಾಜಸ್ಥಾನ ಪುರಾತತ್ವ ಇಲಾಖೆಯ ನಿರ್ದೇಶಕ ಪ್ರದೀಪ್ ಗವಾಂಡೆ ಅವರನ್ನು ಮದುವೆಯಾಗಲಿದ್ದಾರೆ.

ಜನರಿಗೆ ಧನ್ಯವಾದ ತಿಳಿಸಿದ ಟೀನಾ ದಾಬಿ

ಪ್ರದೀಪ್ ಗವಾಂಡೆ(Pradeep Gawande) ಅವರೊಂದಿಗೆ ಮದುವೆಯಾಗುವುದಾಗಿ ಘೋಷಿಸಿದ ಬಳಿಕ ಟೀನಾ ದಾಬಿ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರದೀಪ್ ಗವಾಂಡೆ ಅವರೊಂದಿಗಿನ ತಮ್ಮ ಚಿತ್ರ ಹಂಚಿಕೊಂಡಿರುವ ಅವರು, ‘ಸಾಮಾಜಿಕ ಮಾಧ‍್ಯಮದಲ್ಲಿ ಬಂದ ಸಂದೇಶಗಳು ಮತ್ತು ಶುಭಾಶಯಗಳಿಂದ ನನಗೆ ಖುಷಿಯಾಗಿದೆ. ಶುಭಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ 24 ಗಂಟೆಗಳಲ್ಲಿ ನಾವು ಪಡೆದ ಪ್ರೀತಿ ಅಪಾರ. ವಿಶೇಷವಾಗಿ ಮಹಾರಾಷ್ಟ್ರದಿಂದ ಶುಭಾಶಯ ತಿಳಿಸಿದವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ! ಮುಖ್ಯ ದ್ವಾರಕ್ಕೆ ಕೇಸರಿ ಬಣ್ಣ ಬಳಿದು ಪ್ರತಿಭಟನೆ

ಪೋಸ್ಟ್ ಹಂಚಿಕೊಂಡ ಪ್ರದೀಪ್ ಗಾವಂಡೆ

ಅದೇ ರೀತಿ ಪ್ರದೀಪ್ ಗಾವಂಡೆ ಕೂಡ ಟೀನಾ ದಾಬಿಯವರೊಂದಿಗಿನ ಕೆಲವು ಚಿತ್ರ(IAS Tina Dabi Marriage)ಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಲ್ಲಿ ಟೀನಾ ಕುಟುಂಬದೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ. ‘ಕುಟುಂಬ ಕಾರ್ಯಕ್ರಮದ ಕೆಲವು ಸಂತೋಷದ ಕ್ಷಣಗಳು’ ಎಂದು ಅವರು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.   

ಚರ್ಚೆಗೆ ಗ್ರಾಸವಾದ ಟೀನಾ ದಾಬಿ 2ನೇ ಮದುವೆ

 
 
 
 

 
 
 
 
 
 
 
 
 
 
 

A post shared by Tina Dabi (@dabi_tina)

ಟೀನಾ ದಾಬಿಯವರ ಮಾಜಿ ಪತಿ ಅಥರ್ ಅಮೀರ್ ಖಾನ್(Athar Aamir Khan) ಕೂಡ ಐಎಎಸ್ ಅಧಿಕಾರಿ. ಇದಲ್ಲದೇ ಟೀನಾ ಸಹೋದರಿ ರಿಯಾ ದಾಬಿ ಕೂಡ ಐಎಎಸ್ ಅಧಿಕಾರಿ ಆಗಿದ್ದಾರೆ. ಮಾರ್ಚ್ 28ರಂದು ಐಎಎಸ್ ಪ್ರದಿವ್ ಗವಾಂಡೆ ಅವರೊಂದಿಗೆ ಟೀನಾ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದ ಸುದ್ದಿಯಲ್ಲಿದ್ದಾರೆ. ಇವರಿಬ್ಬರೂ 2022ರ ಏಪ್ರಿಲ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂದು ವರದಿಯಾಗಿದೆ. ಟೀನಾಗೆ ಇದು 2ನೇ ಮದುವೆ ಮತ್ತು ಪ್ರದೀಪ್‍ಗೆ ಮೊದಲ ಮದುವೆಯಾಗಿದೆ. ಟೀನಾಗೆ 28 ವರ್ಷವಾದರೆ, ಪ್ರದೀಪ್(IAS Pardeep Gawande) ಅವರಿಗೆ 39 ವರ್ಷ ವಯಸ್ಸಾಗಿದೆ.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರೆ ಗಮನಿಸಿ : ಏಪ್ರಿಲ್‌ನಲ್ಲಿ ಒಟ್ಟು 15 ದಿನ ಬ್ಯಾಂಕ್‌ ಬಂದ್!

2018ರಲ್ಲಿ ಮದುವೆ ಮತ್ತು 2021ರಲ್ಲಿ ವಿಚ್ಛೇದನ

ಟೀನಾ ಮತ್ತು ಅಥರ್ ಖಾನ್ 2018ರಲ್ಲಿ ವಿವಾಹವಾದರು. ಮದುವೆಯ ನಂತರ ಕೆಲವು ದಿನಗಳ ತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕೆಲ ದಿನಗಳ ನಂತರ ಇಬ್ಬರ ನಡುವಿನ ಅಂತರ ಹೆಚ್ಚಾಗತೊಡಗಿತು. ಮೊದಲು ಟೀನಾ ದಾಬಿ ತಮ್ಮ ಹೆಸರಿನ ಮುಂದಿದ್ದ ಖಾನ್ ಅನ್ನು ತೆಗೆದುಹಾಕಿದರು. ಕೆಲವು ದಿನಗಳ ನಂತರ ಅಥರ್ ಸಹ ಇನ್ಸ್ಟಾಗ್ರಾಮ್ನಲ್ಲಿ ಟೀನಾ ದಾಬಿ(IAS officer Tina Dabi)ಯನ್ನು ಅನ್ಫಾಲೋ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಕೆಲ ದಿನಗಳ ನಂತರ ಅವರ ವಿಚ್ಛೇದನದ ಸುದ್ದಿಯೂ ಬರಲಾರಂಭಿಸಿತು. ನಂತರ 2021ರಲ್ಲಿ ಇಬ್ಬರೂ ಪರಸ್ಪರ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More