Home> India
Advertisement

SBI YONOದಲ್ಲಿ ಮತ್ತೆ ಆರಂಭವಾಗಿದೆ ಈ ಸೇವೆ, ಮೊಬೈಲ್‌ನಲ್ಲೇ ಮಾಡಿ ಬ್ಯಾಂಕ್‌ಗೆ ಸಂಬಂಧಿಸಿದ ಈ ಕೆಲಸ

Yono (you only need one) ಬ್ಯಾಂಕಿಂಗ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸೇವೆಯಾಗಿದೆ.

SBI YONOದಲ್ಲಿ ಮತ್ತೆ ಆರಂಭವಾಗಿದೆ ಈ ಸೇವೆ, ಮೊಬೈಲ್‌ನಲ್ಲೇ ಮಾಡಿ ಬ್ಯಾಂಕ್‌ಗೆ ಸಂಬಂಧಿಸಿದ ಈ ಕೆಲಸ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಆಧಾರ್ ಕಾರ್ಡ್ ಮೂಲಕ ಆನ್‌ಲೈನ್ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ಶುಕ್ರವಾರ ಪ್ರಾರಂಭಿಸಿದೆ. ಬ್ಯಾಂಕಿನ Yono ಮೂಲಕ ಡಿಜಿಟಲ್ ಉಳಿತಾಯ ಖಾತೆ ತೆರೆಯಲು ಈ ಸೌಲಭ್ಯವನ್ನು ಬಳಸಬಹುದು. Yono (you only need one) ಬ್ಯಾಂಕಿಂಗ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸೇವೆಯಾಗಿದೆ.

ನಿಮ್ಮ ಹಣವನ್ನು ಸುರಕ್ಷಿತವಾಗಿಡಲು ಎಸ್‌ಬಿಐನ ಈ ಟಿಪ್ಸ್ ಅನುಸರಿಸಿ

ಬ್ಯಾಂಕ್ ಪ್ರಕಾರ, ಇನ್ಸ್ಟಾ ಸೇವಿಂಗ್ ಬ್ಯಾಂಕ್ ಖಾತೆಯ ಈ ಪ್ರಸ್ತಾಪದಡಿಯಲ್ಲಿ ಗ್ರಾಹಕರಿಗೆ ಕಾಗದೇತರ ಬ್ಯಾಂಕಿಂಗ್ ಅನುಭವ ಸಿಗುತ್ತದೆ. ಈ ಉಳಿತಾಯ ಖಾತೆಗಾಗಿ, ಗ್ರಾಹಕರು ಪ್ಯಾನ್ ಮತ್ತು ಆಧಾರ್ ಅನ್ನು ಮಾತ್ರ ಒದಗಿಸಬೇಕಾಗುತ್ತದೆ.

ಈ ಖಾತೆಯಲ್ಲಿ ಗ್ರಾಹಕರಿಗೆ ಉಳಿತಾಯ ಖಾತೆಯ ಎಲ್ಲಾ ವೈಶಿಷ್ಟ್ಯಗಳು ಸಿಗುತ್ತವೆ ಎಂದು ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ. ಇದಕ್ಕಾಗಿ ಅವರು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಯೋನೊದಿಂದ ಉಳಿತಾಯ ಖಾತೆ ತೆರೆಯುವ ಎಲ್ಲಾ ಖಾತೆದಾರರಿಗೆ ಬ್ಯಾಂಕ್ ತಮ್ಮ ಹೆಸರಿನಲ್ಲಿ ರೂಪೇ (Rupay) ಎಟಿಎಂ ಡೆಬಿಟ್ ಕಾರ್ಡ್ ನೀಡುತ್ತದೆ.

ಈ ಹಿಂದೆ ಠೇವಣಿ ಇಟ್ಟಿದ್ದ 5 ಲಕ್ಷ ರೂ.ಗಳ ಮೊತ್ತವನ್ನು ಸಂಪೂರ್ಣವಾಗಿ ವಿಮೆ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿತ್ತು. ಅಂದರೆ ಅವರು 5 ಲಕ್ಷ ರೂಪಾಯಿಗಳವರೆಗೆ ಠೇವಣಿಗಳಿಗೆ ವಿಮೆ ನೀಡುತ್ತಿದ್ದಾರೆ.

UPI ಖಾತೆ ರಚಿಸುವುದು ಹೇಗೆ? ಅದರ ಪ್ರಯೋಜನಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಎಸ್‌ಬಿಐನ ಟ್ವೀಟ್‌ನ ಪ್ರಕಾರ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (ಡಿಐಜಿಸಿ) ಯೋಜನೆಯಡಿ ಸೇವಿಂಗ್ ಮತ್ತು ಕರೆಂಟ್ ಅಕೌಂಟ್ ಸ್ಥಿರ ಠೇವಣಿ (FD), ಆವರ್ತ ಠೇವಣಿ ಗಳಲ್ಲಿ 5 ಲಕ್ಷ ರೂಪಾಯಿಗಳವರೆಗೆ ಠೇವಣಿಗಳಿಗೆ ವಿಮೆ ನೀಡುತ್ತಿದ್ದಾರೆ.

ಎಸ್‌ಬಿಐನಲ್ಲಿ 5 ಲಕ್ಷ ರೂಪಾಯಿಗಳನ್ನು ಠೇವಣಿ ಇರಿಸಿದವರಿಗೆ ಬ್ಯಾಂಕ್ ನೀಡುತ್ತಿದೆ ಈ ಲಾಭ

ಬ್ಯಾಂಕ್ ಪ್ರಕಾರ, ಇದು ಪ್ರಿನ್ಸಿಪಾಲ್ ಮತ್ತು ಬಡ್ಡಿ ಎರಡನ್ನೂ ಒಳಗೊಂಡಿದೆ. ಈ ಹಿಂದೆ ಬ್ಯಾಂಕ್ ಠೇವಣಿಗಳ ವಿಮಾ ಮೊತ್ತದ ಹೆಚ್ಚಳದಿಂದಾಗಿ ಗ್ರಾಹಕರಿಗೆ ಪ್ರೀಮಿಯಂ ರವಾನಿಸುವುದಿಲ್ಲ ಎಂದು ಬ್ಯಾಂಕ್ ತಿಳಿಸಿತ್ತು. 2020 ರ ಬಜೆಟ್‌ನಲ್ಲಿ ಸರ್ಕಾರ ಬ್ಯಾಂಕಿನಲ್ಲಿ ಠೇವಣಿ ಇಡುವ ಖಾತರಿಯನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.

ಬ್ಯಾಂಕ್ ಪ್ರಕಾರ ಇದು ಪ್ರಿನ್ಸಿಪಾಲ್ ಮತ್ತು ಬಡ್ಡಿ ಎರಡನ್ನೂ ಒಳಗೊಂಡಿದೆ. ಈ ಹಿಂದೆ ಬ್ಯಾಂಕ್ ಠೇವಣಿಗಳ ವಿಮಾ ಮೊತ್ತದ ಹೆಚ್ಚಳದಿಂದಾಗಿ ಗ್ರಾಹಕರಿಗೆ ಪ್ರೀಮಿಯಂ ರವಾನಿಸುವುದಿಲ್ಲ ಎಂದು ಬ್ಯಾಂಕ್ ತಿಳಿಸಿತ್ತು. 2020 ರ ಬಜೆಟ್‌ನಲ್ಲಿ ಸರ್ಕಾರ ಬ್ಯಾಂಕಿನಲ್ಲಿ ಠೇವಣಿ ಇಡುವ ಖಾತರಿಯನ್ನು 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿದೆ.

Read More