Home> India
Advertisement

ಭವಿಷ್ಯದಲ್ಲಿ ನಿತೀಶ್ ಕುಮಾರ್ ರೊಂದಿಗೆ ಯಾವುದೇ ಮೈತ್ರಿ ಇಲ್ಲ-ಸುಶೀಲ್ ಕುಮಾರ್ ಮೋದಿ

ಭಾನುವಾರದಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಶೀಲ್ ಮೋದಿ, “ಪ್ರಧಾನಿ ನರೇಂದ್ರ ಮೋದಿ ಜಿ, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ಲಾ ಹಿರಿಯ ನಾಯಕರು ಭವಿಷ್ಯದಲ್ಲಿ ನಿತೀಶ್ ಕುಮಾರ್ ಅಥವಾ ಜೆಡಿಯು ಜೊತೆ ಯಾವುದೇ ಸಮ್ಮಿಶ್ರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಭವಿಷ್ಯದಲ್ಲಿ ನಿತೀಶ್ ಕುಮಾರ್ ರೊಂದಿಗೆ ಯಾವುದೇ ಮೈತ್ರಿ ಇಲ್ಲ-ಸುಶೀಲ್ ಕುಮಾರ್ ಮೋದಿ

ನವದೆಹಲಿ: ನಿತೀಶ್ ಕುಮಾರ್ ಅವರೊಂದಿಗೆ ಯಾವುದೇ ಮೈತ್ರಿಕೂಟ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಶೀಲ್ ಮೋದಿ ಅವರು ಹೇಳಿದ್ದಾರೆ.

ಭಾನುವಾರದಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಶೀಲ್ ಮೋದಿ, “ಪ್ರಧಾನಿ ನರೇಂದ್ರ ಮೋದಿ ಜಿ, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ಲಾ ಹಿರಿಯ ನಾಯಕರು ಭವಿಷ್ಯದಲ್ಲಿ ನಿತೀಶ್ ಕುಮಾರ್ ಅಥವಾ ಜೆಡಿಯು ಜೊತೆ ಯಾವುದೇ ಸಮ್ಮಿಶ್ರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಆ ವ್ಯಕ್ತಿ ಕೇವಲ ಬಿಜೆಪಿಗೆ ದ್ರೋಹ ಬಗೆದಿಲ್ಲ, ಜನತೆ ಮತ್ತು ಪ್ರಧಾನಿ ಮೋದಿಯವರ ಜನಾದೇಶಕ್ಕೂ ದ್ರೋಹ ಬಗೆದಿದ್ದಾರೆ. ನಿತೀಶ್‌ ಕುಮಾರ್ ಹೊಣೆಗಾರರಾಗಿದ್ದಾರೆ ಮತ್ತು ಅವರ ಮತ ಸೆಳೆಯುವ ಸಾಮರ್ಥ್ಯ ಕೊನೆಗೊಂಡಿದೆ ಎಂದು ಸುಶೀಲ್ ಮೋದಿ ಹೇಳಿದರು.

ಇದನ್ನೂ ಓದಿ: Taraka Ratna : ʼಅಣ್ಣನಿಗೆ ಅಸಂಖ್ಯಾತ ಅಭಿಮಾನಿಗಳ ಆರ್ಶೀವಾದ ಇದೆʼ ಗುಣಮುಖರಾಗ್ತಾರೆ

"ಅಧಿಕಾರ ಇರುವವರ ಜೊತೆ ಮೈತ್ರಿಕೂಟ ನಡೆಯುತ್ತದೆ, ಆದರೆ ನಿತೀಶ್ ಕುಮಾರ್ ಈಗ ಹೊಣೆಗಾರರಾಗಿದ್ದಾರೆ, ಅವರ ಮತಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ಕೊನೆಗೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು 44 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು, ಪ್ರಧಾನಿ ಮೋದಿ ಅವರ ಪರವಾಗಿ ಪ್ರಚಾರ ಮಾಡಿದರು, ಇಲ್ಲದಿದ್ದರೆ ಅವರು 15 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ,’’ ಎಂದು ಹೇಳಿದರು.ಬಿಜೆಪಿಯು ಈಗ ತನ್ನ ಸ್ವಂತ ಸಾಮರ್ಥ್ಯದ ಮೇಲೆ ಚುನಾವಣೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎನ್ನುವುದು ಬಿಜೆಪಿಗೆ ಸಂತೋಷವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: “ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ”

"ನಿತೀಶ್ ಕುಮಾರ್ ಈಗ ಶಕ್ತಿಹೀನರಾಗಿದ್ದಾರೆ, ಬಿಜೆಪಿ ಅಥವಾ ಆರ್‌ಜೆಡಿಯಲ್ಲಿ ಅವರು ಇನ್ನು ಮುಂದೆ ಮತಗಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಅವರು ಒಕ್ಕೂಟವನ್ನು ತೊರೆದಿರುವುದು ನಮಗೆ ಸಂತೋಷವಾಗಿದೆ, ಈಗ ನಾವು 2025 ರಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವೇ ಸ್ಪರ್ಧಿಸಿ ಅಧಿಕಾರಕ್ಕೆ  ಬರಬಹುದು ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Read More