Home> India
Advertisement

ಕೃಷಿ ಕೂಳೆ ಸುಡುವಿಕೆ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ

ಕಳೆದ 24 ಗಂಟೆಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿಬೆಳೆ ಪರಿಕರಗಳ ಸುಡುವಿಕೆ ಘಟನೆಗಳು 1654 ರಿಂದ 2577 ಕ್ಕೆ ಏರಿದೆ ಎಂದು ಸಫಾರ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಕೃಷಿ ಕೂಳೆ ಸುಡುವಿಕೆ: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ಬೆಳೆ ಪರಿಕರಗಳ ಸುಡುವಿಕೆ ಘಟನೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ದೆಹಲಿ ಸರ್ಕಾರವು ನಾಸಾದ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕೂಳೆ ಸುಡುವಿಕೆ ಹೆಚ್ಚಳವನ್ನು ತೋರಿಸುತ್ತಿದೆ.

ಕಳೆದ 24 ಗಂಟೆಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿಬೆಳೆ ಪರಿಕರಗಳ ಸುಡುವಿಕೆ ಘಟನೆಗಳು 1654 ರಿಂದ 2577 ಕ್ಕೆ ಏರಿದೆ ಎಂದು ಸಫಾರ್ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಈ ಕೃಷಿ ಕೂಳೆ ಸುಡುವಿಕೆಯಿಂದ ಬರುತ್ತಿರುವ ಹೊಗೆ ಮತ್ತು ಉತ್ತರಾಖಂಡದಿಂದ ಬರುತ್ತಿರುವ ಹಿಮಗಾಳಿ ಜೊತೆಗೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗಿರುವ ಮಾಲಿನ್ಯ ಇವೆಲ್ಲದರಿಂದ ದೆಹಲಿ-ಎನ್‌ಸಿಆರ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಉಸಿರಾಟಕ್ಕೆ ಶುದ್ಧ ಗಾಳಿಯೇ ಇಲ್ಲದಂತಾಗಿದೆ. 

ಕೃಷಿ ಕೂಳೆ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವು ಬುಧವಾರ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ವರದಿ ತಿಳಿಸಿದೆ. ನವೆಂಬರ್ 1 ರಂದು, ಗಾಳಿಯ ದಿಕ್ಕು ಬದಲಾಗಬಹುದು, ಬಳಿಕ ವಾಯುಮಾಲಿನ್ಯ ಕಡಿಮೆ ಆಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಿಡುಗಡೆ ಮಾಡಿದ ವರದಿಯಲ್ಲಿ ದೆಹಲಿಯಲ್ಲಿ ಈ ಬಾರಿ ದೀಪಾವಳಿಯಂದು ಕಳೆದ ವರ್ಷಕ್ಕಿಂತ ಕಡಿಮೆ ಪಟಾಕಿಗಳನ್ನು ಸಿಡಿಸಲಾಗಿದೆ. ಆದಾಗ್ಯೂ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಹೆಚ್ಚುತ್ತಲೇ ಇದೇ ಎಂದು ಹೇಳಲಾಗಿದೆ.

ಸಿಪಿಸಿಬಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೆಹಲಿಯ ಸರಾಸರಿ ಎಕ್ಯೂಐ(AQI) 400 ಆಗಿದೆ. ಗಾಜಿಯಾಬಾದ್ ಕಳೆದ 24 ಗಂಟೆಗಳಲ್ಲಿ ದೇಶದ ಅತ್ಯಂತ ಕಲುಷಿತ ನಗರವಾಗಿದ್ದು, ಸರಾಸರಿ 446 ಎಕ್ಯೂಐ(AQI) ಹೊಂದಿದೆ. ಅದೇ ರೀತಿ ನೋಯ್ಡಾದ ಎಕ್ಯೂಐ(AQI) 439, ಗ್ರೇಟರ್ ನೋಯ್ಡಾದ ಎಕ್ಯೂಐ(AQI) 428, ಮೊರಾದಾಬಾದ್‌ನ ಎಕ್ಯೂಐ(AQI) 424 ಮತ್ತು ಪಾಣಿಪತ್‌ನ ಎಕ್ಯೂಐ(AQI) 415 ದಾಖಲಾಗಿದೆ.
 

Read More