Home> India
Advertisement

ಜುಲೈನಲ್ಲಿ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರ ಶೇ 11.16 ಕ್ಕೆ ಇಳಿಕೆ

ಜುಲೈನಲ್ಲಿ ದೇಶಾದ್ಯಂತ ಸಗಟು ಹಣದುಬ್ಬರವು ಶೇಕಡಾ 11.16 ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಜುಲೈನಲ್ಲಿ ಸಗಟು ಬೆಲೆ ಸೂಚ್ಯಂಕದ ಹಣದುಬ್ಬರ  ಶೇ 11.16 ಕ್ಕೆ ಇಳಿಕೆ

ನವದೆಹಲಿ: ಜುಲೈನಲ್ಲಿ ದೇಶಾದ್ಯಂತ ಸಗಟು ಹಣದುಬ್ಬರವು ಶೇಕಡಾ 11.16 ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಸಗಟು ದರ ಸೂಚ್ಯಂಕ (WPI) ಜೂನ್ ತಿಂಗಳಲ್ಲಿ ಶೇ. 12.07 ರಷ್ಟು ವೃದ್ಧಿಯಾಗಿದ್ದು, ಮೇ ತಿಂಗಳಲ್ಲಿ ಡಬ್ಲ್ಯೂಪಿಐ ಅನ್ನು ಶೇಕಡಾ 12.94 ರಿಂದ ಶೇ 13.11 ಕ್ಕೆ ಪರಿಷ್ಕರಿಸಲಾಗಿದೆ. ಡಬ್ಲ್ಯೂಪಿಐ ಜುಲೈ 2020 ರಲ್ಲಿ (-) ಶೇಕಡಾ 0.25 ರಷ್ಟಿತ್ತು.ಆಹಾರ ಉತ್ಪನ್ನಗಳ ವಿಭಾಗವು ಜುಲೈನಲ್ಲಿ ಶೇಕಡಾ 'ಶೂನ್ಯ' ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿದೆ.ಅದಕ್ಕೂ ಹಿಂದಿನ ತಿಂಗಳಲ್ಲಿ ಇದು ಶೇಕಡಾ 3.09 ರಷ್ಟಿತ್ತು.

ಜುಲೈನಲ್ಲಿ ತರಕಾರಿ ಬೆಲೆಗಳು (-) ಶೇಕಡಾ 8.73 ರಷ್ಟು, ಜೂನ್ ನಲ್ಲಿ (-) ಶೇಕಡಾ 0.78 ರಷ್ಟು ಕುಗ್ಗಿದೆ. ದ್ವಿದಳ ಧಾನ್ಯಗಳ ಬೆಲೆ ಕಳೆದ ತಿಂಗಳು ಶೇ .8.34 ರಷ್ಟು ಏರಿಕೆಯಾಗಿದ್ದು, ಹಣ್ಣುಗಳ ಬೆಲೆ ಶೇ. 3.52 ರಷ್ಟು ಕುಸಿದಿದೆ. ಜುಲೈನಲ್ಲಿ ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ಶೇ .7.97 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಒಳ್ಳೆಯ ಸುದ್ದಿ: ತರಕಾರಿ ಅಗ್ಗ

ಇಂಧನ ಮತ್ತು ವಿದ್ಯುತ್ ವಿಭಾಗವು ಜುಲೈನಲ್ಲಿ ಶೇಕಡಾ 26.02 ಕ್ಕೆ ಇಳಿದಿದ್ದು, ಒಂದು ತಿಂಗಳ ಹಿಂದೆ ಶೇಕಡಾ 32.83 ರಷ್ಟಿತ್ತು. ಪೆಟ್ರೋಲ್ ಬೆಲೆ ಶೇ .56.58, ಎಚ್ ಎಸ್ ಡಿ (ಹೈ-ಸ್ಪೀಡ್ ಡೀಸೆಲ್) ಶೇ .52.02 ಮತ್ತು ಎಲ್ ಪಿಜಿ ಬೆಲೆ ಶೇ .36.25 ರಷ್ಟು ಏರಿಕೆಯಾಗಿದೆ ಎಂದು ಸಚಿವಾಲಯ ತನ್ನ ಅಂಕಿಅಂಶಗಳಲ್ಲಿ ತಿಳಿಸಿದೆ.

ತಯಾರಿಸಿದ ಉತ್ಪನ್ನಗಳ ವಿಭಾಗವು ಕಳೆದ ತಿಂಗಳು ಶೇಕಡಾ 11.20 ರಷ್ಟು ಏರಿಕೆಯಾಗಿದ್ದು, ತರಕಾರಿ ಮತ್ತು ಪ್ರಾಣಿಗಳ ಎಣ್ಣೆಗಳು ಮತ್ತು ಕೊಬ್ಬುಗಳಲ್ಲಿ 42.89 ಶೇಕಡಾ ಏರಿಕೆಯಾಗಿದೆ.

ಸರ್ಕಾರ ಕಳೆದ ವಾರ ಬಿಡುಗಡೆ ಮಾಡಿದ ಪ್ರತ್ಯೇಕ ದತ್ತಾಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರ ಅಥವಾ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಜುಲೈನಲ್ಲಿ ಮೂರು ತಿಂಗಳ ಕನಿಷ್ಠ 5.59 ಶೇಕಡಕ್ಕೆ ಇಳಿದಿದೆ ಎಂದು ಸಚಿವಾಲಯ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Read More