Home> India
Advertisement

ಬಹಿರಂಗಗೊಂಡ Royal Enfieldನ ಹೊಸ ಬೈಕ್ Meteor 350 Fireball ಫೋಟೋಗಳು!

Meteor 350 Fireball ಕಂಪನಿ Thunderbird 350 ಬೈಕ್ ಅನ್ನು ರಿಪ್ಲೇಸ್ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬಹಿರಂಗಗೊಂಡ Royal Enfieldನ ಹೊಸ ಬೈಕ್ Meteor 350 Fireball ಫೋಟೋಗಳು!

ನವದೆಹಲಿ: ರಾಯಲ್ ಎನ್ಫಿಲ್ದ್ ಕಂಪನಿಯ ಮುಂದಿನ ಬೈಕ್ ಹೆಸರು  Meteor 350 Fireball ಇರುವ ಸಾಧ್ಯತೆ ಇದೆ. ಈ ಬೈಕ್ ನ ಕೆಲ ಫೋಟೋಗಳು automobili.infinitiಯ ಇನ್ಸ್ಟಾಗ್ರಾಮ್ ಪುಟದಲ್ಲಿ ಬಹಿರಂಗಗೊಂಡಿವೆ  Meteor 350 Fireball ಬೈಕ್ ಕಂಪನಿ ಈ ಮೊದಲು ಬಿಡುಗಡೆಗೊಳಿಸಿರುವ Thunderbird 350 ಬೈಕ್ ಅನ್ನು ರಿಪ್ಲೇಸ್ ಮಾಡುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಸದ್ಯ ಬಿಡುಗಡೆಗೊಂಡಿರುವ ಈ ಫೋಟೋಗಳ ಆಧಾರದ ಮೇಲೆ ಈ ಬೈಕ್ ನ ಮೌಲ್ಯವನ್ನು ಸಹ ಅಂದಾಜಿಸಬಹುದಾಗಿದೆ.

automobili.infinitiಗೆ ಪ್ರಕಟಿಸಿರುವ ಈ ಭಾವಚಿತ್ರಗಳು ರಾಯಲ್ ಎನ್ಫಿಲ್ದ್ ನ ಅಧಿಕೃತ ಕಾನ್ಫಿಗರೆಶನ್ ಸೆಕ್ಷನ್ ನಲ್ಲಿ ಸಿಕ್ಕ ಬೈಕ್ ನ ಸ್ಕ್ರೀನ್ ಶಾಟ್ ಗಳಾಗಿವೆ. ಇವುಗಳಲ್ಲಿನ ಒಂದು ಫೋಟೋ Royal Enfield Meteor 350 Fireball 1,68,550 ರೂ. ಎಕ್ಸ್-ಷೋರೂಮ್ ಪ್ರೈಸ್ ನೊಂದಿಗೆ ಪ್ರಕಟಿಸಲಾಗಿದೆ. ಈ ಬೆಲೆಯಲ್ಲಿ ಕೆಲ ಎಕ್ಸಸರಿಗಳ ಬೆಲೆ ಶಾಮೀಲಾಗುವ ಸಾಧ್ಯತೆ ಇದೆ. ಉದಾಹರಣೆಗಾಗಿ ಟಿಂಟೆಡ್ ಫ್ಲೈಸ್ಕ್ರೀನ್-ಇದನ್ನು ಬೈಕ್ ಜೊತೆಗೆ ತೋರಿಸಲಾಗಿದ್ದು, ಇದರ ಬೆಲೆ 1750 ರೂ. ಇದೆ.

Read More