Home> India
Advertisement

ಈಗ ಅಮೆರಿಕಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ- ಪ್ರಧಾನಿ ಮೋದಿ

ಈಗ ಅಮೆರಿಕಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಿ ಇಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಾ ಹೇಳಿದರು. ಕಳೆದ ವಾರ ಅವರು ಮಾಡಿದ ಭಾಷಣದಲ್ಲಿ ರಾಷ್ಟ್ರದ ಭಾಷಾ ವೈವಿಧ್ಯತೆಯ ಬಗ್ಗೆ ಉಲ್ಲೇಖಗಳನ್ನು ಸೇರಿಸಿದ್ದಾರೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಾಚೀನ ತಮಿಳು ಕವಿಯೊಬ್ಬರನ್ನು ಉಲ್ಲೇಖಿಸಿದ್ದರು.  

 ಈಗ ಅಮೆರಿಕಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ- ಪ್ರಧಾನಿ ಮೋದಿ

ನವದೆಹಲಿ: ಈಗ ಅಮೆರಿಕಾದ್ಯಂತ ತಮಿಳು ಭಾಷೆ ಪ್ರತಿಧ್ವನಿಸುತ್ತಿದೆ ಎಂದು ಪ್ರಧಾನಿ ಇಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡುತ್ತಾ ಹೇಳಿದರು. ಕಳೆದ ವಾರ ಅವರು ಮಾಡಿದ ಭಾಷಣದಲ್ಲಿ ರಾಷ್ಟ್ರದ ಭಾಷಾ ವೈವಿಧ್ಯತೆಯ ಬಗ್ಗೆ ಉಲ್ಲೇಖಗಳನ್ನು ಸೇರಿಸಿದ್ದಾರೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಾಚೀನ ತಮಿಳು ಕವಿಯೊಬ್ಬರನ್ನು ಉಲ್ಲೇಖಿಸಿದ್ದರು.  

ಐಐಟಿಯ ವಾರ್ಷಿಕ ಸಂಸ್ಥೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚೆನ್ನೈ ಗೆ ಆಗಮಿಸಿದ ಪ್ರಧಾನಿ ಮೋದಿ 'ತಮಿಳು ಭಾಷೆ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಅದನ್ನು ಎಲ್ಲರಿಗೂ ಕಲಿಸುವ ನಿಟ್ಟಿನಲ್ಲಿ ತಾವು ಅದರ ಉಲ್ಲೇಖ ಮಾಡಿರುವುದಾಗಿ ಹೇಳಿದರು. 'ನಾನು ಅಮೆರಿಕಾದಲ್ಲಿ ತಂಗಿದ್ದಾಗ, ನಾನು ಒಮ್ಮೆ ತಮಿಳು ಭಾಷೆಯಲ್ಲಿ ಮಾತನಾಡಿದ್ದೇನೆ ಮತ್ತು ಇದು ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂದು ಎಲ್ಲರಿಗೂ ಹೇಳಿದೆ. ಇಂದು ತಮಿಳು ಭಾಷೆ ಇಡೀ ಅಮೆರಿಕಾದಲ್ಲಿ ಪ್ರತಿಧ್ವನಿಸುತ್ತದೆ' ಎಂದು ಹೇಳಿದರು.

ಈಗ ಪ್ರಧಾನಿ ಮೋದಿ ಅಮೇರಿಕಾದಿಂದ ಹಿಂದಿರುಗಿದ ನಂತರ ಭಾರತದಲ್ಲಿನ ಭಾಷಾ ವೈವಿದ್ಯತೆ ಬಗ್ಗೆ ಮೂರು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಶುಕ್ರವಾರದಂದು ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡುವಾಗ, ಪ್ರಧಾನ ಮಂತ್ರಿ ಸಾರ್ವತ್ರಿಕ ಭ್ರಾತೃತ್ವದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಮೂರು ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ತಮಿಳು ಕವಿ ಕಾನಿಯನ್ ಪುಂಗುಂದ್ರನಾರ್ ಅವರನ್ನು ಉಲ್ಲೇಖಿಸಿದ್ದರು.

ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಭಾರತದಲ್ಲಿ ಇಂಗ್ಲಿಷ್‌ನಲ್ಲಿ ವ್ಯವಹಾರ ನಡೆಸಲು ಅನುಕೂಲಕರವಾಗಿದೆ ಎಂದು ಹೇಳಿದ್ದಲ್ಲದೆ. ಇಂತಹ ಭಾಷಾ ನಮ್ಯತೆ ಸಂಭಾವ್ಯ ಹೂಡಿಕೆದಾರರಿಗೆ ವಿಶ್ವಾಸವನ್ನು ನೀಡಿದೆ ಎಂದು ಹೇಳಿದ್ದರು. ಅದಕ್ಕೂ ಕೆಲವೇ ದಿನಗಳ ಮೊದಲು ಪ್ರಧಾನಿ ಮೋದಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ  50,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಶತಮಾನಗಳಿಂದ ನಮ್ಮ ರಾಷ್ಟ್ರವು ಹಲವಾರು ಭಾಷೆಗಳ ಸಹಬಾಳ್ವೆಯೊಂದಿಗೆ ಪ್ರಗತಿ ಸಾಧಿಸಿದೆ ಎಂದಿದ್ದರು.   

Read More