Home> India
Advertisement

Baba Ka Dhaba:ಆತ್ಮಹತ್ಯೆಗೆ ಪ್ರಯತ್ನಿಸಿದ ಮಾಲೀಕ, ಆಸ್ಪತ್ರೆಗೆ ದಾಖಲು

 81 ವರ್ಷದ ಬಾಬಾ ಕಾ ಧಾಬಾ ಮಾಲೀಕ ಕಾಂತಾ ಪ್ರಸಾದ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಈಗ ಅವರನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Baba Ka Dhaba:ಆತ್ಮಹತ್ಯೆಗೆ ಪ್ರಯತ್ನಿಸಿದ ಮಾಲೀಕ, ಆಸ್ಪತ್ರೆಗೆ ದಾಖಲು

ನವದೆಹಲಿ:  81 ವರ್ಷದ ಬಾಬಾ ಕಾ ಧಾಬಾ ಮಾಲೀಕ ಕಾಂತಾ ಪ್ರಸಾದ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಈಗ ಅವರನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಗುರುವಾರ ರಾತ್ರಿ 11.15 ಕ್ಕೆ ಪ್ರಸಾದ್ ಅವರನ್ನು ಅಲ್ಲಿಗೆ ದಾಖಲಿಸಲಾಗಿದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಪೊಲೀಸರು ಆಸ್ಪತ್ರೆಗೆ ತಲುಪಿ ಎಂಎಲ್ ಸಿ (ಮೆಡಿಕೋ-ಲೀಗಲ್ ಕೇಸ್) ಸಂಗ್ರಹಿಸಿದರು, ಇದು ಮದ್ಯ ಸೇವನೆ ಮತ್ತು ನಿದ್ರಾ ಮಾತ್ರೆಗಳಿಂದಾಗಿ ಪ್ರಜ್ಞಾಹೀನತೆಯಾಗಿರುವ ಸಾಧ್ಯತೆ ಇದೆ" ಎಂದು ಉಪ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಠಾಕೂರ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮೋಸ ಹೋದರೆ ಡಾಬವಾಲೆ ಬಾಬಾ, ಯುಟ್ಯೂಬರ್ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕಾಂತಾ ಪ್ರಸಾದ್

ತಂದೆ ಮಧ್ಯ ಮತ್ತು ನಿದ್ರೆಯ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ ಎಂದು ಕಾಂತ ಪ್ರಸಾದ್ ಅವರ ಪುತ್ರ ಕರಣ್ ಪೊಲೀಸರಿಗೆ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರ ಪತ್ನಿ ಬಾದಾಮಿ ದೇವಿ ಅವರು ತಮ್ಮ ಅಂಗಡಿಯಲ್ಲಿ ಪ್ರಜ್ಞೆ ತಪ್ಪಿದ್ದಾರೆ ಎಂದು ಹೇಳಿದರು.'ಅವರು ಏನು ತಿನ್ನುತ್ತಿದ್ದರು, ಏನು ಸೇವಿಸಿದರು ಎಂದು ನನಗೆ ತಿಳಿದಿಲ್ಲ. ಅವರು ಪ್ರಜ್ಞೆ ತಪ್ಪಿದ ನಂತರ ಅವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ನಮಗೆ ಏನನ್ನೂ ಹೇಳಿಲ್ಲ. ಅವರು ಏನು ಯೋಚಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ" ಎಂದು ಕಾಂತಾ ಪ್ರಸಾದ್ ಅವರ ಪತ್ನಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

'ಬಾಬಾ ಕಾ ಧಾಬಾ (Baba Ka Dhaba) ರಸ್ತೆಬದಿಯ ಉಪಾಹಾರ ಗೃಹ ಕಳೆದ ವರ್ಷ ಕಾಂತಾ ಪ್ರಸಾದ್ ಕಣ್ಣೀರು ಸುರಿಸುತ್ತಾ, ತನ್ನ ಹಣಕಾಸಿನ ತೊಂದರೆಗಳನ್ನು ಹಂಚಿಕೊಂಡಿದ್ದರು, ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಇವರಿಗೆ ನೆರವಿನ ಮಹಾಪೂರವೇ ಹರಿದುಬಂದಿತ್ತು. ಇದಾದ ನಂತರ ಅವರು ರೆಸ್ಟೋರೆಂಟ್ ಒಂದನ್ನು ತೆರೆದಿದ್ದರು, ಆದರೆ ಶೀಘ್ರದಲ್ಲೇ ಜನಸಂದಣಿ ಅಲ್ಲಿಗೆ ಬರುವುದು ಕಡಿಮೆಯಾಯಿತು. ಕೊನೆಗೆ ಅವರು ಎಂದಿನಂತೆ ತಮ್ಮ ರಸ್ತೆ ಬದಿಯ ಡಾಬಾವನ್ನು ಆರಂಭಿಸಿದರು.

"ನಾನು ಫೆಬ್ರವರಿ 15 ರಂದು ರೆಸ್ಟೋರೆಂಟ್ ಅನ್ನು ಮುಚ್ಚಿದೆ. ಇದನ್ನು ನಡೆಸಲು ಸುಮಾರು 1 ಲಕ್ಷ ಬೇಕಾಯಿತು, ಆದರೆ ಆದಾಯವು ತುಂಬಾ ಕಳಪೆಯಾಗಿದೆ" ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Read More