Home> India
Advertisement

The Burning Train ಆಗಿ ಮಾರ್ಪಟ್ಟ ದೆಹಲಿ-ಸಹಾರನ್ಪುರ್ ರೈಲು, ಧಗ-ಧಗನೆ ಹೊತ್ತಿ ಉರಿದ ಮೂರು ಬೋಗಿಗಳು

The Burning Train: ಸಹಾರನ್ಪುರ್ ನಿಂದ ದೆಹಲಿಗೆ (Saharanpur To Delhi) ತೆರಳುತ್ತಿದ್ದ  ಪ್ಯಾಸೆಂಜರ್ ರೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ರೈಲಿನ ಮೂರು ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿವೆ.

The Burning Train ಆಗಿ ಮಾರ್ಪಟ್ಟ ದೆಹಲಿ-ಸಹಾರನ್ಪುರ್ ರೈಲು, ಧಗ-ಧಗನೆ ಹೊತ್ತಿ ಉರಿದ ಮೂರು ಬೋಗಿಗಳು

Burning Train - ಸಹಾರನ್ಪುರ್ ನಿಂದ ದೆಹಲಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ (Fire In Passenger Train) ಮೀರತ್‌ನ (Merut) ದೌರಾಲಾ ನಿಲ್ದಾಣದಲ್ಲಿ (Doulara Station) ಬೆಂಕಿ ಕಾಣಿಸಿಕೊಂಡಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.  ಆದರೆ, ಬೆಂಕಿ ಹೊತ್ತಿಕೊಂಡ ಕೋಚ್‌ನ ಪ್ರಯಾಣಿಕರು ತಕ್ಷಣ ಹೊರಬಂದ ಕಾರಣ ಈ ಯಾವುದೇ ದೊಡ್ಡ ಹಾನಿ ಸಂಭವಿಸದೆ ಇರುವುದು ಸಮಾಧಾನಕರ ಸಂಗತಿಯಾಗಿದೆ. ಅಂದರೆ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

ಶನಿವಾರ ಬೆಳಗ್ಗೆ ಮೀರತ್‌ನ ದೌರಾಲಾ ನಿಲ್ದಾಣದಲ್ಲಿ ಸಹರಾನ್‌ಪುರದಿಂದ ದೆಹಲಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಚಿಕ್ಕ ಸ್ಫೋಟದಿಂದ ಕೋಚ್‌ನಿಂದ ಹೊಗೆ ಹೊರಬರಲಾರಂಭಿಸಿದ ತಕ್ಷಣ ಪ್ರಯಾಣಿಕರು ಕೋಚ್‌ನಿಂದ ಹೊರಬರಲು ಆರಂಭಿಸಿದ್ದಾರೆ. ರೈಲ್ವೇ ಅಧಿಕಾರಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದೃಷ್ಟವಶಾತ್, ರೈಲು ದೌರಾಲಾ ನಿಲ್ದಾಣದಲ್ಲಿ ನಿಂತಿರುವ ಕಾರಣ ಪ್ರಯಾಣಿಕರು ಸುಲಭವಾಗಿ ರೈಲಿನಿಂದ ಹೊರಬಂದಿದ್ದಾರೆ.  ವಿಶೇಷವೆಂದರೆ ರೈಲಿನಿಂದ  ಬೆಂಕಿ ಹೊತ್ತಿಕೊಂಡ ಕೋಚ್‌ಗಳನ್ನು (Train Incident) ಬೇರ್ಪಡಿಸಲು ಪ್ರಯಾನಿಕರೆ ಬೋಗಿಗಳನ್ನು ತಳ್ಳಿದ್ದಾರೆ.

ಇದನ್ನೂ ಓದಿ-Weired Marriage:36ರ ಹರೆಯದ ವಿಧವೆಯ ಪ್ರೇಮದಲ್ಲಿ ಬಿದ್ದ 86 ವಯಸ್ಸಿನ ನಿವೃತ್ತ PWD ಅಧಿಕಾರಿ

ಇನ್ನೊಂದೆಡೆ ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಪ್ರಯಾಣಿಕರ ಸಹಾಯದಿಂದ ರೈಲಿನ ಹೊತ್ತಿಕೊಂಡ ಬೋಗಿಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಇತರ ಸುರಕ್ಷಿತ ಬೋಗಿಗಳಿಂದ ಬೇರ್ಪಡಿಸಿದ್ದಾರೆ. ರೈಲು ಬೆಳಗ್ಗೆ 7.10ಕ್ಕೆ ದೌರಾಲಾ ನಿಲ್ದಾಣ ತಲುಪಿತ್ತು ಎಂಬುದು ಇಲ್ಲಿ ಗಮನಾರ್ಹ. ಎಂದಿನಂತೆ ನಿತ್ಯ ಪ್ರಯಾಣಿಕರು ರೈಲು ಬರುವುದನ್ನೇ ಕಾಯುತ್ತಿದ್ದರು. ಈ ರೈಲಿನ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗಕ್ಕಾಗಿ ದೆಹಲಿಗೆ ತೆರಳುತ್ತಾರೆ.

ಇದನ್ನೂ ಓದಿ-Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು

ಮಾಹಿತಿ ಪ್ರಕಾರ ರೈಲಿನ ಬ್ರೇಕ್ ಜಾಮ್ ನಿಂದಾಗಿ ಮೊದಲೇ ರೈಲಿನಿಂದ ವಾಸನೆ ಬರುತ್ತಿತ್ತು ಮತ್ತು ಈ ಬಗ್ಗೆ ಪ್ರಯಾಣಿಕರು ಚಾಲಕನಿಗೆ ತಿಳಿಸಲು ಪ್ರಯತ್ನಿಸಿದ್ದರು ಕೂಡ ಅವರ ಪ್ರಯತ್ನ ಫಲಿಸಿರಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ಸೀಟಿನಿಂದ ಹೊಗೆ ಬರಲಾರಂಭಿಸಿದ್ದು, ನಂತರ ಬೆಂಕಿ ಹೊತ್ತುಕೊಂಡಿದೆ. ಈ ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನಕರ ಸಂಗತಿ.

ಇದನ್ನೂ ಓದಿ-Russia-Ukrain War ನಿಂದ ನಿಮ್ಮ ಜೇಬಿನ ಮೇಲೆ ಏನು ಪ್ರಭಾವ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More