Home> India
Advertisement

TET Validity Extended : TET ಅರ್ಹತಾ ಪ್ರಮಾಣಪತ್ರದ ವ್ಯಾಲಿಡಿಟಿಯನ್ನ 'ಲೈಫ್ ಟೈಮ್' ವರೆಗೆ ವಿಸ್ತರಿಸಿದೆ ಸರ್ಕಾರ!

ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ 7 ವರ್ಷಗಳ ಕಾಲಾವಧಿ ಮುಗಿದಿರುವ ಅಭ್ಯರ್ಥಿಗಳಿಗೆ ಹೊಸ ಟಿಇಟಿ ಪ್ರಮಾಣಪತ್ರಗಳನ್ನು ಮರು ಮೌಲ್ಯಮಾಪನ ಮಾಡಲು ಅಥವಾ ನೀಡಲು ಸಚಿವರು ಸೂಚನೆ ನೀಡಿದ್ದಾರೆ.

TET Validity Extended : TET ಅರ್ಹತಾ ಪ್ರಮಾಣಪತ್ರದ ವ್ಯಾಲಿಡಿಟಿಯನ್ನ 'ಲೈಫ್ ಟೈಮ್' ವರೆಗೆ ವಿಸ್ತರಿಸಿದೆ ಸರ್ಕಾರ!

ನವದೆಹಲಿ : ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ಪಾಸ್ ಆದ ಪ್ರಶಿಕ್ಷಣಾರ್ಥಿಗಳ ಅರ್ಹತಾ ಪ್ರಮಾಣ ಪತ್ರದ ವ್ಯಾಲಿಡಿಟಿಯನ್ನ 7 ವರ್ಷದಿಂದ ಜೀವಮಾನ(ಲೈಫ್ ಟೈಮ್) ಅವಧಿಯವರೆಗೆ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೊಖ್ರಿಯಾಲ್​ ಘೋಷಣೆ ಮಾಡಿದ್ದಾರೆ.

2011ರಿಂದ ಜೀವಮಾನದವರೆಗೂ ಟಿಇಟಿ ಪ್ರಮಾಣ ಪತ್ರ(TET validity Extended) ಮಾನ್ಯವಾಗಿರಲಿದ್ದು, ಸರ್ಕಾರ ನಡೆಸುವ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಕೇವಲ 7 ವರ್ಷಗಳಿಗೆ ಮಾತ್ರ ಟಿಇಟಿ ಪ್ರಮಾಣ ಪತ್ರ ಸೀಮಿತವಾಗಿತ್ತು. ಅವಧಿ ಮುಗಿದರೆ ಮತ್ತೊಮ್ಮೆ ಪ್ರಶ್ನೆ ಎದುರಿಸಬೇಕಿತ್ತು. ಆದರೆ, ಸದ್ಯದ ನಿಯಮವನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ.

ಇದನ್ನೂ ಓದಿ : Baba Ramdev : ಯೋಗ ಗುರು ರಾಮದೇವಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್!

ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ 7 ವರ್ಷಗಳ ಕಾಲಾವಧಿ ಮುಗಿದಿರುವ ಅಭ್ಯರ್ಥಿಗಳಿಗೆ ಹೊಸ ಟಿಇಟಿ ಪ್ರಮಾಣಪತ್ರ(TET Certificate)ಗಳನ್ನು ಮರು ಮೌಲ್ಯಮಾಪನ ಮಾಡಲು ಅಥವಾ ನೀಡಲು ಸಚಿವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : BSNL: ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದ ಬಿಎಸ್ಎನ್ಎಲ್

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಮೇಶ್​ ಪೊಖ್ರಿಯಾಲ್(Ramesh Pokhriyal)​, ಬೋಧನಾ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಭಿಕ್ಷೆ ಬೇಡುತ್ತಿದ್ದ ವೃದ್ಧ ಮಹಿಳೆಯ ಬಳಿಯಿದ್ದ ಹಣ ಎಷ್ಟೆಂದು ತಿಳಿದರೆ ಶಾಕ್ ಆಗಬಹುದು!

ಶಿಕ್ಷಕರ ಅರ್ಹತಾ ಪರೀಕ್ಷೆ(Teachers Eligibility Test)ಯು ಒಬ್ಬ ವ್ಯಕ್ತಿಯು ಶಾಲೆಗಳಲ್ಲಿ ಶಿಕ್ಷಕನಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಅಗತ್ಯವಾದ ಅರ್ಹತೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ : Jammu Kashmir- ಪುಲ್ವಾಮಾದಲ್ಲಿ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಇದನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (NCTE) 2011, ಫೆಬ್ರವರಿ 11ರ ಮಾರ್ಗಸೂಚಿಯಂತೆ ಟಿಇಟಿಯನ್ನು ಆಯಾ ರಾಜ್ಯ ಸರ್ಕಾರಗಳು ನಡೆಸಲಿವೆ ಮತ್ತು ಟಿಇಟಿ ಪ್ರಮಾಣಪತ್ರದ ಸಿಂಧುತ್ವದ ಅವಧಿಯನ್ನು ಟಿಇಟಿ ಉತ್ತೀರ್ಣರಾದ ದಿನಾಂಕದಿಂದ 7 ವರ್ಷಗಳವರೆಗೆ ಈ ಹಿಂದೆ ನಿಗದಿ ಮಾಡಲಾಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More